ವಿಜಯಪುರ: ಸಿಎಂ ಬೊಮ್ಮಾಯಿ ಇರುವವರೆಗೂ ಮಂತ್ರಿ ಮಂಡಳ ರಚನೆ ಬೇಡ. ಇದೀಗ ಸಚಿವ ಸ್ಥಾನದಲ್ಲಿರುವ ಪುಣ್ಯಾತ್ಮರು ಸರಿಯಾಗಿ ಕೆಲಸ ಮಾಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಸ್‍ಐ ಅಕ್ರಮದಲ್ಲಿ ತುಂಬಾ ಜನರಿಗೆ ಪಾಲು ಇದೆ. ಮಾಜಿ ಮುಖ್ಯಮಂತ್ರಿ ಮಗ ಸೇರಿದಂತೆ ಇನ್ನೂ ಹಲವು ದೊಡ್ಡ ದೊಡ್ಡವರು ಬಲೆಗೆ ಬೀಳುತ್ತಾರೆ. ಹಗರಣದಲ್ಲಿ ಯಾರು ಯಾರು ಇದ್ದಾರೆ ಎಂದು ಸ್ಪಷ್ಟಪಡಿಸಬೇಕು. ಇದು ಒಂದು ದೊಡ್ಡ ಹಗರಣ. ಇದನ್ನು ಮುಚ್ಚಿ ಹಾಕುವ ಯತ್ನ ಮಾಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ಸ್ಟ್ರಾಂಗ್ ಇದ್ದಾರೆ. ಹಾಗಾಗಿ ಅವರನ್ನು ಸರ್ಕಾರ ವರ್ಗಾವಣೆ ಮಾಡಬಾರದು. ಪಿಎಸ್‍ಐ ಅಕ್ರಮ ದಲ್ಲಿ ದೊಡ್ಡ ದೊಡ್ಡವರು ಇದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದನ್ನೂ ಓದಿ: ನೀರಿಗಾಗಿ ಶಾಲಾ ಮಕ್ಕಳಿಂದ ಗ್ರಾಪಂ ಕಚೇರಿಗೆ ತಟ್ಟೆ, ಲೋಟ ಹಿಡಿದು ಮುತ್ತಿಗೆ
ಅಗ್ನಿಪಥ್ ಯೋಜನೆಯ ಕುರಿತಾಗಿ ಮಾತನಾಡಿ, ಅಗ್ನಿಪಥ್ ಯೋಜನೆ ಒಳ್ಳೆಯದು. ದೇಶ ಉಳಿಯಬೇಕಾದರೆ ಅಗ್ನಿಪಥ್ ಯೋಜನೆ ಬೇಕು. ದೇಶ ದ್ರೋಹಿಗಳಿಗೆ ಬುದ್ಧಿ ಕಲಿಸಬೇಕಾದ ಅನಿವಾರ್ಯತೆ ಇದೆ. ದೇಶದ್ರೋಹಿ ಕೆಲಸ, ದೇಶದ ಅನ್ನ ತಿಂದು ಮೋಸ ಮಾಡುವವರನ್ನು ಹದ್ದುಬಸ್ತಿಗೆ ತರಬೇಕು ಎಂದರು. ಇದನ್ನೂ ಓದಿ: ಕೆಆರ್‌ಎಸ್‌ನಿಂದ 50 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ – ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಮುಳಗಡೆ