ಬೆಂಗಳೂರು: ವಿಧಾನಪರಿಷತ್‍ನ ಶಿಕ್ಷಕರು, ಪದವೀಧರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದಿದೆ. ವಾಯುವ್ಯ ಪದವೀಧರ, ದಕ್ಷಿಣ ಪದವೀಧರ, ವಾಯುವ್ಯ ಶಿಕ್ಷಕರು, ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಶಾಂತಿಯುತ ಮತದಾನ ನಡೆದಿದೆ.
Advertisement
ನಾಲ್ಕು ಸ್ಥಾನಗಳಿಗೂ ಬಿಜೆಪಿ, ಕಾಂಗ್ರೆಸ್ ಸ್ಪರ್ಧೆ ಮಾಡಿದೆ. ವಾಯುವ್ಯ ಪದವೀಧರ ಕ್ಷೇತ್ರ ಬಿಟ್ಟು ಮೂರು ಕಡೆ ಜೆಡಿಎಸ್ ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿದೆ. ಎಂಟನೇ ಬಾರಿ ಸ್ಪರ್ಧೆ ಮಾಡಿರುವ ಹೊರಟ್ಟಿ ಸೇರಿ 49 ಅಭ್ಯರ್ಥಿಗಳ ಭವಿಷ್ಯ ನಾಡಿದ್ದು ಜೂನ್ 15ರಂದು ಗೊತ್ತಾಗಲಿದೆ. ಇದನ್ನೂ ಓದಿ: ಇಂದು ಶಿಕ್ಷಕ, ಪದವೀಧರ ಕ್ಷೇತ್ರಕ್ಕೆ ಮತದಾನ: 1 ಮತಕ್ಕೆ 10 ಸಾವಿರ ರೂ.?
Advertisement
Advertisement
ಮತಕೇಂದ್ರದಿಂದ 200 ಮೀಟರ್ ದೂರ ಇರಬೇಕು ಇದು ಡಿಸಿ ಆದೇಶ ಎಂದ ಹುಬ್ಬಳ್ಳಿಯ ಮಹಿಳಾ ಪಿಎಸ್‍ಐಗೆ ಬಸವರಾಜ ಹೊರಟ್ಟಿ, ಯಾರವನು ಡಿಸಿ ಎಂದು ಕೇಳಿದ್ದಾರೆ. ಇನ್ನು, ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಒಂದು ವೋಟ್‍ಗೆ 10 ಸಾವಿರ ಹಂಚಿದ್ದಾರೆ. 17 ಲಕ್ಷ ಸೀಜ್ ಆಗಿದೆ. ಕೂಡ್ಲೇ ಅವರ ವಿರುದ್ಧ ಕ್ರಮ ಆಗ್ಬೇಕು ಎಂದು ಬಿಜೆಪಿ ಶಾಸಕ ಅನಿಲ್ ಬೆನಕೆ ಒತ್ತಾಯಿಸಿದ್ರು. ನಾವು ಬೆಳ್ಳಿ ತಟ್ಟೆ, ಸ್ಮಾರ್ಟ್ ವಾಚ್ ನೀಡುತ್ತಿದ್ದೇವೆ ಅನ್ನೋದು ಸುಳ್ಳು ಅಂದ್ರು. ಆದ್ರೆ, ಮತಗಟ್ಟೆಯಲ್ಲಿ ಮೊಬೈಲ್ ಬಳಸಿ ತಾವೇ ನೀತಿ ಸಂಹಿತೆ ಉಲ್ಲಂಘಿಸಿದ್ರು. ಈ ಸಂಬಂಧ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಗೆಲ್ಲೋದು ಪಕ್ಕಾ ಎಂದು ಜೆಡಿಎಸ್ ಎಂಎಲ್‍ಸಿ ಮರಿತಿಬ್ಬೇಗೌಡ ಹೇಳಿದ್ದಾರೆ. ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಮಂಡ್ಯ, ಮೈಸೂರು, ಚಾಮರಾಜನಗರ, ವಿಜಯಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು.