ಚಿಕ್ಕಬಳ್ಳಾಪುರ: ನಿವೇಶನ ಖಾತೆ ಮಾಡಿಕೊಡಲು 40 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದು, ಲಂಚ ಪಡೆಯುವಾಗ ಗೌರಿಬಿದನೂರು ನಗರಸಭೆ ಅಧ್ಯಕ್ಷೆಯ ಪತಿ ಸೇರಿ ನಾಲ್ವರು ಲೋಕಾಯುಕ್ತ (Karnataka Lokayukta) ಬಲೆಗೆ ಬಿದ್ದಿದ್ದಾರೆ.
Advertisement
ಗೌರಿಬಿದನೂರು ನಗರಸಭೆ ಅಧ್ಯಕ್ಷೆ ರೂಪಾ ಅವರ ಪತಿ ಅನಂತರಾಜು, ನಗರಸಭಾ ಸದಸ್ಯ ಗೋಪಿನಾಥ್, ನಗರಸಭೆ ಸದಸ್ಯೆಯ ಪತಿ ಮಂಜುನಾಥ್ ಹಾಗೂ ಮಾಜಿ ನಗರಸಭಾ ಸದಸ್ಯ ಮೈಲಾರಿ ಸೇರಿದಂತೆ ನಾಲ್ವರು ಲೋಕಾಯುಕ್ತ ಪೊಲೀಸರ (Lokayukta Police) ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: 9ನೇ ತರಗತಿ ವಿದ್ಯಾರ್ಥಿನಿಯ 3ನೇ ಕವನ ಸಂಕಲನ ಬಿಡುಗಡೆ ಮಾಡಿದ ಗೆಹ್ಲೋಟ್
Advertisement
Advertisement
ರಿಯಲ್ ಎಸ್ಟೇಟ್ (Real Estate) ಬಿಲ್ಡರ್ ಬಡಾವಣೆ ಮಾಲೀಕ ಮಂಜುನಾಥರೆಡ್ಡಿ ಅವರ ಬಳಿ 133 ನಿವೇಶನಗಳಿಗೆ ಖಾತೆ ಮಾಡಿಕೊಡುವ ಸಲುವಾಗಿ 40 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಐಷಾರಾಮಿ ಅನುಭವ ನೀಡುವ ಮಹಾರಾಜ ಎಕ್ಸ್‌ಪ್ರೆಸ್ ರೈಲು – ಟಿಕೆಟ್ ದರ ಒಬ್ಬರಿಗೆ 19 ಲಕ್ಷ
Advertisement
ಈ ಆರೋಪದ ಮೇರೆಗೆ ಬೆಂಗಳೂರು ಉತ್ತರ ತಾಲೂಕು ರಾಜನಕುಂಟೆ ಬಳಿಯ ಸಿಲ್ವರ್ ಒಕ್ ರೆಸಾರ್ಟ್ ನಲ್ಲಿ ಮಂಜುನಾಥ್ ರೆಡ್ಡಿಯಿಂದ 20 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಎಸ್ಪಿ ಪವನ್ ನೆಜ್ಜೂರು ನೇತೃತ್ವದಲ್ಲಿ ದಾಳಿ ಮಾಡಿ ನಾಲ್ವರನ್ನ ವಶಕ್ಕೆ ಪಡೆದಿರುವ ಲೋಕಾಯುಕ್ತರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.