ಬೆಂಗಳೂರು: ವಿಧಾನ ಪರಿಷತ್ ಫಲಿತಾಂಶ ಪ್ರಕಟಗೊಂಡಿದ್ದು ಕಾಂಗ್ರೆಸ್ ಪಾಳೆಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ಯಾರಿಗೆ ಹಿನ್ನಡೆ? ಯಾರಿಗೆ ಮುನ್ನಡೆ ಎಂಬ ಚರ್ಚೆ ಆರಂಭವಾಗಿದೆ.
ಹೌದು. ಪಕ್ಷದ ಅಭ್ಯರ್ಥಿಗಳ ಪೈಕಿ ಯಾರ ಬೆಂಬಲಿಗರು ಗೆದ್ದರು.? ಯಾರ ಕೈ ಮೇಲಾಯಿತು ಎಂಬ ಚರ್ಚೆಯಲ್ಲಿ ಡಿಕೆಶಿ ಬಣಕ್ಕೆ ಮುನ್ನಡೆ ಸಿಕ್ಕಿದೆ. ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಿಕೊಂಡ ಕೈ ನಾಯಕರಲ್ಲಿ ಡಿಕೆಶಿಗೆ ಮೇಲುಗೈ ಸಾಧಿಸಿದರೆ ತಮ್ಮ ಆಪ್ತರ ಸೋಲಿನಿಂದಾಗಿ ಸಿದ್ದರಾಮಯ್ಯಗೆ ಹಿನ್ನಡೆಯಾಗಿದೆ. ಇದನ್ನೂ ಓದಿ: ಕಳೆದ ಬಾರಿ ಸೋತ ಕಡೆ ಈ ಬಾರಿ ನಾವು ಗೆದ್ದಿದ್ದೇವೆ: ಡಿಕೆಶಿ

ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರಿನಲ್ಲಿ ತಮ್ಮ ಆಪ್ತರಿಗೆ ಸಿದ್ದರಾಮಯ್ಯ ಟಿಕೆಟ್ ನೀಡಿದ್ದರು. ಮೈಸೂರು ಹೊರತುಪಡಿಸಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಗೆ ಸೋಲಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಬೆಂಬಲಿಗರ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಡಿಕೆಶಿಗೆ ಮೇಲುಗೈ ಸಿಕ್ಕಿದೆ.

