ಬೆಂಗಳೂರು: ಎರಡು ವರ್ಷಗಳ ಕೊರೊನಾ ಬ್ರೇಕ್ ಬಳಿಕ 8ನೇ ಅವೃತ್ತಿ ಪ್ರೊ ಕಬಡ್ಡಿ ನಗರದಲ್ಲಿ ಆರಂಭವಾಗಿದೆ. ಕರುನಾಡಲ್ಲಿ ನಡೆಯುವ ಕಬಡ್ಡಿಯಲ್ಲಿ ಒಟ್ಟು 15 ಮಂದಿ ಕನ್ನಡಿಗ ಕಲಿಗಳು ಅಖಾಡಕ್ಕೆ ಧುಮುಕುತ್ತಿದ್ದಾರೆ.
Advertisement
ದೇಸಿ ಕ್ರೀಡೆ ಕಬಡ್ಡಿ ಕರ್ನಾಟಕದಲ್ಲಿ ಸಾಕಷ್ಟು ಸುದ್ದಿಮಾಡಿದೆ. ಹಲವು ಪ್ರತಿಭಾನ್ವಿತ ಆಟಗಾರರು ಕರ್ನಾಟಕದಲ್ಲಿ ಹೆಸರುವಾಸಿಯಾಗಿದ್ದಾರೆ. ಇದೀಗ ನಡೆಯುತ್ತಿರುವ ಪ್ರೊ ಕಬಡ್ಡಿಯಲ್ಲೂ ಕೂಡ ಕನ್ನಡಿಗರು ವಿವಿಧ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ ಕರ್ನಾಟಕದ ತಂಡ ಬೆಂಗಳೂರು ಬುಲ್ಸ್‌ನಲ್ಲಿ ಒಬ್ಬನೇ ಒಬ್ಬ ಕನ್ನಡಿಗನಿಲ್ಲ. ಇದನ್ನೂ ಓದಿ: ಮತ್ತೆ ಪ್ರೋ ಕಬಡ್ಡಿ ಹಬ್ಬ – ಇಂದಿನಿಂದ ಬೆಂಗಳೂರು ಬುಲ್ಸ್ ಅಭಿಯಾನ ಶುರು
Advertisement
Advertisement
ಇತರ ತಂಡಗಳಾದ ಬೆಂಗಾಲ್ ವಾರಿಯರ್ಸ್‍ನಲ್ಲಿ ಸುಕೇಶ್ ಹೆಗ್ಡೆ, ರಿಷಾಂಕ್ ದೇವಾಡಿಗ, ಸಚಿನ್ ವಿ, ದರ್ಶನ್, ಮನೋಜ್ ಗೌಡ, ಆನಂದ್ ಇದ್ದರೆ, ಪಾಟ್ನಾ ಪೈರೇಟ್ಸ್‌ನ ನಾಯಕರಾಗಿ ಪುತ್ತೂರಿನ ಪ್ರಶಾಂತ್ ಕುಮಾರ್ ರೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದನ್ನೂ ಓದಿ: ಐಪಿಎಲ್ 2022 ಹರಾಜು – 5 ವಿದೇಶಿ ವಿಕೆಟ್ ಕೀಪರ್‌ಗಳ ಮೇಲೆ ಫ್ರಾಂಚೈಸಿಗಳ ಕಣ್ಣು
Advertisement
ತೆಲುಗು ಟೈಟಾನ್ಸ್‌ನಲ್ಲಿ ರೈಡರ್ ರಾಕೇಶ್ ಕುಮಾರ್, ದಬಾಂಗ್ ಡೆಲ್ಲಿಯಲ್ಲಿ ಜೀವಾ ಕುಮಾರ್, ಜೈಪುರ್ ಪಿಂಕ್ ಪ್ಯಾಂಥರ್ಸ್‍ನಲ್ಲಿ ಪವನ್ ಕುಮಾರ್, ತಮಿಳ್ ತಲೈವಾಸ್‍ಗೆ ಕನ್ನಡಿಗ ಪ್ರಪಂಚನ್ ಶ್ರೀರಕ್ಷೆ ಇದೆ. ಇದನ್ನೂ ಓದಿ: ಪಾಕಿಸ್ತಾನ ವಿರುದ್ಧ ಗೆಲುವು – ಕಂಚಿನ ಪದಕ ಪಡೆದ ಭಾರತ
ಪುಣೇರಿ ಪಲ್ಟನ್‍ನಲ್ಲಿ ಚೇತನ್ ಮತ್ತು ವಿಶ್ವಾಸ್ ಇದ್ದರೆ, ಗುಜಾರಾತ್ ಫಾರ್ಚೂನ್‍ಜೈಂಟ್ಸ್ ಮತ್ತು ಯು ಮುಂಬಾ ತಂಡದಲ್ಲಿ ಕರಾವಳಿ ಕಬಡ್ಡಿ ರಂಗದಲ್ಲಿ ಮಿಂಚುತ್ತಿರುವ ಯುವ ಆಟಗಾರರಾದ ರತನ್.ಕೆ ಮತ್ತು ಸಚಿನ್ ಪ್ರತಾಪ ಸ್ಥಾನ ಪಡೆದಿದ್ದು ಆಡುವ ಬಳಗದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.