ಬೆಂಗಳೂರು: ರಾಮನಗರ (Ramanagara) ಅಖಾಡದಲ್ಲಿ ಡಿಕೆ (D.K.Shivakumar) ಹಾಗೂ ಹೆಚ್ಡಿಕೆ (H.D.Kumaraswamy) ನಡುವೆ ತೆರೆಮರೆ ಜಗಳ್ಬಂಧಿ ಇದೆಯಾ? ರಾಜ್ಯದಲ್ಲಿ ರೇವಣ್ಣ (H.D.Revanna), ಸಿದ್ದರಾಮಣ್ಣ (Siddaramaiah) ಬಹಿರಂಗ ದೋಸ್ತಿ ಮತ್ತಷ್ಟು ಗಟ್ಟಿಯಾಗಿದೆಯಾ? ಪಕ್ಷದ ವಿಚಾರವೇ ಇರಲಿ.. ಪಕ್ಷ ಮೀರಿದ ವಿಚಾರವೇ ಇರಲಿ.. ಸ್ನೇಹ ಮಾತ್ರ ಮಾಸದಿರಲಿ ಎಂಬ ಅಘೋಷಿತ ನಿಯಮ ಜಾರಿಯಾಗಿದೆಯಾ?
Advertisement
ಹೌದು, ಇಂತಹದ್ದೊಂದು ಮಾತು ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದೆ. ಇದು ರಾಜಕೀಯ ಮೀರಿದ ಸ್ನೇಹಾನಾ? ರಾಜಕೀಯ ಮೀರಿ ತಮ್ಮ ತಮ್ಮ ಸುರಕ್ಷತೆಗಾಗಿ ಚಾಚಿದ ಸ್ನೇಹದ ಹಸ್ತಾನಾ? ಅಂತ ಜನ ಸಾಮಾನ್ಯರು ಮಾತಾಡಿಕೊಳ್ಳುವಂತಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮೊದಲು ಕ್ಷೇತ್ರ ಹುಡುಕಿಕೊಳ್ಳಲಿ, ಆಮೇಲೆ JDS ಬಗ್ಗೆ ಮಾತಾಡಲಿ – ಸಿ.ಎಂ ಇಬ್ರಾಹಿಂ
Advertisement
ರಾಜ್ಯ ರಾಜಕಾರಣದಲ್ಲಿ ಇಂತಹದ್ದೊಂದು ಗುಸು ಗುಸು ಸುದ್ದಿ ಇನ್ನಿಲ್ಲದಂತೆ ಹರಿದಾಡುತ್ತಿದೆ. ಹಾಸನದಲ್ಲಿ ಬಸ್ ಯಾತ್ರೆ ನಡೆಸಿದ ಕಾಂಗ್ರೆಸ್ ನಾಯಕರು ರೇವಣ್ಣ ವಿರುದ್ಧ ದೊಡ್ಡ ಧ್ವನಿಯಲ್ಲಿ ಮಾತನಾಡಲೇ ಇಲ್ಲ. ಅದರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಂತೂ ಕಾರ್ಯಕರ್ತರೇ ಕೇಳಿದರೂ, ರೇವಣ್ಣ ವಿರುದ್ಧ ತುಟಿ ಬಿಚ್ಚಲಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ರೇವಣ್ಣ ನನ್ನ ಒಳ್ಳೆ ಸ್ನೇಹಿತ ಅಂತ ಸಿದ್ದರಾಮಯ್ಯ ಮಾತನಾಡಿದ್ದಿದೆ.
Advertisement
Advertisement
ದೇವೇಗೌಡರು ಹಾಗೂ ಕುಮಾರಸ್ವಾಮಿ ಮೇಲೆ ಅಸಮಾಧಾನ ವ್ಯಕ್ತಪಡಿಸಿದರೂ, ಸಿದ್ದರಾಮಯ್ಯ ಅವರು ರೇವಣ್ಣರ ವಿರುದ್ಧ ಮಾತ್ರ ಮಾತನಾಡಿದವರಲ್ಲ. ಹಾಸನದಲ್ಲಿ ಸಿದ್ದರಾಮಯ್ಯ ನಡೆ ನೋಡಿದರೆ ರೇವಣ್ಣ ಮೇಲಿನ ಸಾಫ್ಟ್ ಕಾರ್ನರ್ ದೊಡ್ಡ ಮಟ್ಟದಲ್ಲಿ ಎದ್ದು ಕಾಣುತ್ತಿತ್ತು.
ಒಂದೇ ಜಿಲ್ಲೆಯಲ್ಲಿ ಇದ್ದರೂ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಪರಸ್ಪರ ರಾಜಕೀಯ ಕೆಸರೆರಚಾಟ ಮಾಡಿಕೊಳ್ಳುತ್ತಿಲ್ಲ. ರಾಮನಗರ ಜಿಲ್ಲೆಯ 4 ಕ್ಷೇತ್ರದಲ್ಲೂ ಕಾಂಗ್ರೆಸ್-ಜೆಡಿಎಸ್ ಜಟಾಪಟಿ ಇದ್ದರೂ, ಪರಸ್ಪರರ ಕ್ಷೇತ್ರದಲ್ಲಿ ಒಬ್ಬರಿಗೊಬ್ಬರು ತೊಂದರೆ ಮಾಡದೆ ಹಿತ ಕಾಯ್ದುಕೊಂಡಿದ್ದಾರೆ. ಇದನ್ನೆಲ್ಲಾ ನೋಡಿದರೆ ಸಹಜವಾಗಿಯೇ ರಾಜಕೀಯ ಹೊರತಾದ ಪರಸ್ಪರ ಹಿತ ಕಾಯ್ದುಕೊಳ್ಳುವ ಸ್ನೇಹ ಇದ್ದಂತಿದೆ. ಒಟ್ಟಾರೆ ಚುನಾವಣೆ ಹೊಸ್ತಿಲಲ್ಲೂ ಸಿದ್ದರಾಮಯ್ಯ ಹಾಗೂ ರೇವಣ್ಣ, ಇನ್ನೊಂದು ಕಡೆ ಡಿಕೆ ಹಾಗೂ ಹೆಚ್ಡಿಕೆಯ ಸ್ನೇಹಾನಾ, ಪ್ರೀತಿನಾ ನಡೆ ಅಚ್ಚರಿ ಮೂಡಿಸುವಂತಿದೆ ಅನ್ನೋದಂತು ಸತ್ಯ. ಇದನ್ನೂ ಓದಿ: ಒಬ್ಬರಿಗೆ ಒಂದೇ ಟಿಕೆಟ್ ಎನ್ನುತ್ತಿರುವ ಡಿಕೆಶಿ ಎರಡು ಕ್ಷೇತ್ರದ ಕಡೆ ಕಣ್ಣು ಹಾಕಿದ್ರಾ?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k