ಬಳ್ಳಾರಿ: ರಾಜಕಾರಣದಲ್ಲಿ ಸಣ್ಣದೊಂದು ಕಳಂಕ ಇಲ್ಲದ ಸಿಎಂ ಸಿದ್ದರಾಮಯ್ಯ (Siddaramaiah) ಇದೀಗ ಮೂಡಾ ಹಗರಣದ (MUDA Scam) ಸುಳಿಗೆ ಸಿಲುಕಿ, ಸಂಕಷ್ಟ ಎದುರಿಸುತ್ತಿದ್ದಾರೆ. ಬಳ್ಳಾರಿ ಪಾದಯಾತ್ರೆ ಮಾಡಿ ವರ್ಚಸ್ಸು ಬೆಳೆಸಿಕೊಂಡಿದ್ದ ಸಿದ್ದರಾಮಯ್ಯ ಇಂದು ಅದೇ ಮಾದರಿಯ ಪಾದಯಾತ್ರೆ ಕಂಟಕ ತಂದೊಡ್ಡಿದೆ.
ಪಾದಯಾತ್ರೆ ನಡೆದಾಗಲ್ಲೆಲ್ಲ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯೇ ಸೃಷ್ಟಿಯಾಗುವುದು ವಿಶೇಷ. ಕಳೆದ ಹದಿನಾಲ್ಕು ವರ್ಷದ ಅವಧಿಯಲ್ಲಿ ನಡೆದ ಎರಡು ಪಾದಯಾತ್ರೆ ಪರಿಣಾಮ ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲವಾಗಿವೆ. 2010 ರಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಿದ್ದರಾಮಯ್ಯ ಬೆಂಗಳೂರಿನಿಂದ ಬಳ್ಳಾರಿವರೆಗೂ (Bengaluru TO Ballari) ಪಾದಯಾತ್ರೆ ಮಾಡಿದ್ದರು. ಪಾದಯಾತ್ರೆ ನಡೆದ ಒಂದೂವರೆ ವರ್ಷದೊಳಗೆ ಯಡಿಯೂರಪ್ಪ (BS Yediyurappa) ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: 20 ಸಾವಿರ ರೂ. ಕಮಿಷನ್ ಕೊಟ್ರೆ ಮಾತ್ರ ಅಂಗವಿಕಲರಿಗೆ ತ್ರಿಚಕ್ರ ಬೈಕ್!
Advertisement
Advertisement
ಅಕ್ರಮ ಗಣಿಗಾರಿಕೆ ಮತ್ತು ಚೆಕ್ ಮೂಲಕ ಹಣ ಪಡೆದ ಅರೋಪವೆಲ್ಲ ಸೇರಿಕೊಂಡು ರಾಜೀನಾಮೆ ನೀಡುವಂತಾಗಿತ್ತು. ಅಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಇದೀಗ ಬಿಜೆಪಿ, ಜೆಡಿಎಸ್ ನೇತೃತ್ವದಲ್ಲಿ ನಡೆದ ಬೆಂಗಳೂರು ಟು ಮೈಸೂರು ಪಾದಯಾತ್ರೆ ಹಿನ್ನಲೆ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕೂಷನ್‌ಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಒಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಬಿಜೆಪಿಯಿಂದ ನಡೆದ ಪಾದಯಾತ್ರೆಗಳು ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿ ಮಾಡಿವೆ ಎನ್ನುವುದು ಇದೀಗ ಸ್ಪಷ್ಟ.
Advertisement