ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಬಳಿಕ ಲೋಕಸಭಾ ಚುನಾವಣಾ ಮೈತ್ರಿಗೆ ಜೆಡಿಎಸ್‍ಗೆ ಮತ್ತಷ್ಟು ಶಕ್ತಿ ಸಿಕ್ಕಿದ್ದು, ಕಾಂಗ್ರೆಸ್ ಕಿಕ್ ಇಳಿಸಿತಾ ಅನ್ನೋ ಪ್ರಶ್ನೆಯೊಂದು ಇದೀಗ ಮೂಡಿದೆ.
ಮೈಸೂರು, ತುಮಕೂರು ಪಾಲಿಕೆಗಳ ಅತಂತ್ರ ಸ್ಥಿತಿಯಿಂದ ಜೆಡಿಎಸ್‍ಗೆ ಲಾಭವಾಗಿದ್ದು, ಈ ಮೂಲಕ ಲೋಕಸಭೆ ಚುನಾವಣೆಗೆ ಜೆಡಿಎಸ್ ಮೈತ್ರಿ ಗೇಮ್ ಶುರುವಾಗಿದೆ. ಒಟ್ಟು 10 ಲೋಕಸಭಾ ಚುನಾವಣೆಗೆ ಪಟ್ಟು ಮುಂದುವರಿಸಲು ಜೆಡಿಎಸ್ ನಿರ್ಧರಿಸಿದೆ. ಮೈಸೂರು, ತುಮಕೂರು ಪಾಲಿಕೆಗಳ ಅತಂತ್ರದ ದಾಳ ಉರುಳಿಸಿ 2 ಲೋಕಸಭಾ ಕ್ಷೇತ್ರಕ್ಕೆ ಪಟ್ಟು ಹಿಡಿಯಲು ಪ್ಲಾನ್ ರೂಪಿಸಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಯಾವ ಪಕ್ಷಕ್ಕೆ ಒಟ್ಟು ಎಷ್ಟು ಸ್ಥಾನ? ಯಾವ ಜಿಲ್ಲೆಯಲ್ಲಿ ಯಾರಿಗೆ ಎಷ್ಟು ಸ್ಥಾನ ಇಲ್ಲಿದೆ ಮಾಹಿತಿ
Advertisement
Advertisement
ಮೈಸೂರು, ಮಂಡ್ಯ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ, ಕೋಲಾರ, ಶಿವಮೊಗ್ಗ, ರಾಯಚೂರು, ಚಿತ್ರದುರ್ಗ ಜಿಲ್ಲೆಗಳು ಲೋಕಸಭಾ ಚುನಾವಣೆಗೆ ಹಿಟ್ ಲಿಸ್ಟ್ ಆಗಿದ್ದು, ಈ 10 ಕ್ಷೇತ್ರಗಳನ್ನು ಜೆಡಿಎಸ್ ಮೈತ್ರಿ ಹಿಟ್ ಲಿಸ್ಟ್ ನಲ್ಲಿ ಸೇರಿಸಿಕೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ನಗರ ಪ್ರದೇಶದಲ್ಲಿ ಬಿಜೆಪಿಯ ಒಲವು ಕಡಿಮೆಯಾಗಿದೆ: ಎಚ್‍ಡಿಕೆ
Advertisement
ಒಟ್ಟಿನಲ್ಲಿ ಇದೀಗ ಜೆಡಿಎಸ್‍ನ ಮೈತ್ರಿ ಹಿಟ್ ಲಿಸ್ಟ್ ಗೆ ಕಾಂಗ್ರೆಸ್ ಮಣೆ ಹಾಕುತ್ತಾ ಅಥವಾ ಸಿದ್ದರಾಮಯ್ಯ ತವರು ಮೈಸೂರು, ಡಿಸಿಎಂ ಪರಮೇಶ್ವರ್ ತವರು ಜಿಲ್ಲೆ ಜೆಡಿಎಸ್‍ಗೆ ಬಿಟ್ಟು ಕೊಡ್ತಾರಾ ಅನ್ನೋದು ಸದ್ಯ ಕುತೂಹಲವಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv