ಹಾವೇರಿ: ಕಾಂಗ್ರೆಸ್‌ನಲ್ಲಿ (Congress) ನಡೆಯುತ್ತಿರುವ ಕುರ್ಚಿ ಕಿತ್ತಾಟ ಈಗ ಸಮುದಾಯದ ತಿರುವು ಪಡೆದುಕೊಂಡಿದೆ. ಸಂವಿಧಾನದಲ್ಲಿ ಮಠಾಧೀಶರು ಹೇಳಿದ ತಕ್ಷಣ ಸಿಎಂ ಆಗಬೇಕು ಎನ್ನುವ ಅವಕಾಶ ಇದೆಯೇ ಎಂದು ಪ್ರಶ್ನಿಸುವ ಮೂಲಕ ಕಾಗಿನೆಲೆ ಶ್ರೀ( Sri Niranjanananda Puri Swamiji) ಪ್ರಶ್ನಿಸಿದ್ದಾರೆ.
ಡಿಕೆ ಶಿವಕುಮಾರ್ (DK Shivakumar) ಪರ ಆದಿಚುಂಚನಗಿರಿ ಶ್ರೀ ಮಾತನಾಡಿದ್ದಕ್ಕೆ ಪ್ರತಿಕ್ರಿಯಿಸಿದ ಕಾಗಿನೆಲೆ ನಿರಂಜನಾನಂದ ಸ್ವಾಮೀಜಿ, ಸಂವಿಧಾನದಲ್ಲಿ ಮುಖ್ಯಮಂತ್ರಿ ಬದಲಾವಣೆ, ಆಯ್ಕೆ ಮಾಡುವ ಸಂವಿಧಾನಿಕ ಅಧಿಕಾರ ಶಾಸಕರಿಗಿದೆ. ಶಾಸಕರು ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವುದನ್ನು ನಿರ್ಣಯ ಮಾಡುತ್ತಾರೆ. ಮಠಾಧೀಶರು ಹೇಳಿದ ತಕ್ಷಣ ಸಿಎಂ ಆಗಬೇಕು ಎನ್ನುವ ಅವಕಾಶ ಇದೆಯೇ ಎಂದು ಕೇಳಿದ್ದಾರೆ. ಇದನ್ನೂ ಓದಿ: ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು: ನಿರ್ಮಲಾನಂದನಾಥ ಸ್ವಾಮೀಜಿ ಶಂಖನಾದ
ಕಾಗಿನೆಲೆ ಶಾಖಾಮಠದ ತಿಂಥಣಿಯ ಸಿದ್ದರಾಮಾನಂದ ಪುರಿ ಶ್ರೀ ಪ್ರತಿಕ್ರಿಯಿಸಿ, ಸಿಎಂ ಬದಲಾವಣೆ ವಿಚಾರದಲ್ಲಿ ಮಠಾಧೀಶರ ಮಧ್ಯಪ್ರವೇಶ ಸೂಕ್ತವಲ್ಲ. ಮಧ್ಯಪ್ರವೇಶ ಮಾಡಿ, ಗೊಂದಲ ಸೃಷ್ಟಿಸುವುದು ಸರಿಯಲ್ಲ. ಸಿದ್ದರಾಮಯ್ಯನವರನ್ನು ಎಂದೂ ಕುರುಬ (Kuruba) ನಾಯಕ ಎಂದು ನೋಡಿಲ್ಲ. ಯಾವುದೇ ಮಠಾಧೀಶರು ರಾಜಕೀಯ ಮಾತನಾಡೋದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೋಕ್ಸೋ ಮೊದಲ ಕೇಸಲ್ಲಿ ಮುರುಘಾ ಶ್ರೀ ಖುಲಾಸೆ – ಕೋರ್ಟ್ ಆದೇಶದಲ್ಲಿ ಏನಿದೆ?
ನಾವು ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಯಾವಾಗಲೂ ಅವರ ಜೊತೆಗೆ ಇರುತ್ತೇವೆ. ಸಾಮಾಜಿಕ ನ್ಯಾಯದಲ್ಲಿ ಯಾವುದೇ ನಾಯಕರು ಮುಂದೆ ಬಂದರೆ ನಾವು ಇರುತ್ತೇವೆ. ರಾಜ್ಯದ ಜನರು ಗಮನಿಸುತ್ತಿದ್ದಾರೆ. ಸ್ವಾಮೀಜಿ ಜಾತಿ ಹಿನ್ನೆಲೆಯಲ್ಲಿ ಮಾತನಾಡಬಾರದಿತ್ತು. ಬೇರೆ ಸಮುದಾಯದ ಅವಮಾನಿದಂತೆ ಆಗಿದೆ.

