Web Stories
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ (Disproportionate Assets) ಆರೋಪದ ಹಿನ್ನೆಲೆಯಲ್ಲಿ 15 ಅಧಿಕಾರಿಗಳ ವಿರುದ್ಧ 62 ಕಡೆ ಲೋಕಾಯುಕ್ತ ದಾಳಿ (Lokayukta Raid) ನಡೆಸಿದೆ.
Advertisement
ಬೆಂಗಳೂರು, ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕಲಬುರಗಿ, ರಾಯಚೂರು, ಬಾಗಲಕೋಟೆ, ವಿಜಯಪುರದಲ್ಲಿ ಶೋಧ ನಡೆಸಿದೆ.
Advertisement
ಕೆ.ಆರ್.ಪುರ ತಹಶೀಲ್ದಾರ್ ಅಜಿತ್ ರೈ, ಬಾಗಲಕೋಟೆಯ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್, ಬೀಳಗಿಯ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ಶಿರೂರು, ವಿಜಯಪುರದ ಪಿಡಬ್ಲೂಡಿ ಇಲಾಖೆ ಜೆಇ ಭೀಮನಗೌಡ ಬಿರಾದಾರ್, ಬೆಳಗಾವಿಯ ಹೆಸ್ಕಾಂನ ಎಂಜಿನಿಯರ್ ಶೇಖರ್ ಬಹುರೂಪಿ, ಗೌರಿಬಿದನೂರು ಅಬಕಾರಿ ಇನ್ಸ್‍ಪೆಕ್ಟರ್ ರಮೇಶ್, ಚಿಕ್ಕಮಗಳೂರಿನ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗಂಗಾಧರ್, ಕಲಬುರಗಿಯ ಟೌನ್ ಪ್ಲಾನಿಂಗ್ ಅಧಿಕಾರಿ ಶರಣಪ್ಪ, ಕೋಲಾರದ ಕ್ರೆಡಲ್ ಎಇಇ ಕೋದಂಡರಾಮಯ್ಯ, ಕುಶಾಲನಗರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಅಬ್ದುಲ್ ಬಷೀರ್, ತುಮಕೂರಿನ ಕೃಷಿ ಇಲಾಖೆ ನಿರ್ದೇಶಕ ಕೆ.ಎಚ್ ರವಿ, ಯಾದಗಿರಿಯ ಪಿಡಬ್ಲೂಡಿ ಎಇಇ ವಿಶ್ವನಾಥ ರೆಡ್ಡಿಗೆ ಸೇರಿದ ಆಸ್ತಿಪಾಸ್ತಿಗಳನ್ನು ಲೋಕಾಯುಕ್ತ ಶೋಧಿಸಿದೆ. ಹಲವೆಡೆ ಹೈಡ್ರಾಮಾ ನಡೆದಿದೆ.
Advertisement
ದಾಳಿ ವೇಳೆ ಏನು ಸಿಕ್ಕಿದೆ?
ಅಜಿತ್ ರೈ, ಕೆಆರ್‌ಪುರ ತಹಶೀಲ್ದಾರ್
40 ಲಕ್ಷ ರೂ. ನಗದು, 1.90 ಕೋಟಿ ರೂ. ಮೊತ್ತದ ಆಸ್ತಿ
Advertisement
ಚೇತನಾ ಪಾಟೀಲ್, ಕೃಷಿ ಅಧಿಕಾರಿ, ಬಾಗಲಕೋಟೆ
32 ಲಕ್ಷ ರೂ. ನಗದು ಸೇರಿ 1.45 ಕೋಟಿ ರೂ. ಮೌಲ್ಯದ ಆಸ್ತಿ (2 ನಕ್ಷತ್ರ ಆಮೆ)
ರವಿ ಕೆ.ಹೆಚ್, ಕೃಷಿ ಅಧಿಕಾರಿ, ತುಮಕೂರು
4.27 ಕೋಟಿ ರೂ. ಮೌಲ್ಯದ ಆಸ್ತಿ
ಗಂಗಾಧರ್, ನಿರ್ಮಿತಿ ಕೇಂದ್ರ, ಚಿಕ್ಕಮಗಳೂರು
3.75 ಕೋಟಿ ರೂ. ಮೌಲ್ಯದ ಆಸ್ತಿ
ಶೇಖರ್ ಬಹುರೂಪಿ, ಜೆಸ್ಕಾಂ ಇಇ, ಹಗರಿಬೊಮ್ಮನಹಳ್ಳಿ
3 ಕೋಟಿ ರೂ. ಮೌಲ್ಯದ ಆಸ್ತಿ ಇದನ್ನು ಓದಿ: ಆಪರೇಷನ್ ಥಿಯೇಟರ್‌ನಲ್ಲಿ ಹಿಜಬ್ ಧರಿಸುವುದು ಕಷ್ಟ, ಪರ್ಯಾಯ ಆಯ್ಕೆ ಕೊಡಿ – ಪ್ರಿನ್ಸಿಪಾಲ್‍ಗೆ ಪತ್ರ
ಅಬ್ದುಲ್ ಬಷೀರ್, ನೀರಾವರಿ ಇಲಾಖೆ ಎಫ್‍ಡಿಎ, ಮಡಿಕೇರಿ
14 ಲಕ್ಷ ರೂ. ನಗದು ಸೇರಿ 1.14 ಕೋಟಿ ರೂ. ಮೌಲ್ಯದ ಆಸ್ತಿ
ಶರಣಪ್ಪ, ಮೆಂಬರ್ ಸೆಕ್ರೆಟರಿ, ಟೌನ್ ಪ್ಲಾನಿಂಗ್, ಸಿಂಧನೂರು.
14 ಲಕ್ಷ ರೂ. ನಗದು ಸೇರಿ 2.03 ಕೋಟಿ ರೂ. ಮೌಲ್ಯದ ಆಸ್ತಿ
ಪ್ರಕಾಶ್, ಪಿಡಬ್ಲ್ಯೂಡಿ ಎಇಇ, ರಾಯಚೂರು
2.71 ಕೋಟಿ ರೂ. ಮೌಲ್ಯದ ಆಸ್ತಿ
ರಮೇಶ್, ಅಬಕಾರಿ ಇನ್ಸ್‌ಪೆಕ್ಟರ್, ಗೌರಿಬಿದನೂರು
2.44 ಕೋಟಿ ರೂ. ಮೌಲ್ಯದ ಆಸ್ತಿ
ಕೋದಂಡರಾಮಯ್ಯ, ಕೆಆರ್‌ಐಡಿಎಲ್ ಎಇ, ತುಮಕೂರು
2.47 ಕೋಟಿ ರೂ. ಮೌಲ್ಯದ ಆಸ್ತಿ