ಬೆಂಗಳೂರು: ಮುಂದಿನ ತಿಂಗಳಿನಿಂದ ಹೊಸ ದ್ವಿಚಕ್ರ ವಾಹನ (Two-Wheelers) ಹಾಗೂ ಕಾರು (Car) ಖರೀದಿದಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಲಿದೆ. ಕೆಲವೇ ದಿನಗಳಲ್ಲಿ ಸೆಸ್ (Cess) ಜಾರಿಯಾಗಲಿದ್ದು,ವಾಹನ ಖರೀದಿ ಮೇಲೆ ಮತ್ತಷ್ಟು ಹೊರೆ ಬೀಳಲಿದೆ.
ಹೌದು. ಈಗಾಗಲೇ ಹೊಸ ವರ್ಷದಿಂದ ಅಟೊಮೊಬೈಲ್ (Automobile) ಕಂಪನಿಗಳು ತಮ್ಮ ದ್ವಿಚಕ್ರ ವಾಹನ ಮತ್ತು ಕಾರುಗಳ ದರವನ್ನು ಏರಿಕೆ ಮಾಡಿದೆ. ಈಗ ರಾಜ್ಯ ಸರ್ಕಾರ ಕಾರ್ಮಿಕ ಸಾಮಾಜಿಕ ಭದ್ರತೆ ನಿಧಿಗಾಗಿ ದ್ವಿಚಕ್ರ ವಾಹನ, ಸಾರಿಗೇತರ ಮೋಟಾರ್ ಕಾರುಗಳ ನೋಂದಣಿ ವೇಳೆ ತಲಾ 500 ರೂ. ಮತ್ತು 1,000 ರೂ. ಉಪಕರ ವಿಧಿಸಲು ಮುಂದಾಗಿದೆ.
Advertisement
ಏನಿದು ಸೆಸ್?
ರಾಜ್ಯ ಮೋಟಾರ್ ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿಗಾಗಿ ದ್ವಿಚಕ್ರ ವಾಹನ ಮತ್ತು ಸಾರಿಗೇತರ ಮೋಟಾರು ಕಾರುಗಳ ನೋಂದಣಿಯ ವೇಳೆ ಉಪಕರ ವಿಧಿಸುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದಕ್ಕೆ ರಾಜ್ಯಪಾಲರ ಸಹಿಯೂ ಬಿದ್ದಿದ್ದು ಸರ್ಕಾರ ಗೆಜೆಟ್ ನೋಟಿಫಿಕೇಷನ್ ಸಹ ಹೊರಡಿಸಿದೆ.
Advertisement
Advertisement
ಯಾಕೆ ಈ ಸೆಸ್?
ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚಾಲಕರು ಸೇರಿ ಮತ್ತಿತರ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ನಿಧಿ ಸಂಗ್ರಹಣೆಗೆ ನಿರ್ಧಾರ ಮಾಡಲಾಗಿದೆ. ಈ ನಿಧಿಗೆ ಸುಮಾರು 100 ಕೋಟಿ ರೂ. ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಹೊಸ ಸೆಸ್ ಸರ್ಕಾರದ ವಾಹನ ತಂತ್ರಾಂಶದಲ್ಲಿ ಅಪ್ ಡೇಟ್ ಆಗಲು ಮಾತ್ರ ಬಾಕಿಯಿದೆ.
Advertisement
ಮುಂದಿನ 15 ದಿನಗಳಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್ ಆದರೆ ಮುಂದಿನ ತಿಂಗಳಿನಿಂದ ದ್ವಿಚಕ್ರ ವಾಹನಗಳ ನೋಂದಣಿ ವೇಳೆ 500 ರೂ. ಹಾಗೂ ಸಾರಿಗೇತರ ಮೋಟಾರ್ ಕಾರುಗಳಿಗೆ 1,000 ರೂ.ಗಳನ್ನು ನೀಡಬೇಕಾಗುತ್ತದೆ. ಇದನ್ನೂ ಓದಿ: ಮದ್ಯಪ್ರಿಯರಿಗೆ ಬಿಗ್ ಶಾಕ್ – ಬಜೆಟ್‌ಗೆ ಮೊದಲೇ ದರ ಏರಿಕೆಯಾಗುವ ಸಾಧ್ಯತೆ
ಯಾವೆಲ್ಲ ತೆರಿಗೆ ಇದೆ?
ಹೊಸ ವಾಹನ ಖರೀದಿಸುವಾಗ ಜಿಎಸ್‌ಟಿ(ಕೇಂದ್ರ+ ರಾಜ್ಯ), ರಸ್ತೆ ತೆರಿಗೆ, ವಿಮೆ ಸೇರಿದಂತೆ ಹಲವು ರೀತಿಯಲ್ಲಿ ಸರ್ಕಾರ ಕರ ಸಂಗ್ರಹಿಸುತ್ತಿದೆ. ಒಂದು ಕಾರಿನ ಒಟ್ಟು ಬೆಲೆಯಲ್ಲಿ ಅಂದಾಜು ಶೇ.45 ರಷ್ಟು ಹಣ ಸರ್ಕಾರಕ್ಕೆ ತೆರಿಗೆ (Tax) ರೂಪದಲ್ಲೇ ಹೋಗುತ್ತದೆ.
ದೇಶದಲ್ಲಿ ಅತಿ ಹೆಚ್ಚು ಮೋಟಾರು ವಾಹನ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಪ್ರಸ್ತುತ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ವಿಧಿಸಲಾಗುವ ತೆರಿಗೆಯ ಮೇಲೆ ರಾಜ್ಯವು 11% ರಷ್ಟು ಸೆಸ್ ಅನ್ನು ಸಂಗ್ರಹಿಸುತ್ತದೆ. ಇದರಲ್ಲಿ 10% ರಷ್ಟು ಮೂಲಸೌಕರ್ಯ ಅಭಿವೃದ್ಧಿ, ಬೆಂಗಳೂರು ಮಾಸ್ ರಾಪಿಡ್ ಟ್ರಾನ್ಸಿಟ್ ಲಿಮಿಟೆಡ್‌ನಲ್ಲಿ ಷೇರು ಹೂಡಿಕೆ ಮತ್ತು ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ (ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ) ಸೇರಿದಂತೆ ವಿವಿಧ ಯೋಜನೆಗಳಿಗೆ ಹಂಚಿಕೆಯಾಗಿದೆ. ಉಳಿದ 1% ರಷ್ಟು ನಗರ ಸಾರಿಗೆ ನಿಧಿಗೆ ಹೋಗುತ್ತದೆ.
ಸಾರಿಗೆ ವಾಹನಗಳ ಮೇಲೆ (ಹಳದಿ ಬೋರ್ಡ್ ವಾಣಿಜ್ಯ ವಾಹನಗಳು) 3% ರಷ್ಟು ಸೆಸ್ ಅನ್ನು ವಿಧಿಸುತ್ತದೆ. ಇದನ್ನು ಕರ್ನಾಟಕ ಮೋಟಾರ್ ಸಾರಿಗೆ ಮತ್ತು ಇತರ ಮಿತ್ರ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿಗೆ ಬಳಸಲಾಗುತ್ತದೆ.