Rain Alert | ಆಲಮಟ್ಟಿ ಡ್ಯಾಂನಿಂದ 1.76 ಲಕ್ಷ, ನಾರಾಯಣಪುರ ಜಲಾಶಯದಿಂದ 1.90 ಲಕ್ಷ ಕ್ಯುಸೆಕ್‌ ನೀರು ನದಿಗೆ

Public TV
1 Min Read
almatti dam

– ಗುಜರಾತ್‌ಗೆ ಈಗ ಚಂಡಮಾರುತ ಭೀತಿ
– ಬಾಗಲಕೋಟೆ, ರಾಯಚೂರಿಗೆ ಪ್ರವಾಹ ಭೀತಿ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಭಾರೀ ಮಳೆ (Heavy Rain In Maharashtra) ಕಾರಣ ಬೆಳಗಾವಿ ಭಾಗದ ನದಿಗಳೆಲ್ಲಾ ಉಕ್ಕಿಹರಿಯುತ್ತಿವೆ. ಈ ಬೆನ್ನಲ್ಲೇ ಆಲಮಟ್ಟಿ ಜಲಾಶಯದಿಂದ ಇನ್ನೂ ಹೆಚ್ಚಿನ ನೀರನ್ನು ಬಿಡುವಂತೆ ಮಹಾರಾಷ್ಟ್ರ ನೀರಾವರಿ ಇಲಾಖೆ ಮನವಿ ಮಾಡಿದೆ.

ಮಹಾರಾಷ್ಟ್ರ ಮನವಿ ಮಾಡಿರುವ ಕಾರಣ, ಕೃಷ್ಣಾ ನದಿ (Krishna River) ಪಾತ್ರದಲ್ಲಿ 5 ದಿನ ಆರೆಂಜ್‌ ಅಲರ್ಟ್ ಘೋಷಣೆ ಮಾಡಲಾಗಿದೆ. ಸದ್ಯ ಆಲಮಟ್ಟಿ ಜಲಾಶಯದಿಂದ (Almatti Dam) 1.76 ಲಕ್ಷ ಕ್ಯುಸೆಕ್‌ ನೀರು, ನಾರಾಯಣಪುರ ಡ್ಯಾಂನಿಂದ (Narayanapura Dam) 1.90 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದನ್ನೂ ಓದಿ: ಯುಜಿ ನೀಟ್ & ಯುಜಿ ಸಿಇಟಿ-24 | ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟ – ಆ.31 ರಿಂದ ʻಚಾಯ್ಸ್ʼ ಆಯ್ಕೆ!

Narayanapura Dam

ನಿರಂತರ ಮಳೆ ಹಿನ್ನೆಲೆ ಬಾಗಲಕೋಟೆ, ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಯಾದಗಿರಿಯ ಗುರುಸಣಗಿ ಬ್ಯಾರೇಜ್‌ನಿಂದ ಭೀಮಾನದಿಗೆ 1 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಇದರಿಂದ ಭೀಮಾತೀರದ ವೀರಾಂಜನೇಯ, ಕಂಗಳೇಶ್ವರ ದೇವಾಲಯಗಳು ಮುಳುಗಡೆ ಆಗಿವೆ.

ಅಲ್ಲದೇ ಅಫಜಲಪುರದ ಘತ್ತರಗಾ ಸೇತುವೆ ಜಲಾವೃತವಾಗಿವೆ. ಹಾಸನದ ಸಕಲೇಶಪುರ ಭಾಗದಲ್ಲಿ ಮತ್ತೆ ಗುಡ್ಡಕುಸಿತದ ಭೀತಿ ಆವರಿಸಿದೆ. ಇನ್ನೂ ಶುಕ್ರವಾರ ಸಂಜೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲೂ ಮಳೆಯಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಇದನ್ನೂ ಓದಿ: `ಕರಿಯಾ’ ಸಿನಿಮಾ ರೀ ರಿಲೀಸ್ ವೇಳೆ ಪುಂಡಾಟಿಕೆ – ಬೆಂಗಳೂರಲ್ಲಿ ಕೆಲ ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದ ಪೊಲೀಸ್!

Gujarat floods

ಅತ್ತ, ಪ್ರವಾಹದಿಂದ (Gujarat floods) ತತ್ತರಿಸಿರುವ ಗುಜರಾತ್‌ಗೆ ಈಗ ಚಂಡಮಾರುತ ಭೀತಿ ಎದುರಾಗಿದೆ. ಅರಬ್ಬಿ ಸಮುದ್ರದಲ್ಲಿ ರೂಪುಗೊಳ್ತಿರುವ ಚಂಡಮಾರುತ ಮುಂದಿನ 12 ಗಂಟೆಯಲ್ಲಿ ಕಛ್ ತೀರಕ್ಕೆ ಅಪ್ಪಳಿಸುವ ಸಂಭವ ಇದೆ. ಹೀಗಾಗಿ ತೀರ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಉತ್ಸವವನ್ನು ಜನೋತ್ಸವವನ್ನಾಗಿ ಆಚರಿಸಿ: ಪ್ರಿಯಾಂಕ್‌ ಖರ್ಗೆ

Share This Article