ಬೆಂಗಳೂರು: ಈ ಬಾರಿ ಅಧಿಕಾರಕ್ಕೆ ಬರಲೇಬೇಕು ಅಂತ ಪಣತೊಟ್ಟಿರುವ ಕಾಂಗ್ರೆಸ್, ಕೊನೆಗೂ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಧ್ಯೆ 3 ವರ್ಷಗಳ ಸತತ ಹಗ್ಗ ಜಗ್ಗಾಟದ ನಂತರ ಈಗ ಪಟ್ಟಿ ರಿಲೀಸ್ ಆಗಿದ್ದು, ಪಟ್ಟಿ ಹನುಮಂತನ ಬಾಲದ ರೀತಿ ಇದೆ.
Advertisement
ಕೆಪಿಸಿಸಿಗೆ 109 ಪ್ರಧಾನ ಕಾರ್ಯದರ್ಶಿಗಳು, 40 ಉಪಾಧ್ಯಕ್ಷರನ್ನು ನೇಮಕ ಮಾಡಿ ಎಐಸಿಸಿ ಆದೇಶಿಸಿದೆ. ಎಲ್ಲಾ ರೀತಿಯ ಸಮೀಕರಣದ ತಂತ್ರ ಉಪಯೋಗಿಸಿರೋ ಎಐಸಿಸಿ ಅಳೆದ ತೂಗಿ ಲಿಸ್ಟ್ ರಿಲೀಸ್ ಮಾಡಿದೆ. 53 ಒಬಿಸಿ, 25 ಎಸ್‍ಸಿ, 4 ಎಸ್‍ಟಿ, 4 ಮಹಿಳೆ, 22 ಅಲ್ಪಸಂಖ್ಯಾತ, 19 ಲಿಂಗಾಯತ, 5 ರೆಡ್ಡಿ ಲಿಂಗಾಯತ, 16 ಒಕ್ಕಲಿಗ, ಇತರೆ ಸಮುದಾಯದ 4 ಮತ್ತು ಓರ್ವ ಲೈಂಗಿಕ ಅಲ್ಪಸಂಖ್ಯಾತರಿಗೂ ಜವಾಬ್ದಾರಿ ನೀಡಲಾಗಿದೆ. ಪಟ್ಟಿಯಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ.
Advertisement
Advertisement
ಡಿಕೆಶಿ ವಿರುದ್ಧ ಮಾತನಾಡಿದ್ದ ಅಶೋಕ್ ಪಟ್ಟಣ್, ಉಗ್ರಪ್ಪಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಮೂರು ಜನ ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ಎಲ್.ಹನುಮಂತಯ್ಯ, ನಾಸಿರ್ ಹುಸೇನ್‍ಗೆ ಉಪಾಧ್ಯಕ್ಷ ಹೊಣೆ ಕೊಟ್ಟಿದ್ದು, ಇತ್ತೀಚೆಗೆ ಪಕ್ಷ ಸೇರಿದ್ದ ಮಧು ಬಂಗಾರಪ್ಪಗೂ ಜವಾಬ್ದಾರಿ ಹೊರಿಸಲಾಗಿದೆ. ಆದರೆ ಸಿದ್ದರಾಮಯ್ಯ ಅತ್ಯಾಪ್ತ ಜಮೀರ್ ಅಹ್ಮದ್‍ಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಇದು ಅವರ ಆಪ್ತ ವಲಯದಲ್ಲಿ ಬೇಸರ ಮೂಡಿಸಿದೆ.