ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ 108 ಪ್ರಶ್ನೆಗಳಿಗೆ ಇಂಧನ ಸಚಿವ ಡಿಕೆ ಶಿವಕುಮಾರ್ ಜಾಣತನದಿಂದ ಉತ್ತರ ನೀಡಿದ್ದಾರೆ. ಒಟ್ಟು 102 ಕೊಟಿ ರೂ. ಆಸ್ತಿ ಘೋಷಣೆ ಮಾಡಿರುವ ಡಿಕೆ ಶಿವಕುಮಾರ್, ಮನೆ ಅಥವಾ ಬ್ಯಾಂಕ್‍ಗಳಲ್ಲಿ ಯಾವುದೇ ಲಾಕರ್ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಗಳ ಹೆಸರಲ್ಲಿ 74 ಕೋಟಿ ಆಸ್ತಿ ಖರೀದಿ ಮಾಡಿದ್ದು, ಇದಕ್ಕೆ ಸ್ನೇಹಿತರು ಮತ್ತು ಆತ್ಮಿಯರಿಂದ ಸಾಲ ಪಡೆದಿರುವುದಾಗಿ ತಿಳಿಸಿದ್ದಾರೆ. ಮಿನರ್ವ ಮಿಲ್ಸ್‍ನಲ್ಲಿ ತಂದೆ ಹೆಸರಿನಲ್ಲಿ ಪಾಲುದಾರಿಕೆ ಇದೆ. ಆದರೆ ತಂದೆ ಐಟಿ ರಿಟನ್ರ್ಸ್ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ.
Advertisement
Advertisement
ಕಳೆದ ವರ್ಷದ ಆಗಸ್ಟ್ 2ರಂದು ನಡೆದಿದ್ದ ಐಟಿ ದಾಳಿ ಡಿಕೆ ಶಿವಕುಮಾರ್ ಮನೆಯಲ್ಲಿ ಒಟ್ಟು 43 ಕೋಟಿ ನಗದು ಪತ್ತೆಯಾಗಿತ್ತು. ಇದರಲ್ಲಿ 8.83 ಕೋಟಿಗೆ ದಾಖಲೆ ಒದಗಿಸಲು ಡಿಕೆಶಿ ವಿಫಲರಾಗಿದ್ದಾರೆ. ಐಟಿ ಅಧಿಕಾರಿಗಳು ದಾಳಿ ಮಾಡಿದ್ದ ವೇಳೆ ಸಚಿವ ಡಿಕೆ ಶಿವಕುಮಾರ್ ಕಾಗದಗಳನ್ನು ಹರಿಯುತ್ತಾ ಕುಳಿತಿದ್ರು ಎನ್ನಲಾಗಿದೆ. ಇದನ್ನೂ ಓದಿ: ಜನಾಶೀರ್ವಾದ ಯಾತ್ರೆ ಶುರುಮಾಡಿದ್ದಕ್ಕೆ ಐಟಿ ಕಾಟ, ಇಡಿ- ಸಿಬಿಐಗೆ ರೆಫರ್ ಮಾಡ್ಲಿ, ಪರಪ್ಪನ ಅಗ್ರಹಾರಕ್ಕಾದ್ರೂ ಕಳಿಸಲಿ ಹೆದ್ರಲ್ಲ- ಡಿಕೆಶಿ
Advertisement
ಚಿಂದಿಯಾದ ಪತ್ರದಲ್ಲಿ ಏನಿತ್ತು?
ಕಾಂಗ್ರೆಸ್ ಹೆಡ್ ಆಫೀಸ್‍ಗೆ 3 ಕೋಟಿ ರೂಪಾಯಿ ಸಂದಾಯ ಮಾಡಿದ್ದಾರೆ ಎನ್ನಲಾದ ಮಾಹಿತಿ ಚಿಂದಿಯಾದ ಪತ್ರದಲ್ಲಿ ಇತ್ತು ಎಂದು ಮೂಲಗಳು ಮಾಹಿತಿ ನೀಡಿವೆ. ಶೈಲೆಂದರ್‍ನಿಂದ ಮೂರು ಬಾರಿ ಒಟ್ಟು 5 ಕೋಟಿ ರೂ.(1 ಕೋಟಿ, 2.5 ಕೋಟಿ, 1.5 ಕೋಟಿ ರೂ.) ಹಣ ಜಮೆ ಮಾಡಿದ್ದು, ಬಿ2/107 ಮನೆಯಲ್ಲಿದ್ದ ಹಣವನ್ನು ಬಿ5/201 ಮನೆಗೆ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಲಾಗಿತ್ತು. ಆಗಸ್ಟ್ 1, 2017ರಂದು ದೆಹಲಿಗೆ ವಿಮಾನದಲ್ಲಿ ಹಣ ತೆಗೆದುಕೊಂಡ ಹೋಗಿ ದೆಹಲಿಯ ಖಾಸಗಿ ಹೋಟೆಲ್‍ನ ರೂಂ ನಂಬರ್ 2001ರಲ್ಲಿ ಹಣ ಸಂದಾಯದ ಬಗ್ಗೆ ಮಾಹಿತಿ ಪತ್ರದಲ್ಲಿ ಇತ್ತು. ಇದನ್ನೂ ಓದಿ: Exclusive: ಡಿಕೆ ಶಿವಕುಮಾರ್ ಮಗಳು ಐಶ್ವರ್ಯಗೆ ಐಟಿ ಕೇಳಿದ ಪ್ರಶ್ನೆಗಳು ಏನು?
Advertisement
ಯಾವೆಲ್ಲ ಪ್ರಕರಣ ದಾಖಲಾಗಿವೆ?
ಡಿಕೆಶಿ ವಿರುದ್ಧ ಐಟಿ ಅಧಿಕಾರಿಗಳು ಆದಾಯ ತೆರಿಗೆ ಕಾಯ್ದೆ 276 ಸಿ (ತೆರಿಗೆ ವಂಚನೆ) ಅಡಿಯಲ್ಲಿ ಕೇಸ್ ದಾಖಲು ದಾಖಲಾಗಿದ್ದು, 1 ಲಕ್ಷಕ್ಕಿಂತ ಹೆಚ್ಚು ತೆರಿಗೆ ವಂಚನೆ ಮಾಡಿದ್ದು ಸಾಬೀತಾದ್ರೆ 6 ತಿಂಗಳಿಂದ 7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಐಪಿಸಿ ಸೆಕ್ಷನ್ 201, 204 (ಸಾಕ್ಷಿ ನಾಶ, ಸುಳ್ಳು ಮಾಹಿತಿ ) ಅಡಿಯಲ್ಲೂ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಐಟಿ ಡ್ರಿಲ್ಲಿಂಗ್: ಅಧಿಕಾರಿಗಳ ಆ ಎಲ್ಲ ಪ್ರಶ್ನೆಗಳಿಗೆ ಡಿಕೆಶಿ ಉತ್ತರಿಸಿದ್ದು ಹೀಗೆ