ಬೆಂಗಳೂರು: ಕಾಂಗ್ರೆಸ್‌ಲ್ಲಿ (Congress) ಆಗುತ್ತಿರುವ ಪ್ರಸಕ್ತ ರಾಜಕೀಯ ಬೆಳವಣಿಗೆಗಳಿಗೆ ತಳುಕು ಹಾಕಿ ಪಬ್ಲಿಕ್ ಟಿವಿಯ (PUBLiC TV) ಹಳೆಯ ವಿಡಿಯೋ ಒಂದನ್ನ ಕಿಡಿಗೇಡಿಗಳು ವೈರಲ್ ಮಾಡುತ್ತಿದ್ದಾರೆ.
2019ರ ಅಂದಿನ ರಾಜಕೀಯ ಸನ್ನಿವೇಶಕ್ಕೆ ಸಂಬಂಧಿಸಿದ ಸುದ್ದಿಯ ವಿಡಿಯೋವನ್ನ ಈಗ ವೈರಲ್ ಮಾಡುತ್ತಿದ್ದು, ಈಗಿನ ರಾಜಕೀಯ ಸನ್ನಿವೇಶಕ್ಕೂ ಹಳೆಯ ವಿಡಿಯೋ (Old Video) ತುಣುಕಿಗೆ ಯಾವುದೇ ಸಂಬಂಧ ಇಲ್ಲ. ಡಿಸೆಂಬರ್ 28, 2019ರ ಸುದ್ದಿಯನ್ನ ಈಗ ವೈರಲ್ ಮಾಡಿ, ಇಂದಿನ ರಾಜಕೀಯ ಸನ್ನಿವೇಶಕ್ಕೆ ಕಿಡಿಗೇಡಿಗಳು ಲಿಂಕ್ ಮಾಡುತ್ತಿದ್ದಾರೆ.
ಇದರ ಹಿಂದಿರುವ ಕಿಡಿಗೇಡಿಗಳ ವಿರುದ್ಧ ಪಬ್ಲಿಕ್ ಟಿವಿ ಕಾನೂನು ರೀತಿಯ (Legal Auction) ಕ್ರಮಕ್ಕೆ ಮುಂದಾಗುತ್ತಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು.

