ರಾಯಚೂರು: ಜಿಲ್ಲೆಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಧಿಪತ್ಯ ಸಾಧಿಸಿದೆ. ಜಿಲ್ಲೆಯ ಒಟ್ಟು 7 ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ 4 ಕಡೆ ಅಧಿಕಾರವನ್ನು ಪಡೆದುಕೊಂಡಿದ್ದರೆ 3 ರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಜೆಡಿಎಸ್ ಸಚಿವ ವೆಂಕಟರಾವ್ ನಾಡಗೌಡ ಕ್ಷೇತ್ರದ ಸಿಂಧನೂರು ನಗರಸಭೆಯ ಒಟ್ಟು 31 ಸ್ಥಾನಗಳಲ್ಲಿ ಕಾಂಗ್ರೆಸ್ 20 ಸ್ಥಾನಗಳನ್ನು ಗೆಲ್ಲುವ ಮೂಲಕ ಜಯಭೇರಿ ಬಾರಿಸಿದೆ. ಇನ್ನುಳಿದ 11 ಸ್ಥಾನಗಳಗೆ ಜೆಡಿಎಸ್ ತೃಪ್ತಿಪಟ್ಟಿದೆ.
Advertisement
ಇದಲ್ಲದೇ ಸಿಂಧನೂರು ನಗರಸಭೆ, ಲಿಂಗಸುಗೂರು ಪುರಸಭೆ, ಮುದಗಲ್ ಪುರಸಭೆ, ಹಟ್ಟಿ ಪಟ್ಟಣ ಪಂಚಾಯಿತಿಗಳು ಕಾಂಗ್ರೆಸ್ ಪಾಲಾಗಿದೆ. ಸಿಂಧನೂರು ನಗರಸಭೆ, ಮಾನ್ವಿ ಪುರಸಭೆ, ಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಒಂದೂ ಸ್ಥಾನವನ್ನೂ ಗೆಲ್ಲದೆ ಸೊನ್ನೆ ಸಾಧನೆ ಮಾಡಿದೆ. ಉಳಿದಂತೆ ರಾಯಚೂರು ನಗರಸಭೆ, ಮಾನ್ವಿ ಪುರಸಭೆ, ದೇವದುರ್ಗದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿವೆ.
Advertisement
ಒಟ್ಟು 175 ವಾರ್ಡ್ ಗಳಲ್ಲಿ ಕಾಂಗ್ರೆಸ್ 90, ಬಿಜೆಪಿ 23, ಜೆಡಿಎಸ್ 40 ಹಾಗೂ 22 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
Advertisement
Advertisement
ಸ್ಪಷ್ಟ ಬಹುಮತ ಪಡೆದ ಕ್ಷೇತ್ರಗಳು:
ಸಿಂಧನೂರು ನಗರಸಭೆ:
ಸಿಂಧನೂರು ನಗರಸಭೆಯಲ್ಲಿ ಒಟ್ಟು 32 ವಾರ್ಡುಗಳ ಪೈಕಿ, ಕಾಂಗ್ರೆಸ್ 20, ಜೆಡಿಎಸ್ 11 ಹಾಗೂ ಬಿಜೆಪಿ ಶೂನ್ಯ ಸಂಪಾದಿಸಿದೆ. ಬಹುಮತ ಪಡೆದ ಕಾಂಗ್ರೆಸ್ ಅಧಿಕಾರ ಗದ್ದುಗೆ ಏರಿದೆ.
ಲಿಂಗಸುಗೂರು ಪುರಸಭೆ:
ಲಿಂಗಸುಗೂರು ಪುರಸಭೆಯಲ್ಲಿ ಒಟ್ಟು 23 ವಾರ್ಡುಗಳ ಪೈಕಿ, ಕಾಂಗ್ರೆಸ್ 13, ಜೆಡಿಎಸ್ 4, ಬಿಜೆಪಿ 2 ಹಾಗೂ ಪಕ್ಷೇತರ ಅಭ್ಯರ್ಥಿ 4 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಬಹುಮತ ಪಡೆದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಮುದಗಲ್ ಪುರಸಭೆ:
ಮುದಗಲ್ ಪುರಸಭೆಯಲ್ಲಿ ಒಟ್ಟು 23 ವಾರ್ಡುಗಳ ಪೈಕಿ, ಕಾಂಗ್ರೆಸ್ 15, ಜೆಡಿಎಸ್ 7 ಹಾಗೂ ಬಿಜೆಪಿ 1 ಸ್ಥಾನಗಳನ್ನು ಪಡೆದಿವೆ. ಬಹುಮತ ಪಡೆದ ಕಾಂಗ್ರೆಸ್ ಅಧಿಕಾರವನ್ನು ಏರಿದೆ.
