ಬೆಂಗಳೂರು: ಒಂದೆಡೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಪೊಲಿಟಿಕಲ್ ‘ಸಿಡಿ’ಮದ್ದಿನ ದಾಳಿ ನಡೆಸುತ್ತಿದ್ದರೆ, ಬೆಳಗಾವಿ ಗುದ್ದಾಟದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ದಾರಿ ಮೌನ ತಾಳಿತೆ ಎನ್ನುವಂತಾಗಿದೆ. ಚುನಾವಣೆ ಹತ್ತಿರ ಇರುವಾಗ ಎಚ್ಚರ ತಪ್ಪಲ್ಲ, ಸಮಯಕ್ಕಾಗಿ ಕಾಯುತ್ತೇನೆ ಅಂತಾ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಪಾಲಿಸಿ ಅಂತೆ. ಹಾಗಾದ್ರೆ 6 ದಿನವಾದ್ರೂ ತುಟಿಬಿಚ್ಚದೆ ಮೌನವ್ರತ ವಹಿಸುತ್ತಿರುವ ಲಕ್ಷ್ಮಿ ಹೆಬ್ಬಾಳ್ಕರ್ ಪಾಲಿಸಿ ನಿರ್ಲಕ್ಷ್ಯವೋ? ತಿರುಗುಬಾಣದ ತಂತ್ರವೋ? ಎಂಬ ಕುತೂಹಲ ಹೆಚ್ಚಾಗಿದೆ.
ಅಂದಹಾಗೆ ಅವರು ಸಮಯ ನೋಡಿ ಹೊಡೆದ್ರೂ ನಾನು ಸಮಯ ನೋಡಿಯೇ ಹೊಡೀತಿನಿ ಅಂತಾ ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ರು. ಆ ಮಾತನ್ನೇ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಪಾಲಿಸ್ತಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಚಾಪೆ ಕೆಳಗೆ ತೂರಿದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ರಂಗೋಲಿ ಕೆಳಗೆ ತೂರ್ತಿದ್ದಾರಂತೆ. ರಮೇಶ್ ಜಾರಕಿಹೊಳಿ ಎಷ್ಟೇ ಆರೋಪ ಮಾಡಿ ಮಾತನಾಡಿದ್ರೂ ಬಾಯಿ ಬಿಡದ ಲಕ್ಷ್ಮಿ ಹೆಬ್ಬಾಳ್ಕರ್, ಸಹೋದರ ಚನ್ನರಾಜು ಹಟ್ಟಿಹೊಳಿ (Channaraju Hattiholi) ಹತ್ರ ಮಾತ್ರ ರಿಯಾಕ್ಟ್ ಮಾಡಿಸಿ ಸುಮ್ಮನಾಗಿದ್ದಾರೆ. ಇದು ರಾಜಕೀಯ ತಂತ್ರಗಾರಿಕೆ ಎನ್ನಲಾಗಿದೆ. ಇದನ್ನೂ ಓದಿ: ಸಿಡಿ ರಾಡಿ: ರಮೇಶ್ ಜಾರಕಿಹೊಳಿಗೆ ಬೆಂಬಲ- ಮಂತ್ರಿಯೂ ಬೇಡ ಎಂದ ಈಶ್ವರಪ್ಪ
ಇದು ಚುನಾವಣೆ (Election) ಸಮಯ, ನಾನು ಎಚ್ಚರ ತಪ್ಪಲ್ಲ, ನಂಗೂ ಸಮಯ ಬರಬೇಕು. ಆ ಸಮಯಕ್ಕಾಗಿ ನಾನು ಕಾಯ್ತಿದ್ದಿನಿ, ಎರಡ್ಮೂರು ವಿಚಾರದಲ್ಲಿ ಗೆದ್ದಿದ್ದಿನಿ, ಮುಂದೆಯೂ ಸೋಲಲ್ಲ. ಚುನಾವಣೆ ಸಮಯದಲ್ಲಿ ನಾನು ಲೂಸ್ ಟಾಕ್‍ಗೆ ಹೋಗಲ್ಲ. ಆದರೆ ಎದುರಾಳಿ ಎದುರು ಕೈಕಟ್ಟಿ ಕೂರಲ್ಲ. ಇದು ರಮೇಶ್ ಜಾರಕಿಹೊಳಿ ಪೊಲಿಟಿಕಲ್ ಚಾರ್ಜ್‍ಶೀಟ್‍ಗೆ ಆಪ್ತರ ಬಳಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ ಮಾತು. ಹಾಗಾದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಸಮಯಕ್ಕಾಗಿ ಕಾದು ಕುಳಿತಿರುವ ಆ ಸಮಯ ಯಾವುದೆಂಬ ಕುತೂಹಲವಿದ್ದು, ಬೆಳಗಾವಿಯಲ್ಲಿ ಸೇಡಿನ ಜ್ವಾಲೆ ಯಾರು ಬೆಂದು ಹೋಗ್ತಾರೆ? ಎಂಬುದನ್ನ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k