ಉಡುಪಿ ಗೆಲುವು ವಾಜಪೇಯಿ, ವಿ.ಎಸ್ ಆಚಾರ್ಯರಿಗೆ ಸಮರ್ಪಣೆ: ರಘುಪತಿ ಭಟ್

Public TV
1 Min Read
ragupathi bat atal

ಉಡುಪಿ: ಈ ಗೆಲುವನ್ನು ಅಟಲ್ ಬಿಹಾರಿ ವಾಜಪೇಯಿ, ಡಾ. ವಿ.ಎಸ್ ಆಚಾರ್ಯರಿಗೆ ಸಲ್ಲಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ರಘುಪತಿ ಭಟ್ ಈ ಹಿಂದೆಲ್ಲ ಕಾಂಗ್ರೆಸ್ ನವರು ಗಾಳಿಯಿಂದಾಗಿ, ಅಪಪ್ರಚಾರದಿಂದಾಗಿ ಬಿಜೆಪಿ ಗೆದ್ದಿದೆ ಅನ್ನುತ್ತಿದ್ದರು. ಇದು ಕಾರ್ಯಕರ್ತರ ಗೆಲುವು ಎನ್ನುವುದು ಸಾಬೀತಾಗಿದೆ. ಉಡುಪಿ ನಗರಸಭೆ ಗೆಲುವು ಐತಿಹಾಸಿಕ ಕಾರಣಕ್ಕೂ ಸ್ಮರಿಸುವಂತಹ ಗೆಲುವು. ಐವತ್ತು ವರ್ಷ ಹಿಂದೆ ಇಡೀ ದೇಶದಲ್ಲೇ ಮೊದಲ ಬಾರಿಗೆ ಜನಸಂಘ ಉಡುಪಿ ನಗರಸಭೆಯನ್ನು ಗೆದ್ದುಕೊಂಡಿತ್ತು. ಈಗ ಬಿಜೆಪಿಗೆ ಭಾರೀ ಬಹುಮತ ಬಂದಿದೆ ಎಂದು ತಿಳಿಸಿದರು.  ಇದನ್ನು ಓದಿ: ಉಡುಪಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್- ಮಧ್ವರಾಜ್ ವಾರ್ಡ್ ನಲ್ಲೇ ಕಾಂಗ್ರೆಸ್ಸಿಗೆ ಸೋಲು

ಜಿಲ್ಲೆಯಲ್ಲಿ ನಡೆದ ನಾಲ್ಕು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಉಡುಪಿ ನಗರಸಭೆ, ಕಾರ್ಕಳ, ಕುಂದಾಪುರ ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಗಳಲ್ಲೂ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಮುಖ್ಯವಾಗಿ ಉಡುಪಿ ನಗರಸಭೆಯ ಮೂವತ್ತೈದು ವಾರ್ಡ್ ಗಳ ಪೈಕಿ ಮೂವತ್ತೊಂದು ವಾರ್ಡ್ ಗಳನ್ನು ಬಾಚಿಕೊಳ್ಳುವ ಮೂಲಕ ಕಾಂಗ್ರೆಸ್ ಕೈಯಿಂದ ನಗರಸಭೆಯನ್ನು ಕಸಿದುಕೊಂಡಿದೆ. ಈ ಭಾಗದ ಪ್ರಭಾವೀ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಆಸ್ಕರ್ ಫೆರ್ನಾಂಡಿಸ್ ಗೆ ಇದು ದೊಡ್ಡ ಮುಖಭಂಗ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕುಂದಾಪುರ ಪುರಸಭೆ, ಕಾರ್ಕಳ ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲೂ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಐದಕ್ಕೆ ಐದೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದ ಬಿಜೆಪಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಕಾಂಗ್ರೆಸ್ಸನ್ನು ಧೂಳೀಪಟ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *