ಸಾಹುಕಾರನಿಗೆ ಸವಾಲು ಹಾಕಿ ಎರಡನೇ ಬಾರಿ ಗೆದ್ದ ಹೆಬ್ಬಾಳ್ಕರ್‌

Public TV
1 Min Read
Lakshmi Hebbalkar 1

ಬೆಳಗಾವಿ: ಕುಂದಾ ನಗರಿಯ ಜಿದ್ದಾ ಜಿದ್ದಿನ ಕಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವಿನ ನಗೆ ಬೀರಿದ್ದಾರೆ. ಪಿಎಲ್‌ಡಿ ಬ್ಯಾಂಕ್ ಚುನಾವಣೆ ನಂತರ ಎರಡನೇ ಬಾರಿ ರಮೇಶ್ ಜಾರಕಿಹೊಳಿಗೆ ಲಕ್ಷ್ಮಿ ಹೆಬ್ಬಾಳ್ಕರ್‌ರಿಂದ ಮುಖಭಂಗವಾಗಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚೆನ್ನರಾಜುವನ್ನು ಸೋಲಿಸಲೇಬೇಕೆಂಬ ಹಟದಲ್ಲಿ ಸಹೋದರ ಲಖನ್ ಅವರನ್ನು ರಮೇಶ್ ಜಾರಕಿಹೋಳಿ ಅಖಾಡಕ್ಕೆ ನಿಲ್ಲಿಸಿದ್ದರು. ಇಬ್ಬರು ಘಟಾನುಘಟಿ ನಾಯಕರ ಫೈಟ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿ ಮಠ  ಸೋತಿದ್ದಾರೆ. ಈ ಮೂಲಕ ಸಾಹುಕಾರನಿಗೆ ಸವಾಲು ಹಾಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿಜಯದ ನಗೆ ಬೀರಿದ್ದಾರೆ. ಇದನ್ನೂ ಓದಿ: ಹಣ ಬಲದ ಎದುರು ಜನ ಬಲಕ್ಕೆ ಸೋಲು: ಎಚ್‌ಡಿಕೆ

LAKSHMI HEBBALKAR RAMESH JARAKIHOLI

ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚೆನ್ನರಾಜು ಜಯಗಳಿಸಿದ್ದಾರೆ. ಎರಡನೇ ಸ್ಥಾನವನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಖನ್ ಜಾರಕಿಹೊಳಿ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ಇದನ್ನೂ ಓದಿ: ಪರಿಷತ್‌ ಫಲಿತಾಂಶ – ಡಿಕೆಶಿಗೆ ಮುನ್ನಡೆ, ಸಿದ್ದರಾಮಯ್ಯಗೆ ಹಿನ್ನಡೆ

ಪರಿಷತನ್‌ನಲ್ಲಿ ಮುಖ್ಯ ಸಚೇತಕರಾಗಿದ್ದ ಮಹಾಂತೇಶ ಕವಟಗಿಮಠ ಅವರನ್ನು ಗೆಲ್ಲಿಸಲು ರಮೇಶ್‌ ಜಾರಕಿಹೊಳಿ ಜೊತೆ ಬಿಜೆಪಿ ನಾಯಕರು ಭಾರೀ ಪ್ರಯತ್ನ ನಡೆಸಿದ್ದರು. ಆದರೆ ಚುನಾವಣೆಯಲ್ಲಿ ಈ ಪ್ರಯತ್ನ ವಿಫಲವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *