ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress) ನಾಯಕತ್ವ ಬದಲಾವಣೆ ಜೋರಾಗುತ್ತಿದ್ದು ಸಿಎಂ ವರ್ಸಸ್ ಡಿಸಿಎಂ ಫೈಟ್ ನಡುವೆ 3ನೇ ಪವರ್ ಸೆಂಟರ್ ಮತ್ತೆ ಸಕ್ರಿಯಗೊಂಡಿದ್ದು ಮತ್ತೆ ದಲಿತ ಸಿಎಂ (Dalit CM) ಕೂಗು ಜೋರಾಗಿದೆ.
ಮಾಜಿ ಡಿಸಿಎಂ, ಹಾಲಿ ಗೃಹ ಸಚಿವ ಪರಮೇಶ್ವರ್ (Parameshwar) ನಾನು ಸಿಎಂ ಸ್ಥಾನದ ಆಕಾಂಕ್ಷಿ ಅಂತ ನೇರವಾಗಿ, ಬಹಿರಂಗವಾಗಿಯೇ ಹೇಳಿದ್ದಾರೆ. ಈ ಬೆನ್ನಲ್ಲೇ ಪರಮೇಶ್ವರ್ ಸಿಎಂ ಸ್ಥಾನಕ್ಕೆ ಅರ್ಹರು ಅಂತ ಸತೀಶ್ ಜಾರಕಿಹೊಳಿ (Satish Jarkiholi) ಕೂಡ ಬೆಂಬಲ ಕೊಟ್ಟಿದ್ದಾರೆ. ಇದನ್ನೂ ಓದಿ: ಶ್ರೀರಾಮ, ಲಕ್ಷ್ಮಣ, ರಾವಣ ಆದರ್ಶ ವ್ಯಕ್ತಿಗಳಲ್ಲ, ಕ್ರೂರಿಗಳು – ಬಿ.ಟಿ ಲಲಿತಾ ನಾಯಕ್ ವಿವಾದ
ಹುಬ್ಬಳ್ಳಿ ಶಾಸಕ ಪ್ರಸಾದ್ ಅಬ್ಬಯ್ಯ ಕೂಡ ಪರಮೇಶ್ವರ್ ಹಿರಿಯರಿದ್ದಾರೆ. ಅವರು ಸಿಎಂ ಆಗಲಿ ಅಂದಿದ್ದಾರೆ. ಅಧಿಕಾರ ಹಸ್ತಾಂತರ ಆದರೆ ಅದು ದಲಿತರಿಗೆ ಆಗಲಿ ಎನ್ನುವ ದಾಳ ಇವರದಾಗಿದೆ.
ಸಿಎಂ ಬಣವೇ ಆದರೂ ಪ್ರತ್ಯೇಕವಾಗಿ ದಲಿತ ಸಿಎಂ ಕೂಗು ಎಬ್ಬಿಸಲು ದಲಿತ ಸಚಿವರ ತಂಡ ಸಜ್ಜಾಗಿದೆ. ಇದು ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ, ಡಿಸಿಎಂ ಡಿಕೆಶಿ ಪಾಲಿಗೆ ಹೊಸ ಸವಾಲು ಎದುರಾಗಿದೆ.
