ದಾವಣಗೆರೆ: ಸಾವರ್ಕರ್ ಫೋಟೋ ವಿವಾದ ದಾವಣಗೆರೆವರೆಗೂ ತಲುಪಿದೆ. ಗಣೇಶ ಹಬ್ಬದ ಪ್ರಯುಕ್ತ ಹೊನ್ನಾಳಿಯಲ್ಲಿ ಹಿಂದೂ ಮಹಾಸಭಾ ಗಣೇಶ ಸೇವಾ ಸಮಿತಿ ಹಾಕಿದ್ದ ಸಾವರ್ಕರ್ ಫೋಟೋವನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.
Advertisement
ಗಣೇಶೋತ್ಸವದ ಅಂಗವಾಗಿ ನಗರದಲ್ಲಿ ಫ್ಲೆಕ್ಸ್ ಅಳವಡಿಸಲಾಗಿತ್ತು. ಫ್ಲೆಕ್ಸ್‌ನಲ್ಲಿದ್ದ ಸಾವರ್ಕರ್ ಫೋಟೋ ಜೊತೆಗೆ ಬಾಲಗಂಗಾಧನಾಥ ತಿಲಕರ ಫೋಟೋವನ್ನು ಸಹ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಕಾರ್ಯಕರ್ತರು ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮುಂಬೈನ ಗಣಪತಿಗೆ 316.40 ಕೋಟಿ ರೂ. ವಿಮೆ
Advertisement
Advertisement
ಇತ್ತ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಸಾರ್ವಕರ್ ಸಮರ ಸಾರಿರುವ ಬಿಜೆಪಿ ಮೊದಲಿಗೆ ಸಿದ್ದು ಅಖಾಡದಿಂದಲೇ ಯುದ್ಧ ಆರಂಭಿಸಿದೆ. ರಾಜ್ಯ ಬಿಜೆಪಿಯ ರಾಜಾಹುಲಿ ಕೈಯಲ್ಲಿ ಹಿಂದುತ್ವ ಅಸ್ತ್ರ ಕೊಟ್ಟು, ರಥಯಾತ್ರೆಗೆ ಚಾಲನೆ ನೀಡಲಾಗಿದೆ. ಮುಂಬರುವ ಚುನಾವಣೆಗೆ ಬಿಜೆಪಿಯಿಂದ ಸಾವರ್ಕರ್ ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆದಿದೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಯಡಿಯೂರಪ್ಪರನ್ನೇ ಮುಂದೆ ಬಿಡಲು ಹೈಕಮಾಂಡ್ ಪ್ಲಾನ್ ಮಾಡಿದೆ. ಈ ಮೂಲಕ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ರಾಜ್ಯ ಬಿಜೆಪಿಗೆ ರಾಜಾಹುಲಿ ಬಲ ಸಿಗಲಿದೆ. ರಥಯಾತ್ರೆಗೆ ಚಾಲನೆ ಕೊಟ್ಟಿರುವ ಯಡಿಯೂರಪ್ಪ ಆಗಸ್ಟ್ 30ರ ರಥಯಾತ್ರೆಯ ಸಮಾರೋಪದಲ್ಲಿ ಭಾಗಿ ಆಗಿ ಕಾಂಗ್ರೆಸ್ ವಿರುದ್ಧ ಗುಡುಗಲಿದ್ದಾರೆ. ಉಳಿದ ಜಿಲ್ಲೆಗಳಲ್ಲೂ ಸಾವರ್ಕರ್ ರಥಯಾತ್ರೆ ಮೂಲಕ ಪಕ್ಷದ ಪರ ಟ್ರೆಂಡ್ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ. ಇನ್ನು ಇಂದು ಮೈಸೂರು, ನಾಳೆ ಎಚ್.ಡಿ.ಕೋಟೆ, ಸರಗೂರು, 25, 26ರಂದು ನಂಜನಗೂಡು ಮೂಲಕ ಚಾಮರಾಜನಗರ ಜಿಲ್ಲೆ, 27 ರಿಂದ 29ರವರೆಗೆ ಮಂಡ್ಯ ಜಿಲ್ಲೆಯಲ್ಲಿ ರಥಯಾತ್ರೆ ಸಾಗಲಿದ್ದು. 30ಕ್ಕೆ ಮೈಸೂರಿನಲ್ಲಿ ಕೊನೆಗೊಳ್ಳಲಿದೆ. ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿ ಸಿಟಿ ರವಿ ಪತ್ರ