ನವದೆಹಲಿ: ಪವರ್ ಶೇರಿಂಗ್ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವೈರಾಗ್ಯದ ಮಾತನ್ನು ಆಡಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹೈಕಮಾಂಡ್ ಅಂಗಳಕ್ಕೆ ಚೆಂಡು ಎಸೆದರೆ ಡಿಕೆಶಿ ನಾನು ಹೈಕಮಾಂಡ್‌ನವರಿಗೆ ತೊಂದರೆ ಕೊಡಲು ಹೋಗುವುದಿಲ್ಲ ಎಂದಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ರಾಹುಲ್‌ಗಾಂಧಿ (Rahul Gandhi) ಅವರಿಗೆ ತೊಂದರೆ ಕೊಡಲು ಬಯಸುವುದಿಲ್ಲ. ನಾನು ಪಕ್ಷದ ಕಾರ್ಯಕರ್ತನಾಗಿಯೇ ಇರಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಾನು ಯಾರನ್ನು ಭೇಟಿ ಮಾಡಿಲ್ಲ. ವಿದೇಶದಿಂದ ರಾಹುಲ್ ಗಾಂಧಿ ನಿನ್ನೆ ಆಗಮಿಸಿದ್ದು ಅವರಿಗೆ ಈಗ ತೊಂದರೆ ನೀಡಲು ಹೋಗುವುದಿಲ್ಲ. ನಾನು ಪಕ್ಷದ ಕಾರ್ಯಕರ್ತನ್ನಾಗಿ ಇರಲು ಇಷ್ಟಪಡುತ್ತೇನೆ ಎಂದು ವೈರಾಗ್ಯದ ಮಾತನ್ನು ಆಡಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಗಾಳಿ ಗುಣಮಟ್ಟ ಕುಸಿತ – ಸೆನ್ಸರ್ ಅಳವಡಿಕೆಗೆ ಜಿಬಿಎ ಪ್ಲ್ಯಾನ್
ಮೈಸೂರಿನಲ್ಲಿ ಅಹಿಂದ ಸಮಾವೇಶ ನಡೆಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರಿಗೆ ಒಳ್ಳೆದಾಗಲಿ ಎಂದಷ್ಟೇ ಉತ್ತರ ನೀಡಿದರು.

