ನವದೆಹಲಿ: ಬೆಳಗಾವಿ (Belagavi) ಗೆ ಭೇಟಿ ನೀಡಬೇಕಿದ್ದ ಮಹಾರಾಷ್ಟ್ರ (Maharastra) ಸಚಿವರ ಪ್ರವಾಸವನ್ನು ದಿಢೀರ್ ರದ್ದುಗೊಳಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾರಣದಿಂದ ಪ್ರವಾಸ ರದ್ದುಗೊಂಡಿದ್ದು ಶೀಘ್ರದಲ್ಲಿ ಹೊಸ ದಿನಾಂಕ ಪ್ರಕಟಿಸಲಾಗುವುದು ಎಂದು ಸಚಿವ ಶಂಭುರಾಜ್ ದೇಸಾಯಿ (Shambhuraj Desai) ಹೇಳಿದ್ದಾರೆ.
We are committed to safeguarding our borders and people. Not only that we are also committed to safeguard the Kannadigas in Maharastra, Kerala and Telangana: Karnataka CM Basavaraj Bommai pic.twitter.com/vfIFjCKBIl
— ANI (@ANI) December 6, 2022
Advertisement
ಬೆಳಗಾವಿ ಗಡಿ ಭಾಗದಲ್ಲಿ ಗ್ರಾಮಸ್ಥರನ್ನು ಭೇಟಿಯಾಗಲು ಸಚಿವರಾದ ಚಂದ್ರಕಾಂತ್ ಪಾಟೀಲ್ (Chandrakanth Patil) ಮತ್ತು ಶಂಭುರಾಜ್ ದೇಸಾಯಿ ಇಂದು ಭೇಟಿ ನೀಡಬೇಕಿತ್ತು. ಸಂಬಂಧ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಬೆಳಗಾವಿ ಭೇಟಿ ಸೂಕ್ತವಲ್ಲ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದರು. ಇದನ್ನೂ ಓದಿ: ವಾಯುಭಾರ ಕುಸಿತ – ನಾಳೆಯಿಂದ ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಶುರು
Advertisement
Advertisement
ಸಿಎಂ ಮಾಹಿತಿ ಮೇರೆಗೆ ಇಬ್ಬರು ಗಡಿ ಉಸ್ತುವಾರಿ ಸಚಿವರು ಪ್ರವಾಸವನ್ನು ರದ್ದು ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಶಂಭುರಾಜ್ ದೇಸಾಯಿ, ಗಡಿ ಭಾಗದ ಭೇಟಿಯಿಂದ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂದು ಕರ್ನಾಟಕ ಸರ್ಕಾರ ಹೇಳಿದೆ, ಈ ಹಿನ್ನೆಲೆ ಭೇಟಿ ದಿನಾಂಕವನ್ನು ಮುಂದೂಡಿದೆ, ಬೆಳಗಾವಿ ಭೇಟಿಯನ್ನು ರದ್ದುಗೊಳಿಸಿಲ್ಲ ಶೀಘ್ರದಲ್ಲಿ ಹೊಸ ದಿನಾಂಕ ಪ್ರಕಟಿಸುತ್ತೇವೆ ಎಂದರು.
Advertisement
This stand of Karnataka had nothing to do with elections, it is a long dragged issue by Maharastra. These tensions are created because of Maharashtra. There is prosperity among people of both states, this (Border issue) is in SC & I'm sure we'll win the legal battle: Karnataka CM pic.twitter.com/geRleBYSGg
— ANI (@ANI) December 6, 2022
ಮಹಾರಾಷ್ಟ್ರದ ಇಬ್ಬರು ಸಚಿವರು ಕರ್ನಾಟಕದಲ್ಲಿರುವ 850 ಹಳ್ಳಿಗಳಲ್ಲಿನ ಮರಾಠಿ ಮಾತನಾಡುವ ಜನರನ್ನು ಭೇಟಿ ಮಾಡಿ ಮಹಾರಾಷ್ಟ್ರ ಸಿಎಂ ಮತ್ತು ಡಿಸಿಎಂ ನೀಡಲು ಬಯಸುವ ಪ್ಯಾಕೇಜ್ ಕುರಿತು ಚರ್ಚಿಸಲು ನಿರ್ಧರಿಸಿದ್ದರು.