ನವದೆಹಲಿ: ದೇಶದಲ್ಲಿರುವ ಎಲ್ಲಾ ಶಾಸಕರ ಪೈಕಿ ಕರ್ನಾಟಕದ ಶಾಸಕರು ಅತಿ ಹೆಚ್ಚಿನ ಶ್ರೀಮಂತರಾಗಿದ್ದು, ಅದರಲ್ಲೂ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಕ್ಷೇತ್ರದ ಶಾಸಕ ಎನ್.ನಾಗರಾಜ್ ದೇಶದಲ್ಲಿಯೇ ಅತ್ಯಂತ ಶ್ರೀಮಂತ ಶಾಸಕ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾಮ್ರ್ಸ್ (ಎಡಿಆರ್) ಹೇಳಿದೆ.
ಎಡಿಆರ್ ಸಂಸ್ಥೆಯು ಭಾರತದ ಎಲ್ಲಾ ಶಾಸಕರ ವಾರ್ಷಿಕ ಆದಾಯವನ್ನು ಲೆಕ್ಕ ಹಾಕಿ ವರದಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕದ ಒಟ್ಟು 203 ಶಾಸಕರ ಸರಾಸರಿ ವಾರ್ಷಿಕ ಆದಾಯ ಆದಾಯ 1.11 ಕೋಟಿ ರೂ. ಆಗಿದೆ ಎಂದು ತಿಳಿಸಿದೆ.
Advertisement
Advertisement
ಕರ್ನಾಟಕಕ್ಕೆ ಹೋಲಿಸಿದರೆ ಛತ್ತೀಸ್‍ಗಢ ರಾಜ್ಯದ ವಾರ್ಷಿಕ ಆದಾಯ ಅತಿ ಕಡಿಮೆಯಾಗಿದ್ದು, ಸರಾಸರಿಯ ಪ್ರಕಾರ ಶಾಸಕರ ಆದಾಯ 5.8 ಲಕ್ಷ ರೂಪಾಯಿ ಇದೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರವಿದೆ. ದೇಶದಲ್ಲಿ ಒಟ್ಟಾರೆ 4,086 ಹಾಲಿ ಶಾಸಕರ ಪೈಕಿ 3,145 ಶಾಸಕರು ಸ್ವ-ಘೋಷಿತ ಆಸ್ತಿ ವಿವರವನ್ನು ನೀಡಿದ್ದು, ಇನ್ನುಳಿದ 941 ಶಾಸಕರು ಇದುವರೆಗೂ ತಮ್ಮ ಆಸ್ತಿಯನ್ನೇ ಘೋಷಿಸಿಕೊಂಡಿಲ್ಲ ಎಂದು ವರದಿ ಉಲ್ಲೇಖಿಸಿದೆ.
Advertisement
ಪಟ್ಟಿಯಲ್ಲಿರುವ ಕರ್ನಾಟಕದ ಶಾಸಕರು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜು ವಾರ್ಷಿಕ ವೈಯಕ್ತಿಕ ಆದಾಯ 157.04 ಕೋಟಿ ರೂಪಾಯಿಗಳಾಗಿದ್ದು, ಈ ಮೂಲಕ ಮೂಲಕ ದೇಶದಲ್ಲಿಯೇ ಅತ್ಯಂತ ಶ್ರೀಮಂತ ಶಾಸಕ ಎಂದು ಗುರುತಿಸಿಕೊಂಡು ಅಗ್ರಸ್ಥಾನದಲ್ಲಿದಾರೆ. ತನ್ನ ವೃತ್ತಿ ವಿವರದಲ್ಲಿ ಕೃಷಿ ಮತ್ತು ವ್ಯವಹಾರದಿಂದ ಆದಾಯ ಸಂಪಾದಿಸಿದ್ದೇನೆ ಎಂದು ಎಂಟಿಬಿ ಹೇಳಿದ್ದಾರೆ.