ಹಟ್ಟಿ ಪಟ್ಟಣ ಪಂಚಾಯಿತಿ:
ಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 13 ವಾರ್ಡುಗಳ ಪೈಕಿ, ಕಾಂಗ್ರೆಸ್ 8, ಜೆಡಿಎಸ್ 3, ಪಕ್ಷೇತರ 2 ಅಭ್ಯರ್ಥಿಗಳು ವಿಜಯವನ್ನು ಸಾಧಿಸಿದ್ದಾರೆ. ಇಲ್ಲಿಯೂ ಸಹ ಬಿಜೆಪಿ ಶೂನ್ಯ ಸಾಧನೆಗೈದಿದೆ. ಬಹುಮತ ಪಡೆದ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಕ್ಷೇತ್ರಗಳು:
ರಾಯಚೂರು ನಗರಸಭೆ:
ರಾಯಚೂರು ನಗರಸಭೆಯಲ್ಲಿ ಒಟ್ಟು 35 ವಾರ್ಡುಗಳಿದ್ದು, ಬಿಜೆಪಿ 12, ಕಾಂಗ್ರೆಸ್ 11, ಜೆಡಿಎಸ್ 3 ಹಾಗೂ ಪಕ್ಷೇತರ ಅಭ್ಯರ್ಥಿಗಳು 9 ಸ್ಥಾನಗಳನ್ನು ಗಳಿಸಿದ್ದಾರೆ. ಮ್ಯಾಜಿಕ್ ಸಂಖ್ಯೆ 18 ಆಗಿದ್ದು, ಯಾವುದೇ ಪಕ್ಷಗಳು ಮ್ಯಾಜಿಕ್ ನಂಬರ್ ಪಡೆಯುವುಲ್ಲಿ ವಿಫಲವಾಗಿದೆ.
ದೇವದುರ್ಗ ಪುರಸಭೆ:
ದೇವದುರ್ಗ ಪುರಸಭೆಯಲ್ಲಿ ಒಟ್ಟು 23 ವಾರ್ಡುಗಳ ಪೈಕಿ, ಕಾಂಗ್ರೆಸ್ 11, ಬಿಜೆಪಿ 8, ಜೆಡಿಎಸ್ 3 ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನಗಳಿಸಿದ್ದಾರೆ. ಮ್ಯಾಜಿಕ್ ನಂಬರ್ 12 ಆಗಿದ್ದು, ಯಾವುದೇ ಪಕ್ಷಗಳು ಬಹುಮತ ಪಡೆದಿಲ್ಲ.
ಮಾನ್ವಿ ಪುರಸಭೆ:
ಮಾನ್ವಿ ಪುರಸಭೆಯಲ್ಲಿ ಒಟ್ಟು 27 ವಾರ್ಡುಗಳ ಪೈಕಿ, ಕಾಂಗ್ರೆಸ್ 13, ಜೆಡಿಎಸ್ 8, ಎಸ್ಪಿ 4, ಡಬ್ಲೂಪಿಎಲ್ 1 ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನವನ್ನು ಗಳಿಸಿದ್ದಾರೆ. ಈ ಪುರಸಭೆಯಲ್ಲಿ ಬಿಜೆಪಿ ಶೂನ್ಯ ಸಾಧನೆಗೈದಿದೆ. ಮ್ಯಾಜಿಕ್ ನಂಬರ್ 14 ಆಗಿದ್ದು, ಯಾವುದೇ ಪಕ್ಷಗಳು ಬಹುಮತ ಪಡೆದಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv