ಚಿತ್ರದುರ್ಗಾ: ಮುರುಘಾ ಶ್ರೀಗಳಿಗೆ ನಾಳೆ ಜೈಲಾ? ಬೇಲಾ? ಅಥವಾ ಆಸ್ಪತ್ರೆ ಭಾಗ್ಯನಾ? ಎನ್ನೋದು ಕುತೂಹಲ ಕೆರಳಿಸಿದೆ.
ಪೊಲೀಸ್ ಕಸ್ಟಡಿ ನಾಳೆ ಬೆಳಗ್ಗೆ 11 ಗಂಟೆಗೆ ಅಂತ್ಯವಾಗಲಿದ್ದು, ಪೊಲೀಸರು ಸ್ಥಳ ಮಹಜರು, ಶ್ರೀಗಳ ಪುರುಷತ್ವ ವರದಿಯನ್ನು ನಾಳೆ ಕೋರ್ಟ್‍ಗೆ ಹಾಜರುಪಡಿಸಲಿದ್ದಾರೆ. ಮತ್ತೊಂದೆಡೆ ಬೇಲ್‍ಗಾಗಿ ಶ್ರೀಗಳ ಪರ ವಕೀಲರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕರೆದೊಯ್ಯಲು ಅವಕಾಶ ಕೊಡಬೇಕು. ಹಾಗಾಗಿ, ಮಧ್ಯಂತರ ಜಾಮೀನು ನೀಡಬೇಕೆಂದು ಶ್ರೀಗಳ ಪರ ವಕೀಲರು ಮನವಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ. ಈ ಸಂಬಂಧ ಡಿವೈಎಸ್‍ಪಿ ಕಚೇರಿಗೆ ಬೆಳಗ್ಗೆ ಭೇಟಿ ನೀಡಿದ್ದ ವಕೀಲ ಉಮೇಶ್, ಶ್ರೀಗಳ ಆರೋಗ್ಯ ವಿಚಾರಿಸಿ ಬೇಲ್ ಸಂಬಂಧ ಚರ್ಚಿಸಿದ್ದಾರೆ. ಇದನ್ನೂ ಓದಿ: ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ಮುರುಘಾ ಶ್ರೀ ವಜಾ
ಇಂದು ಬೆಳಗ್ಗೆ ಡಿವೈಎಸ್‍ಪಿ ಕಚೇರಿಗೇ ವೈದ್ಯರನ್ನು ಕರೆಸಿಕೊಂಡು ಶ್ರೀಗಳ ಆರೋಗ್ಯ ತಪಾಸಣೆ ಮಾಡಿಸಿದ್ರು. ಈ ಮಧ್ಯೆ, ಪೊಲೀಸರು ಆರೋಪಿಗಳ ಪರನಾ? ಅನ್ನೋ ಚರ್ಚೆ ಎದ್ದಿದೆ. ಕಣ್ಮುಂದೆ ಇದ್ದಾಗ ವಶಕ್ಕೆ ಪಡೆಯದ ಪೊಲೀಸರು ಇದೀಗ ಬಸವಾದಿತ್ಯ, ಪರಮಶಿವಯ್ಯ, ಗಂಗಾಧರಯ್ಯಗಾಗಿ ಹುಡುಕಾಟದ ನಾಟಕವಾಡುತ್ತಿದ್ದಾರೆ. ಮೂವರ ಫೋನ್ ಸದ್ಯಕ್ಕೆ ಸ್ವಿಚ್ ಆಫ್ ಆಗಿದೆ. ನಾಪತ್ತೆ ಆದ್ರೂ ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀ ಮೆಡಿಕಲ್ ಟೆಸ್ಟ್ ಮುಕ್ತಾಯ – ಪುರುಷತ್ವ ಪರೀಕ್ಷೆಯಲ್ಲಿ ಶ್ರೀಗಳು ಫಿಟ್
Live Tv
[brid partner=56869869 player=32851 video=960834 autoplay=true]