ಚಿಕ್ಕೋಡಿ: ನಾಳೆ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ವಿಚಾರಣೆ ಇರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ (Maharashtra) ಗಡಿಯಲ್ಲಿ ಕರ್ನಾಟಕ (Karnataka) ಪೊಲೀಸರಿಂದ (Police) ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿಯ ಕುಗನೊಳ್ಳಿ ಚೆಕ್‌ಪೋಸ್ಟ್‌ಗೆ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಡಿಯಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಅಲೋಕ್ ಕುಮಾರ್ ಮಹಾರಾಷ್ಟ್ರದಿಂದ ಬರುವ ಬಸ್, ಕಾರು, ಹಾಗೂ ಲಾರಿ ಮೂಲಕ ಬಂದ ಪ್ರಯಾಣಿಕರಿಗೆ ಗಡಿಯಲ್ಲಿ ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಮಹಾರಾಷ್ಟ್ರದ ಕೆಲ ಕಿಡಿಗೇಡಿಗಳು ನಮ್ಮ ಬಸ್‌ಗಳಿಗೆ ಮಸಿ ಬಳಿಯುವುದು, ಕಲ್ಲು ಎಸೆಯುವುದು ಮಾಡುತ್ತಿದ್ದಾರೆ. ಆದರೆ ಕನ್ನಡಿಗರು ಮಹಾರಾಷ್ಟ್ರದ ಜನರಿಗೆ ಗುಲಾಬಿ ಹೂ ನೀಡಿ ಸ್ವಾಗತಿಸುತ್ತಿದ್ದಾರೆ ಎನ್ನುವ ಸಾಮರಸ್ಯದ ಸಂದೇಶವನ್ನ ಕರ್ನಾಟಕ ಪೊಲೀಸರು ಸಾರಿದರು.
Advertisement
Advertisement
ಅಲೋಕ್ ಕುಮಾರ್ ಅವರಿಗೆ ಬೆಳಗಾವಿ ಎಸ್‌ಪಿ ಸಂಜೀವ್ ಪಾಟೀಲ್, ಐಜಿಪಿ ಸತೀಶ ಸೇರಿದಂತೆ ಅಧಿಕಾರಿಗಳ ಸಾಥ್ ನೀಡಿದರು. ಈ ವೇಳೆ ಅಲೋಕ್ ಕುಮಾರ್ ಮಾತನಾಡಿ, ಕಳೆದ ವಾರ ಕರ್ನಾಟಕದ ಬಸ್‌ಗಳ ಮೇಲೆ ಕಲ್ಲು ತೂರಿ ಮಸಿ ಬಳಿದಿದ್ದರು. 3 ಪ್ರಕರಣ ಮಹಾರಾಷ್ಟ್ರದಲ್ಲಿ ಆಗಿತ್ತು. ಮುಂದೆ ಈ ರೀತಿ ಆಗಬಾರದು ಮತ್ತು ನಾಳೆ ಗಡಿ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ನಾಳೆ ತೀರ್ಪು ಬಂದರೆ ಮತ್ತೆ ಏನೂ ಗಲಾಟೆ ಆಗಬಾರದು ಅನ್ನೋ ಕಾರಣಕ್ಕೆ ಜಂಟಿ ಸಭೆ ನಡೆಸಲಾಗಿದೆ. ಮೂರು ಕಡೆಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ ಜಂಟಿ ಚೆಕ್ ಪೋಸ್ಟ್ ಮಾಡಿದ್ದೇವೆ ಎಂದು ತಿಳಿಸಿದರು.
Advertisement
400ಕ್ಕೂ ಅಧಿಕ ಕರ್ನಾಟಕ ಬಸ್‌ಗಳು, ಮಹಾರಾಷ್ಟ್ರದಿಂದ 176 ಬಸ್‌ಗಳು ರಾಜ್ಯಕ್ಕೆ ಬರುತ್ತವೆ. ಅಲ್ಲಿ ನಮ್ಮ ವಾಹನಗಳಿಗೆ, ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಚರ್ಚೆ ಮಾಡಲಾಗಿದೆ. ಅಧಿವೇಶನ ಸೂಸುತ್ರವಾಗಿ ನಡೆಯಬೇಕು, ಚುನಾವಣೆ ವರ್ಷ ಇದೆ ಕಿಡಿಗೇಡಿಗಳನ್ನು ಕೆಲವರು ದುರಪಯೋಗ ಪಡಿಸಿಕೊಳ್ಳಬಾರದು. ಯಾರಿಗೂ ಕಾನೂನು ಕೈಗೆ ತೆಗೆದುಕೊಳ್ಳಲು ನಾವು ಬಿಡುವುದಿಲ್ಲ ಎಂದರು. ಇದನ್ನೂ ಓದಿ: ಹಿಂದೂ ಕಾರ್ಯಕರ್ತರ ಬಂಧನ – BJP ವಿರುದ್ಧ ಮುತಾಲಿಕ್ ಆಕ್ರೋಶ
Advertisement
ಇನ್ನೂ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಆಗಮಿಸುತ್ತಿರುವ ವಿಚಾರವಾಗಿ ಮಾತನಾಡಿ, ಯಾವ ಚಟುವಟಿಕೆಯಿಂದ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅದಕ್ಕೆ ಅವಕಾಶ ಕೊಡುವುದಿಲ್ಲ. ಖಾಸಗಿ ಕಾರ್ಯಕ್ರಮಗಳಿಗೆ ಬಂದರೆ ನಮ್ಮ ಅಭ್ಯಂತ್ರ ಇಲ್ಲ. 21 ಚೆಕ್ ಪೋಸ್ಟ್ ಬೆಳಗಾವಿಯಲ್ಲಿ ಇದೆ. ಗಡಿ ಭಾಗದ ಎಲ್ಲ ಎಸ್‌ಪಿಗಳಿಗೆ ನಿರ್ದೇಶನ ನೀಡಿದ್ದೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮೋದಿಗೇನು ರಾವಣನಂತೆ 100 ತಲೆಗಳಿವೆಯೇ- ಮಲ್ಲಿಕಾರ್ಜುನ ಖರ್ಗೆ ಕಿಡಿ