ಧಾರವಾಡ: ಕಳೆದ ಎರಡು ದಿನಗಳಿಂದ ಧಾರವಾಡದಲ್ಲಿ ಅಧಿಕಾರಿಗಳ ಸಭೆ ಮಾಡುತಿದ್ದ ಸಚಿವ ಸಂತೋಷ ಲಾಡ್ (Santosh Lad), ಸಿಎಂ ಸೂಚನೆ ಮೇರೆಗೆ ತುರ್ತಾಗಿ ಜಮ್ಮುಕಾಶ್ಮೀರದತ್ತ ಹೊರಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಗುಂಡಿನ ದಾಳಿಗೆ ಬಲಿಯಾದ ಹಾಗೂ ಗಾಯಗೊಂಡವರನ್ನ ಕರೆ ತರಲು ಲಾಡ್ ಅವರಿಗೆ ಸಿಎಂ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ನಾಳೆ ಧಾರವಾಡದಲ್ಲಿ ಇದ್ದ ಎಲ್ಲ ಕಾರ್ಯಕ್ರಮ ರದ್ದು ಮಾಡಿದ ಅವರು, ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿ, ಅಲ್ಲಿಂದ ದೆಹಲಿಗೆ ಹೋಗಲಿದ್ದಾರೆ. ನಂತರ ದೆಹಲಿಯಿಂದ ಜಮ್ಮು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಲಾಡ್, ಸಾಹೇಬ್ರ ಸೂಚನೆ ಮೇರೆಗೆ ಹೊರಟಿದ್ದೆನೆ ಹೊರಟಿದ್ದೆನೆ ಎಂದು ಹೇಳಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇಲ್ಲಿದೆ.