ಬೆಂಗಳೂರು: ಕರ್ನಾಟಕ ರಾಜಕೀಯ ಭವಿಷ್ಯ ನಾಳೆ ಬಯಲಾಗಲಿದ್ದು, ಈಗಾಗಲೇ ಬಂದಿರೋ ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿವೆ. ಇತ್ತ ಕೇಂದ್ರ ಮತ್ತು ರಾಜ್ಯ ಗುಪ್ತಚರ ವರದಿಯಲ್ಲಿ ಕಾಂಗ್ರೆಸ್ ಜಯದ ಪತಾಕೆ ಹಾರಿಸಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಕೇಂದ್ರ ಗುಪ್ತಚರ ವರದಿಯಲ್ಲಿ ಕಾಂಗ್ರೆಸ್ 95 ರಿಂದ 102 ಸ್ಥಾನಗಳನ್ನು ಗೆಲ್ಲೋ ನಿರೀಕ್ಷೆ ಇದ್ಯಂತೆ. ಬಿಜೆಪಿಗೆ 80 ರಿಂದ 85 ಸ್ಥಾನಗಳು ಸಿಗಲಿದ್ಯಂತೆ. ಜೆಡಿಎಸ್ 35 ರಿಂದ 40 ಸೀಟುಗಳಲ್ಲಿ ಜಯಿಸಲಿದೆ ಅಂತಾ ಊಹಿಸಲಾಗಿದೆ.
Advertisement
Advertisement
ರಾಜ್ಯ ಗುಪ್ತಚರ ವರದಿಯಲ್ಲಿ ಕಾಂಗ್ರೆಸ್‍ಗೆ 102 ಸ್ಥಾನ, ಬಿಜೆಪಿ 70, ಜೆಡಿಎಸ್‍ಗೆ 28 ಸ್ಥಾನ ಸಿಗಲಿದೆ. 20 ಕ್ಷೇತ್ರಗಳಲ್ಲಿ 10ರಲ್ಲಿ ಜೆಡಿಎಸ್, 10 ಕ್ಷೇತ್ರಗಳಲ್ಲಿ ಬಿಜೆಪಿ ನಡುವೆ ಕಾಂಗ್ರೆಸ್‍ಗೆ ನೇರ ಹಣಾಹಣಿ ನಡೆಯುವ ಸಾಧ್ಯತೆಗಳಿವೆ. 30 ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಇದೆ ಎಂದು ಗುಪ್ತಚರ ವರದಿಯಲ್ಲಿ ತಿಳಿಸಲಾಗಿದೆ.
Advertisement
ಈ ಬಾರಿ ಬದಾಮಿ ಹಾಗು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದು, ಎರಡೂ ಕ್ಷೇತ್ರಗಳಲ್ಲಿ ಸಿಎಂ ಗೆಲ್ಲಲಿದ್ದಾರೆ ಅಂತಾ ವರದಿಗಳು ಹೇಳ್ತಿವೆ. ಚಾಮುಂಡೇಶ್ವರಿಯಲ್ಲಿ ಕಡಿಮೆ ಮತಗಳ ಅಂತರದಿಂದ ಜಯ ಸಾಧಿಸಿದ್ರೆ, ಬದಾಮಿಯಲ್ಲಿ ಬಹುಮತಗಳ ಅಂತರದಿಂದ ಸಿಎಂ ಜಯ ಸಾಧಿಸಲಿದ್ದಾರೆ ಅಂತಾ ಕೇಂದ್ರ ಮತ್ತು ರಾಜ್ಯ ಗುಪ್ತಚರ ವರದಿಗಳು ಭವಿಷ್ಯ ನುಡಿದಿವೆ.