ಬೆಂಗಳೂರು: ನಾಮಫಲಕಗಳಲ್ಲಿ 60 ಪರ್ಸೆಂಟ್ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸುವ ಮಹತ್ವದ ಕನ್ನಡ ಭಾಷಾ (Kannada Language) ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ಇಂದು ವಿಧಾನಸಭೆಯಲ್ಲಿ (Vidhanasabha) ಅಂಗೀಕರಿಸಲಾಗಿದೆ.
ಮೇಲ್ಮನೆಯಲ್ಲಿ ಮಂಡನೆ ಆಗಿ ಅಲ್ಲಿಯೂ ಅನುಮೋದನೆ ಸಿಕ್ಕಿ, ರಾಜ್ಯಪಾಲರು ಅಂಕಿತ ಹಾಕಿದ್ರೆ ಇದು ಕಾಯ್ದೆಯಾಗಿ ಬದಲಾಗಲಿದೆ.
Advertisement
Advertisement
ವಿಧೇಯಕದಲ್ಲಿ ಏನೆಲ್ಲಾ ಅಂಶಗಳಿವೆ?: ಕಚೇರಿ, ಉದ್ದಿಮೆ, ವಿವಿ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ. ಅಧಿಕಾರಿಗಳ ಹೆಸರು, ಪದನಾಮ ಕನ್ನಡದಲ್ಲಿರಬೇಕು. ರಾಜ್ಯ ಸರ್ಕಾರದ ಇಲಾಖೆ, ಉದ್ಯಮ ಅಥವಾ ಸ್ವಾಯತ್ತ ಸಂಸ್ಥೆ, ಸಹಕಾರ ಮತ್ತು ಸಾರ್ವಜನಿಕ ಉದ್ಯಮ, ಶೈಕ್ಷಣಿಕ ಸಂಸ್ಥೆ, ಬ್ಯಾಂಕ್, ಇತರೆ ಹಣಕಾಸು ಸಂಸ್ಥೆ, ಖಾಸಗಿ ಕೈಗಾರಿಕೆ, ವಿವಿಗಳಿಗೂ ಇದು ಅನ್ವಯವಾಗಲಿದೆ. ರಸ್ತೆ, ಬಡಾವಣೆ ಹೆಸರು ಕನ್ನಡದಲ್ಲಿಯೇ ಇರಬೇಕು. ಇದನ್ನೂ ಓದಿ: ಚುನಾವಣಾ ಬಾಂಡ್ ರದ್ದು; ಮೋದಿ ಭ್ರಷ್ಟ ನೀತಿಗಳಿಗೆ ಮತ್ತೊಂದು ಉದಾಹರಣೆ ಎಂದ ರಾಹುಲ್ ಗಾಂಧಿ
Advertisement
ಟೆಂಡರ್ ಅಧಿಸೂಚನೆ, ಜಾಹೀರಾತು, ಅರ್ಜಿ ನಮೂನೆ, ಡಿಜಿಟಲ್ ನಮೂನೆ, ಪ್ರಮಾಣ ಪತ್ರದಲ್ಲಿ ಕನ್ನಡ ಕಡ್ಡಾಯ (ರಾಜ್ಯ ಸರ್ಕಾರ, ಸ್ಥಳೀಯ ಪ್ರಾಧಿಕಾರ). ಕರಪತ್ರ, ಬ್ಯಾನರ್, ಫ್ಲೆಕ್ಸ್, ಎಲೆಕ್ಟ್ರಾನಿಕ್ ಪ್ರದರ್ಶನ ಫಲಕ, ಮಾಹಿತಿ, ನೋಟಿಸ್‍ಗಳು ಕನ್ನಡದಲ್ಲಿರಬೇಕು. ಇದು ಸರ್ಕಾರ, ಸ್ಥಳೀಯ ಪ್ರಾಧಿಕಾರ, ಅನುದಾನಿತ, ಅನುದಾನರಹಿತ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅನ್ವಯವಾಗಲಿದೆ.
Advertisement
ಯೋಜನೆ, ಅನುದಾನ, ರಿಯಾಯ್ತಿಯ ನಾಮಫಲಕ, ಜಾಹೀರಾತು, ರಸೀದಿ, ಬಿಲ್, ನೋಟಿಸ್ ಕನ್ನಡದಲ್ಲಿರಬೇಕು. ಸರ್ಕಾರ ಅಥವಾ ಸಂಬಂಧಿತ ಸಂಸ್ಥೆ ಅಥವಾ ಸ್ಥಳೀಯ ಪ್ರಾಧಿಕಾರಗಳಿಗೆ ಅನ್ವಯವಾಗಲಿದೆ. ವಾಣಿಜ್ಯ, ಕೈಗಾರಿಕೆ, ಅಂಗಡಿ, ಆಸ್ಪತ್ರೆ, ಹೋಟೆಲ್, ಲ್ಯಾಬ್ ನಾಮಫಲಕಗಳಲ್ಲಿ 60% ಕನ್ನಡ ಬಳಕೆ ಕಡ್ಡಾಯವಾಗಲಿದೆ. ಫಲಕಗಳ ಮೇಲ್ಭಾಗದಲ್ಲಿ ಕನ್ನಡ ಇರಬೇಕು.. ಕೆಳಗಿನ ಭಾಗ ಬೇರೆ ಭಾಷೆಯಲ್ಲಿ ಇರಬಹುದು.