ಬೆಂಗಳೂರು: ನಾನು ಇದೂವರೆಗೆ ತಂದೆಯ ಬಳಿ ಆಸ್ತಿ ವಿಚಾರದ ಬಗ್ಗೆ ಕೇಳಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇಂಧನ ಸಚಿವ ಡಿಕೆ ಶಿವಕುಮಾರ್ ಕುಟುಂಬದವರನ್ನು ಸೋಮವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ವಿಚಾರಣೆ ನಡೆಸಿ ಪ್ರಶ್ನೆ ಕೇಳಿದ್ದಾರೆ. ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯ ಮಧ್ಯಾಹ್ನ ಕ್ವೀನ್ಸ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಹೀಗಾಗಿ ಏನು ಪ್ರಶ್ನೆ ಕೇಳಿದ್ದಾರೆ ಅದಕ್ಕೆ ಉತ್ತರ ಏನು ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಪುತ್ರಿ ಐಶ್ವರ್ಯ ಉತ್ತರಿಸಿದ್ದು ಹೀಗೆ:
ನಿಮ್ಮ ತಂದೆ ನಿಮ್ಮ ಹೆಸರಲ್ಲಿ ಎಷ್ಟು ಆಸ್ತಿ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಅದೆಲ್ಲಾ ನನಗೆ ಗೊತ್ತಿಲ್ಲ. ಅವರು ಇದುವರೆಗೂ ಹೇಳಿಲ್ಲ ನಾನು ಕೇಳಿಲ್ಲ ಎಂದು ಹೇಳಿದ್ದಾರೆ. ಗ್ಲೋಬಲ್ ಕಾಲೇಜಿನಲ್ಲಿ ನಿಮ್ಮ ಪಾತ್ರ ಏನು? ನೀವು ಪಾಲುದಾರರಾ ಎಂದು ಕೇಳಿದ್ದಕ್ಕೆ ನಾನು ಪಾಲುದಾರಳಾಗಿ ಇಲ್ಲ. ಅಪ್ಪ ಮಾಡಿರಬಹುದು ಅದರ ಬಗ್ಗೆ ಗೊತ್ತಿಲ್ಲ ನಾನು ಅಲ್ಲಿ ಟ್ರಸ್ಟಿಯಾಗಿ ಇದ್ದೇನೆ ಎಂದು ಹೇಳಿದರು.
Advertisement
ಟ್ರಸ್ಟಿ ಎಂದರೆ ಏನು? ನಿಮ್ಮ ಕೆಲಸ ಏನಿರುತ್ತದೆ ಎಂದಿದ್ದಕ್ಕೆ ಇಡೀ ಕಾಲೇಜಿನ ಬಗ್ಗೆ ಶಿಕ್ಷಣ ಟ್ರಸ್ಟ್ ಅಂತ ಮಾಡಲಾಗಿದೆ. ಅದರಲ್ಲಿ ನಾನು ಒಬ್ಬಳು ಟ್ರಸ್ಟಿ ಅಷ್ಟೇ. ಸಲಹೆ ಸೂಚನೆಗಳನ್ನು ಕೊಡಲಾಗುತ್ತದೆ ಎಂದು ಉತ್ತರಿಸಿದ್ದಾರೆ.
Advertisement
ಇದನ್ನೂ ಓದಿ: Exclusive: ಡಿಕೆ ಶಿವಕುಮಾರ್ ಪತ್ನಿ ಉಷಾಗೆ ಐಟಿ ಕೇಳಿದ ಪ್ರಶ್ನೆಗಳು ಏನು?
Advertisement
ಕಾಲೇಜಿನ ಹಣಕಾಸಿನ ವ್ಯವಹಾರದ ಬಗ್ಗೆ ಕೇಳಿದ ಪ್ರಶ್ನೆಗೆ ನಾವು ಮಾಡಿಕೊಂಡಿರುವುದು ಎಜ್ಯುಕೇಶನ್ ಟ್ರಸ್ಟ್ ಅಂತ ಅಲ್ಲಿ ಹಣಕಾಸಿನ ವ್ಯವಹಾರ ಬರುವುದಿಲ್ಲ ಎಂದು ಹೇಳಿದ್ದಾರೆ.ಕೋರ್ಸ್ ಗಳಿಗೆ ಶುಲ್ಕ ನಿಗದಿಯನ್ನು ನಿಮ್ಮ ಟ್ರಸ್ಟ್ ಮಾಡುತ್ತಾ ಎಂದು ಕೇಳಿದ್ದಕ್ಕೆ ನಾವು ಬೇರೆ ಬೇರೆ ಕಾಲೇಜಿನ ಮಾಹಿತಿ ಹೇಳ್ತೀವಿ. ಶುಲ್ಕ ನಿಗದಿ ಮಾಡೋದು ನಿರ್ದೇಶಕರು ಎಂದು ಉತ್ತರಿಸಿದ್ದಾರೆ.
ವಿದೇಶದಲ್ಲಿ ನಿಮ್ಮ ತಂದೆ ನಿಮ್ಮ ಹೆಸರಲ್ಲಿ ಆಸ್ತಿ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಇಲ್ಲ ಇದುವರೆಗೂ ನನಗೆ ಆ ಮಾಹಿತಿಗಳನ್ನು ನೀಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾನು ತೆರೆದ ಪುಸ್ತಕ, ಯಾವುದಕ್ಕೂ ಭಯಪಡಲ್ಲ: ಡಿಕೆ ಶಿವಕುಮಾರ್
ಇದನ್ನೂ ಓದಿ: Exclusive: ಡಿಕೆ ಶಿವಕುಮಾರ್ ತಾಯಿ ಗೌರಮ್ಮಗೆ ಐಟಿ ಕೇಳಿದ ಪ್ರಶ್ನೆಗಳು ಏನು..?
ಇದನ್ನೂ ಓದಿ: ಡಿಕೆಶಿ ಮೇಲೆ ಐಟಿ ದಾಳಿಗೆ ಪ್ಲ್ಯಾನ್ ನಡೆದಿದ್ದು ಹೀಗೆ
,