ಬೆಂಗಳೂರು: ನಾನು ಆಸ್ತಿಯ ವಿಚಾರಕ್ಕೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ಬಳಿ ಜಾಸ್ತಿ ಕೇಳುವುದಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಪತ್ನಿ ಉಷಾ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇಂಧನ ಸಚಿವ ಡಿಕೆ ಶಿವಕುಮಾರ್ ಕುಟುಂಬದವರನ್ನು ಸೋಮವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ವಿಚಾರಣೆ ನಡೆಸಿ ಪ್ರಶ್ನೆ ಕೇಳಿದ್ದಾರೆ. ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯ ಮಧ್ಯಾಹ್ನ ಕ್ವೀನ್ಸ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಹೀಗಾಗಿ ಏನು ಪ್ರಶ್ನೆ ಕೇಳಿದ್ದಾರೆ ಅದಕ್ಕೆ ಉತ್ತರ ಏನು ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಪತ್ನಿ ಉಷಾ ಉತ್ತರಿಸಿದ್ದು ಹೀಗೆ?
ಆರಂಭದಲ್ಲಿ ಅಧಿಕಾರಿಗಳು ನಿಮ್ಮ ಯಜಮಾನರು ಎಷ್ಟು ಆಸ್ತಿಯನ್ನು ಹೊಂದಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನಾನು ಆಸ್ತಿಯ ವಿಚಾರಕ್ಕೆ ಜಾಸ್ತಿ ತಲೆ ಕೆಡಿಸಿಕೊಂಡಿಲ್ಲ. ನಾನು ಅವರ ಬಳಿ ಜಾಸ್ತಿ ಕೇಳುವುದಿಲ್ಲ ಎಂದು ಉತ್ತರಿಸಿದ್ದಾರೆ. ನಿಮ್ಮ ಹೆಸರಲ್ಲಿ ಎಷ್ಟು ಆಸ್ತಿ ಇದೆ ಎಂಬುದರ ಬಗ್ಗೆ ನಿಮಗೆ ಗೊತ್ತಾ ಎಂದು ಕೇಳಿದ್ದಕ್ಕೆ ನಾಲ್ಕು ಕಡೆಯಲ್ಲಿ ಜಾಗ ತೆಗೆದುಕೊಂಡಿದ್ದಾರೆ. ಆ ಜಾಗದ ನೊಂದಣಿಗೆ ನಾನೇ ಹೋಗಿದ್ದೆ ಎಂದು ಹೇಳಿದ್ದಾರೆ.
Advertisement
ಅಪಾರ್ಟೆಮೆಂಟ್ ಗಳೆಲ್ಲ ನಿಮ್ಮ ಹೆಸರಲ್ಲಿ ಇರೋದಾ ಎನ್ನುವ ಪ್ರಶ್ನೆಗೆ ಬೆಂಗಳೂರಿನ ಸುಜಾತ ಬಳಿಯಲ್ಲಿ ಇರುವ ಒಂದು ಅಪಾರ್ಟ್ ಮೆಂಟ್ ಗೆ ನನ್ನ ಮಾಲೀಕತ್ವ ಇದೆ. ಅದಕ್ಕೆ ನಾವು ಪ್ರತಿ ವರ್ಷ ತೆರಿಗೆ ನೀಡುತ್ತೇವೆ ಎಂದು ಉತ್ತರಿಸಿದ್ದಾರೆ.
Advertisement
4 ಕಾಲೇಜುಗಳಲ್ಲಿ ನಿಮ್ಮ ಷೇರ್ ಎಷ್ಟು ಎಂದು ಕೇಳಿದ್ದಕ್ಕೆ ಗ್ಲೋಬಲ್ ಅಕಾಡಮಿ ಆಫ್ ಟೆಕ್ನಾಲಜಿಯಲ್ಲಿ ನನ್ನ ಪಾಲುದಾರಿಕೆ ಇದೆ. 11 ಜನ ನಿರ್ದೇಶಕರಲ್ಲಿ ನಾನು ಒಬ್ಬಳು ಎಂದು ಹೇಳಿದ್ದಾರೆ. ಇದೇ ವೇಳೆ 5 ಕಾಲೇಜಿನಲ್ಲಿ ಪ್ರತಿ ವರ್ಷ ಶುಲ್ಕ ಪಡೆಯುವಾಗ ಯಾವ ಮಾನದಂಡ ಇರುತ್ತದೆ? ಎಷ್ಟು ಶುಲ್ಕ ನಿಗದಿ ಮಾಡುತ್ತೀರಿ ಎಂದು ಕೇಳಿದಾಗ ಅದೆಲ್ಲವನ್ನು ಗ್ಲೋಬಲ್ ಕಾಲೇಜು ನಿರ್ದೇಶಕ ನಂದೀಶ್ ನೋಡಿಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
Advertisement
ನಂದೀಶ್ ಮನೆಯಲ್ಲಿ ಐಟಿ ದಾಳಿ ಆದಾಗ ನಿಮ್ಮ ಆಸ್ತಿಗಳ ವಿವರ ಸಿಕ್ಕಿದೆ ಎಂದಾಗ ಅದು ನನಗೆ ಗೊತ್ತಿಲ್ಲ ನೀವೆ ಹೇಳಬೇಕು ಎಂದು ತಿಳಿಸಿದ್ದಾರೆ. ಗ್ಲೋಬಲ್ ಕಾಲೇಜಿನಲ್ಲಿ ಅತಿಯಾದ ಶುಲ್ಕ ಪಡೆದು ಐಟಿಗೆ ವಂಚನೆ ಮಾಡುತ್ತಿದ್ದೀರಿ ಎನ್ನುವ ಪ್ರಶ್ನೆಗೆ ಇಲ್ಲ ಪ್ರತಿ ವರ್ಷ ಕೂಡ ಐಟಿಗೆ ಸರಿಯಾಗಿ ತೆರಿಗೆ ಪಾವತಿ ಮಾಡುತ್ತಿದ್ದೇವೆ. ಮೋಸ ಮಾಡಿಲ್ಲ ಎಂದು ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನಾನು ತೆರೆದ ಪುಸ್ತಕ, ಯಾವುದಕ್ಕೂ ಭಯಪಡಲ್ಲ: ಡಿಕೆ ಶಿವಕುಮಾರ್
ಇದನ್ನೂ ಓದಿ: Exclusive: ಡಿಕೆ ಶಿವಕುಮಾರ್ ತಾಯಿ ಗೌರಮ್ಮಗೆ ಐಟಿ ಕೇಳಿದ ಪ್ರಶ್ನೆಗಳು ಏನು..?
ಇದನ್ನೂ ಓದಿ: ಡಿಕೆಶಿ ಮೇಲೆ ಐಟಿ ದಾಳಿಗೆ ಪ್ಲ್ಯಾನ್ ನಡೆದಿದ್ದು ಹೀಗೆ