ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಕುಟುಂಬದವರನ್ನು ಸೋಮವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಹೀಗಾಗಿ ಏನು ಪ್ರಶ್ನೆ ಕೇಳಿದ್ದಾರೆ ಅದಕ್ಕೆ ಉತ್ತರ ಏನು ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ತಾಯಿಗೆ ಗೌರಮ್ಮ ಉತ್ತರಿಸಿದ್ದು ಹೀಗೆ:
ತಾಯಿ ಗೌರಮ್ಮ ಅವರಿಗೆ ಕನಕಪುರದ ಆಸ್ತಿಯ ಬಗ್ಗೆ ವಿಚಾರಿಸಿದ್ದಾರೆ. ಇದಕ್ಕೆ ನನ್ನ ಮಗ ಐದು ವರ್ಷದ ಹಿಂದೆ ತೆಗೆದುಕೊಟ್ಟಿದ್ದಾನೆ. ಅದರ ಬೆಲೆ ನನಗೇನು ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ಕೃಷಿ ಭೂಮಿಯ ಬಗ್ಗೆ ನಿಮಗೇನಾದ್ರೂ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದ್ದಕ್ಕೆ ನಮ್ಮ ಯಜಮಾನ್ರು ಬದುಕಿದ್ದಾಗ ಎಷ್ಟು ಆಸ್ತಿ ನನ್ನ ಹೆಸರಲ್ಲಿ ಇತ್ತು ಅಷ್ಟೇ ಆಸ್ತಿ ಈಗಲೂ ಇದೆ ಎಂದು ಹೇಳಿದ್ದಾರೆ.
Advertisement
ಭೂಮಿಯಿಂದ ನಿಮಗೆ ವರ್ಷಕ್ಕೆ ಆದಾಯ ಎಷ್ಟು ಬರುತ್ತೆ ಎಂದು ಕೇಳಿದ್ದಕ್ಕೆ ನಾವು ಪೂರ್ತಿ ಜಮೀನನ್ನು ನೋಡಿಕೊಳ್ಳುತ್ತಿಲ್ಲ. ನನ್ನಿಂದ ಎಷ್ಟು ಸಾಧ್ಯವಾಗುತ್ತದೆ ಅಷ್ಟನ್ನು ಮಾತ್ರ ನೋಡಿಕೊಳ್ಳುತ್ತೇವೆ. ವರ್ಷಕ್ಕೆ ಮೂರರಿಂದ ನಾಲ್ಕು ಲಕ್ಷ ಬರಬಹುದು ಎಂದು ಮಾಹಿತಿ ನೀಡಿದ್ದಾರೆ. ಕನಕಪುರದಲ್ಲಿ ಇರುವ ವಾಣಿಜ್ಯ ಕಟ್ಟಡದ ಬಾಡಿಗೆ ತಿಂಗಳಿಗೆ ಎಷ್ಟು ಎನ್ನುವ ಪ್ರಶ್ನೆಗೆ ನನ್ನ ಕಿರಿ ಮಗ 15 ಲಕ್ಷ ರೂ. ಬಾಡಿಗೆ ಬರುತ್ತದೆ ಅಮ್ಮ ಎಂದು ಯಾವಾಗ್ಲೋ ಹೇಳಿದ್ದ ನೆನಪು. ಅದನ್ನು ನಾನು ಪಡೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
Advertisement
ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಎಷ್ಟು ಇದೆ ಎಂದು ಕೇಳಿದ್ದಕ್ಕೆ ನನ್ನ ಮಗ ತಿಂಗಳಿಗೆ ಹಣ ಹಾಕೋದಕ್ಕೆ ಅಂತ ಒಂದು ಅಕೌಂಟ್ ಮಾಡಿಸಿಕೊಟ್ಟಿದ್ದಾನೆ ಅದನ್ನು ಮಾತ್ರ ನಾನು ಉಪಯೋಗಿಸುತ್ತಿದ್ದೇನೆ ಎಂದು ಉತ್ತರಿಸಿದಾಗ ಅಧಿಕಾರಿಗಳು ಸಾಕಷ್ಟು ಬ್ಯಾಂಕ್ ಗಳಲ್ಲಿ ಕೋಟ್ಯಾಂತರ ರೂಪಾಯಿ ವಹಿವಾಟು ಮಾಡಿಲ್ಲವೇ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ನನಗೆ ಏನು ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.
Advertisement
ಕನಕಪುರದಲ್ಲಿ 70 ಕೋಟಿ ರೂ. ಆಸ್ತಿ ನಿಮ್ಮ ಹೆಸರಲ್ಲೇ ಇರೋದು ಅಲ್ಲವೇ ಎಂದು ಪ್ರಶ್ನಿಸಿದಾಗ ಜಮೀನು ಬಿಟ್ಟರೆ ನನಗೇನು ಗೊತ್ತಿಲ್ಲ ಎಂದು ಗೌರಮ್ಮ ಉತ್ತರಿಸಿದ್ದಾರೆ.
ಇದನ್ನೂ ಓದಿ: ನಾನು ತೆರೆದ ಪುಸ್ತಕ, ಯಾವುದಕ್ಕೂ ಭಯಪಡಲ್ಲ: ಡಿಕೆ ಶಿವಕುಮಾರ್
ಇದನ್ನೂ ಓದಿ: ಸಿಎಂ ವಿರುದ್ಧ ಕಿಡಿಕಾರಿದ ಡಿಕೆ ಶಿವಕುಮಾರ್ ತಾಯಿ
ಇದನ್ನೂ ಓದಿ: ಡಿಕೆಶಿ ಮೇಲೆ ಐಟಿ ದಾಳಿಗೆ ಪ್ಲ್ಯಾನ್ ನಡೆದಿದ್ದು ಹೀಗೆ