Bengaluru CityDistrictsKarnatakaLatestLeading NewsMain Post

ಸವಾಲಿಗೆ ಜವಾಬ್ ವಾರ್‌ – ಡಿಕೆಶಿ ಜೊತೆ ತೊಡೆ ತಟ್ಟಿದವರೆಲ್ಲ ಇಕ್ಕಟ್ಟಿನಲ್ಲಿ ಸಿಲುಕುತ್ತಿದ್ದಾರಾ?

ಬೆಂಗಳೂರು: ಡಿಕೆಶಿ ಜೊತೆ ತೊಡೆ ತಟ್ಟಿದವರೆಲ್ಲ ಈಗ ಇಕ್ಕಟ್ಟಿನಲ್ಲಿ ಸಿಲುಕುತ್ತಿದ್ದು, ತನ್ನ ವಿರುದ್ಧ ತೊಡೆ ತಟ್ಟಿದವರನ್ನು ಎಕ್ಸ್ ಪೋಸ್ ಮಾಡಲು ಡಿಕೆ ಶಿವಕುಮಾರ್‌ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

ಹೌದು. ಈ ಮೊದಲ ರಾಜಕೀಯವಾಗಿ ನಾಯಕರ ಮಧ್ಯೆ ಆರೋಪ, ಪ್ರತ್ಯಾರೋಪ, ವಾಗ್ದಾಳಿ ನಡೆಯುತ್ತಿದ್ದವು. ಆದರೆ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ʼಸವಾಲಿಗೆ ಜವಾಬ್ʼ ಎಂಬ ಪೊಲಿಟಿಕ್ಸ್ ಶುರುವಾಗಿದೆ.

ʼಸವಾಲಿಗೆ ಜವಾಬ್‌ʼ ಹೋರಾಟದಲ್ಲಿ ಕಾಕತಾಳಿಯವೋ ತಂತ್ರಗಾರಿಕೆಯೋ ಗೊತ್ತಿಲ್ಲ. ಆದರೆ ಡಿಕೆಶಿ ಈ ಹೋರಾಟದಲ್ಲಿ ಜಯವನ್ನು ಸಾಧಿಸುತ್ತಿದ್ದಾರೆ.

ವಿಧಾನಸಭಾ ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಅವರನ್ನು ಚುನಾವಣೆ ಅಖಾಡದಲ್ಲಿ ಸೋಲಿಸುವುದಾಗಿ ಡಿಕೆಶಿ ಶಪಥ ಮಾಡಿದ್ದರು. ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಸೋತರೆ ಪಕ್ಷೇತರವಾಗಿ ಸ್ಪರ್ಧಿಸಿದ್ದ ಶರತ್‌ ಬಚ್ಚೇಗೌಡ ಜಯಗಳಿಸಿದ್ದರು. ಇದನ್ನೂ ಓದಿ: ಡಿಕೆಶಿ ಬಂಡವಾಳ ಬಿಚ್ಚಿಡ್ತೀನಿ, ಕೊಳಕಿನ ಜಾಲ ಬಿಡಿಸ್ತೀನಿ: ಅಶ್ವಥ್ ನಾರಾಯಣ ಕಿಡಿ

ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯ ಬಳಿಕ ಉಪಚುನಾವಣೆಯ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್‌ ಮಧ್ಯೆ ಭಾರೀ ವಾಗ್ದಾಳಿ ನಡೆದಿತ್ತು. ಆದರೆ ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ‌ನೀಡಿದ್ದರು.

ಹಿಜಬ್‌ ಗಲಾಟೆಯ ಸಂದರ್ಭದಲ್ಲಿ ಶಿವಮೊಗ್ಗದ ಕಾಲೇಜಿನಲ್ಲಿ ಹಾರಿಸಲಾದ ಕೇಸರಿ ಧ್ವಜ ಪ್ರಕರಣ ದೇಶದ್ಯಾಂತ ಸುದ್ದಿ ಮಾಡಿತ್ತು. ಈ ವೇಳೆ ಈಶ್ವರಪ್ಪಗೆ ವಿಧಾನಸಭೆಯಲ್ಲಿ ಸವಾಲು ಹಾಕಿ ಎಲ್ಲಿ ಕಳಿಸಬೇಕು‌ ಕಳುಹಿಸ್ತೀವಿ ಎಂದು ಡಿಕೆಶಿ ಗುಡುಗಿದ್ದರು. ಇದಾದ ಕೆಲ ತಿಂಗಳಿನಲ್ಲೇ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು: ಡಿ.ಕೆ.ಶಿವಕುಮಾರ್

ರಾಮನಗರದ ಕಾರ್ಯಕ್ರಮದಲ್ಲೇ ಅಶ್ವಥ್‌ ನಾರಾಯಣ ಮತ್ತು ಡಿಕೆ ಸುರೇಶ್‌ ಮಧ್ಯೆ ಜಟಾಪಟಿ ನಡೆದಿತ್ತು. ಇದಾದ ಬಳಿಕ ಅಶ್ವಥ್‌ ನಾರಾಯಣ ಗಂಡಸ್ತನದ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಗಂಡಸ್ತನದ ಬಗ್ಗೆ ಮಾತನಾಡಿದ್ದ ಸಚಿವ ಅಶ್ವಥ್‌ ನಾರಾಯಣ್ ವಿರುದ್ಧ ಡಿಕೆಶಿ ಸವಾಲು ಹಾಕಿದ್ದರು. ಈಗ ಪಿಎಸ್‌ಐ ಅಕ್ರಮ ಪ್ರಕರಣದಲ್ಲಿ ಅಶ್ವಥ್‌ ನಾರಾಯಣ್ ಸಂಬಂಧಿಕರ ಮೇಲೆ ಗಂಭೀರ ಆರೋಪ ಬಂದಿದೆ.

Leave a Reply

Your email address will not be published.

Back to top button