Advertisement
27.77 ಕೋಟಿ ವಾರ್ಷಿಕ ಆದಾಯ ಘೋಷಿಸಿಕೊಳ್ಳುವ ಮೂಲಕ 3ನೇ ಸ್ಥಾನವನ್ನು ಕೆ.ಆರ್.ಪುರಂ ಕಾಂಗ್ರೆಸ್ ಶಾಸಕ ಭೈರತಿ ಬಸವರಾಜು ಪಡೆದುಕೊಂಡಿದ್ದಾರೆ. ಬಸವರಾಜು ವ್ಯವಸಾಯ ಹಾಗೂ ಉದ್ಯಮ ಎಂದು ತನ್ನ ವೃತ್ತಿ ವಿವರವನ್ನು ನೀಡಿದ್ದಾರೆ.
11ನೇ ಸ್ಥಾನ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಸಿಕ್ಕಿದ್ದು, ಕೈಗಾರಿಕೆ ಮತ್ತು ಉದ್ಯಮಗಳ ಮೂಲಕ 7.95 ಕೋಟಿ ರೂಪಾಯಿ ಆದಾಯವನ್ನು ಘೋಷಿಸಿದ್ದಾರೆ. 13 ನೇ ಸ್ಥಾನದಲ್ಲಿ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಇದ್ದು, ನಲಪಾಡ್ ಗ್ರೂಪ್ ಆಫ್ ಕಂಪೆನಿಸ್ ಮೂಲಕ 7.04 ಕೋಟಿ ರೂಪಾಯಿ ಆದಾಯ ತೋರಿಸಿದ್ದಾರೆ.
ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬ ರೆಡ್ಡಿ ದೇಶದ 15 ನೇ ಶ್ರೀಮಂತ ಶಾಸಕರಾಗಿದ್ದು, ಹೋಟೆಲ್ ಉದ್ಯಮದ ಮೂಲಕ ವಾರ್ಷಿಕ 6.70 ಕೋಟಿ ಆದಾಯ ಘೋಷಿಸಿಕೊಂಡಿದ್ದಾರೆ. 16 ನೇ ಸ್ಥಾನದಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಜೆಡಿಎಸ್‍ನ ನಾರಾಯಣಗೌಡ ಉದ್ಯಮದ ಮೂಲಕ 5.89 ಕೋಟಿ ರೂಪಾಯಿ ಆದಾಯವನ್ನು ತೋರಿಸಿದ್ದಾರೆ.
ಅತಿ ಕಡಿಮೆ ಆದಾಯ ಹೊಂದಿರುವ ಶಾಸಕರು
1,301 ರೂಪಾಯಿಗಳನ್ನು ತೋರಿಸುವ ಮೂಲಕ ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಸಿಂಗನಮಲ ವಿಧಾನಸಭಾ ಕ್ಷೇತ್ರದ ಬಿ.ಯಾಮಿನಿ ಬಾಲಾ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾರೆ. 5ನೇ ಸ್ಥಾನ ಚಿಕ್ಕಮಗಳೂರು ಗ್ರಾಮಾಂತರ ಬಿಜೆಪಿ ಶಾಸಕ ಸಿ.ಟಿ.ರವಿ ಅವರಿಗೆ ಸಿಕ್ಕಿದ್ದು, ತನ್ನ ವಾರ್ಷಿಕ ವೈಯಕ್ತಿಕ ಆದಾಯ 16,920 ರೂ. ಎಂದು ಘೋಷಿಸಿಕೊಂಡಿದ್ದಾರೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ವಾರ್ಷಿಕ ವೈಯಕ್ತಿಕ ಆದಾಯ 48 ಸಾವಿರ ರೂಪಾಯಿ ಆದಾಯ ಹೊಂದುವ ಮೂಲಕ 13ನೇ ಸ್ಥಾನ ಸಿಕ್ಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv