ಕಲಬುರಗಿ: ಅಫಜಲಪುರ ಕ್ಷೇತ್ರದ ಜನರು ಮನಸ್ಸು ಮಾಡಿದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಸಿಐಡಿ ಅಧಿಕಾರಿಗಳನ್ನು ತಳ್ಳಿ ಪರಾರಿಯಾಗಿದ್ದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳನ್ನು ತಳ್ಳಿ ಪರಾರಿಯಾಗಿದ್ದ ಕಿಂಗ್‍ಪಿನ್ ಆರ್.ಡಿ. ಪಾಟೀಲ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವನ್ನು ಮಾಡುವುದರ ಮೂಲಕ ಪತ್ತೆಯಾಗಿದ್ದಾನೆ. ಆಜ್ಞಾತ ಸ್ಥಳದಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ತನ್ನ ಅಭಿಮಾನಿಗಳಿಗೆ ವಿಶೇಷ ನಮಸ್ಕಾರಗಳು ತಿಳಿಸಿದ್ದಾನೆ.
ವೀಡಿಯೋದಲ್ಲಿ ಏನಿದೆ?: ಕಳೆದ 9 ತಿಂಗಳಿನಿಂದ ನನ್ನ ಮೇಲೆ ರಾಜಕೀಯ ಕುತಂತ್ರ ಮಾಡಿ, ಹಗರಣದಲ್ಲಿ ಸಿಲುಕಿಸಲಾಗಿದೆ. ನನ್ನ ಸಾಮಾಜಿಕ ಸೇವೆ ನೋಡಿ ರಾಜಕೀಯಕ್ಕೆ ಬರಬಹುದೆಂದು ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಕೆಲವು ಸಿಐಡಿ ಅಧಿಕಾರಿಗಳು ರಾಜಕೀಯ ಮುಖಂಡರ ಕೈಗೊಂಬೆಯಾಗಿದ್ದು, ನನ್ನ ಮೇಲೆ ಕುತಂತ್ರ ಹೆಣೆದಿದ್ದಾರೆ ಎಂದ ಅವರು, ಯಾರು ಏನೇ ಕುತಂತ್ರ ಮಾಡಿದರು. ನನ್ನ ಸಾಮಾಜಿಕ ಸೇವೆ ನಿಲ್ಲುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ನನ್ನ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ನನ್ನನ್ನು ಬಗ್ಗು ಬಡೆಯಲು ಕೆಲವು ರಾಜಕೀಯ ಮುಖಂಡರು ಮುಂದಾಗಿದ್ದಾರೆ. ಇಂತಹ ಹತ್ತು ಪ್ರಕರಣಗಳು ನನ್ನ ಹೆಗಲ ಮೇಲೆ ಬಿದ್ದರೂ, ನಾನಂತೂ ನನ್ನ ಸಾಮಾಜಿಕ ಸೇವೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ನಾನು ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಯತ್ನಿಸಿಲ್ಲ. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ ಜನರಿಗೆ ಒಂದು ಮಾತನ್ನು ಹೇಳಲು ಬಯಸುತ್ತೇನೆ. ನಮ್ಮ ಅಫಜಲಪುರ ಕ್ಷೇತ್ರದ ಜನರು ಮನಸ್ಸು ಮಾಡಿದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.
ಸಿಐಡಿ ಅಧಿಕಾರಿಗಳು ನನ್ನನ್ನು ಸುಧೀರ್ಘ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅವರಿಗೆ ನಾನು ಸಂಪೂರ್ಣ ಸಹಕಾರ ನೀಡಿದ್ದೇನೆ. ಸಿಐಡಿ ಅಧಿಕಾರಿಗಳು ಮನೆಗೆ ಬಂದಾಗ, ನಾನು ಹೊರಗಡೆ ಹೋಗಿದ್ದೆ. ಹೀಗಾಗಿ ನಾನು ಯಾವುದೇ ಅಧಿಕಾರಿಯನ್ನು ತಳ್ಳಿ ಓಡಿ ಹೋಗಿದ್ದೇನೆ ಎಂಬುದು ಶುದ್ಧ ಸುಳ್ಳು ಎಂದರು. ಇದನ್ನೂ ಓದಿ: ಇಂದು ಸಿದ್ದಗಂಗಾ ಶ್ರೀಗಳ 4ನೇ ಪುಣ್ಮಸ್ಮರಣೆ- ಬೆಳಗ್ಗೆ 5 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭ
ಮಾಧ್ಯಮಗಳಲ್ಲಿ ಓಡಿ ಹೋಗಿದ್ದೇನೆ ಎಂಬ ವರದಿಗಳು ಪ್ರಸಾರವಾಗಿದ್ದು, ಸುಳ್ಳು ವರದಿ ಬಿಂಬಿಸಲಾಗಿದೆ. ನಾನು ಕಾನೂನಿನ ವಿರುದ್ಧ ನಡೆಯುವ ವ್ಯಕ್ತಿ ಅಲ್ಲ. ಈ ನೆಲದ ಕಾನೂನಿಗೆ ಗೌರವ ಕೊಡುವ ಮನುಷ್ಯ ಇದ್ದೇನೆ ಎಂದು ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಿಐಡಿ ಅಧಿಕಾರಿಗಳನ್ನು ನೂಕಿ ಪಿಎಸ್‌ಐ ಹಗರಣದ ಕಿಂಗ್‌ಪಿನ್ ಪರಾರಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k