– ಅಂತಿಮವಾಗದ ಮೈತ್ರಿ ಸೀಟು ಹಂಚಿಕೆ; ಫಸ್ಟ್ ಲಿಸ್ಟ್‌ನಲ್ಲಿ ಕರ್ನಾಟಕ ಕೈಬಿಟ್ಟ ಹೈಕಮಾಂಡ್
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗಾಗಿ (General Elections 2024) ಬಿಜೆಪಿ (BJP First List) ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಟಿಕೆಟ್ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ.
Advertisement
ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಪಟ್ಟಿಯಲ್ಲಿ ಕರ್ನಾಟಕದ (Karnataka) ಹೆಸರೇ ಇರಲಿಲ್ಲ. ಮೈತ್ರಿ ಸೀಟು ಹಂಚಿಕೆ ಫೈನಲ್ ಆಗದ ಹಿನ್ನೆಲೆಯಲ್ಲಿ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಸೀಟ್ ಘೋಷಣೆಯನ್ನು ಬಿಜೆಪಿ ಮಾಡಿಲ್ಲ. ಇದನ್ನೂ ಓದಿ: BJP Lok Sabha Candidates: ಮೊದಲ ಪಟ್ಟಿಯಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸೀಟು?
Advertisement
Advertisement
ಕನಿಷ್ಠ 4 ಸೀಟ್ ಘೋಷಣೆ ಮಾಡಬಹುದು ಎನ್ನಲಾಗಿತ್ತು. ಆದರೆ ಬಿಜೆಪಿ ಹೈಕಮಾಂಡ್ ಎಲ್ಲ ಲೆಕ್ಕಚಾರ ಉಲ್ಟಾ ಮಾಡಿದೆ. ಇದರಿಂದ ಸಹಜವಾಗಿ ಟಿಕೆಟ್ ಆಕಾಂಕ್ಷಿಗಳಿಗೆ ಮೊದಲ ಪಟ್ಟಿಯಿಂದ ನಿರಾಸೆಯಾಗಿದೆ. ಆದರೆ ಎರಡನೇ ಹಂತದ ಲಿಸ್ಟ್‌ನಲ್ಲಿ ಕರ್ನಾಟಕದ ಕನಿಷ್ಠ 15 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಸಾಧ್ಯತೆ ಇದೆ.
Advertisement
ಯಾವ ರಾಜ್ಯಗಳಿಗೆ ಎಷ್ಟು ಸೀಟ್?
ಉತ್ತರ ಪ್ರದೇಶದಿಂದ – 51 (ಒಟ್ಟು ಕ್ಷೇತ್ರಗಳು – 80), ಪಶ್ಚಿಮ ಬಂಗಾಳದಿಂದ – 20 (ಒಟ್ಟು ಕ್ಷೇತ್ರ – 42), ಮಧ್ಯಪ್ರದೇಶದಿಂದ – 24 (ಒಟ್ಟು ಕ್ಷೇತ್ರ – 29), ಗುಜರಾತ್ – 15 (ಒಟ್ಟು ಕ್ಷೇತ್ರ – 26), ರಾಜಸ್ಥಾನ – 15 (ಒಟ್ಟು ಕ್ಷೇತ್ರ – 25), ಕೇರಳ – 12 (ಒಟ್ಟು ಕ್ಷೇತ್ರ – 20), ತೆಲಂಗಾಣ – 9 (ಒಟ್ಟು ಕ್ಷೇತ್ರ – 17), ಅಸ್ಸಾಂ – 11 (ಒಟ್ಟು ಕ್ಷೇತ್ರ – 14), ಜಾರ್ಖಂಡ್ – 11 (ಒಟ್ಟು ಕ್ಷೇತ್ರ – 14), ಛತ್ತೀಸ್‌ಗಢದಿಂದ – 11 (ಒಟ್ಟು ಕ್ಷೇತ್ರ – 11), ದೆಹಲಿಯಿಂದ – 5 (ಒಟ್ಟು ಕ್ಷೇತ್ರ – 07), ಜಮ್ಮು ಮತ್ತು ಕಾಶ್ಮೀರ – 2 (ಒಟ್ಟು ಕ್ಷೇತ್ರ – 5), ಉತ್ತರಾಖಂಡ – 3 (ಒಟ್ಟು ಕ್ಷೇತ್ರ – 05), ಅರುಣಾಚಲ ಪ್ರದೇಶ – 2 (ಒಟ್ಟು ಕ್ಷೇತ್ರ – 02), ಗೋವಾ – 1 (ಒಟ್ಟು ಕ್ಷೇತ್ರ – 02), ತ್ರಿಪುರಾ – 1 (ಒಟ್ಟು ಕ್ಷೇತ್ರ – 02), ಅಂಡಮಾನ್ ಮತ್ತು ನಿಕೋಬಾರ್ – 1 (ಒಟ್ಟು ಕ್ಷೇತ್ರ – 01), ದಮನ್ ಮತ್ತು ದಿಯು – 1 (ಒಟ್ಟು ಕ್ಷೇತ್ರ – 02). ಇದನ್ನೂ ಓದಿ: Lok Sabha: ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್‌ಗೆ ಬಿಜೆಪಿ ಟಿಕೆಟ್