ಕೊಪ್ಪಳ: ಜಿಲ್ಲೆಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಪತ್ಯ ಸಾಧಿಸಿದೆ. ಒಟ್ಟು 104 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ಕೊಪ್ಪಳ ನಗರಸಭೆ:
Advertisement
ಕೊಪ್ಪಳ ನಗರಸಭೆಯಲ್ಲಿ 31 ಸ್ಥಾನಗಳಲ್ಲಿ 15 ಕಾಂಗ್ರೆಸ್, 10 ಬಿಜೆಪಿ, 4 ಪಕ್ಷೇತರ ಹಾಗೂ 2 ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲವು ಕಂಡಿದ್ದಾರೆ. ಮ್ಯಾಜಿಕ್ ನಂಬರ್ 16 ಆಗಿದ್ದು, ಸದ್ಯ ಕೊಪ್ಪಳ ನಗರಸಭೆ ಅತಂತ್ರವಾಗಿದೆ. ಚುನಾವಣೆಗೂ ಮುನ್ನ 4 ಜನ ಪಕ್ಷೇತರರು ಕಾಂಗ್ರೆಸ್ಸಿನಿಂದ ಬಂಡಾಯವೆದ್ದು ಸ್ಪರ್ಧೆ ಮಾಡಿದ್ದರು. ಈಗ ಅವರೆಲ್ಲರೂ ಕಾಂಗ್ರೆಸ್ ಜೊತೆ ಕೈಜೋಡಿಸುವ ನೀರಿಕ್ಷೆಯಿದೆ. ಹೀಗಾಗಿ ಕೊಪ್ಪಳ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎನ್ನಲಾಗುತ್ತಿದೆ.
Advertisement
Advertisement
ಗಂಗಾವತಿ ನಗರಸಭೆ:
Advertisement
ಗಂಗಾವತಿಯ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಹಾಲಿ ಶಾಸಕ ಪರಣ್ಣ ಮುನವಳ್ಳಿ ಭಾರೀ ಮುಖಭಂಗ ಅನುಭವಿಸಿದ್ದಾರೆ. ಒಟ್ಟು 35 ಸ್ಥಾನಗಳ ಪೈಕಿ 17 ರಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದೆ. ಬಿಜೆಪಿ 14, ಜೆಡಿಎಸ್ 2 ಹಾಗೂ ಪಕ್ಷೇತರ ಅಭ್ಯರ್ಥಿ 2 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದಾರೆ. ಇಲ್ಲಿನ ಮ್ಯಾಜಿಕ್ ನಂಬರ್ 18 ಆಗಿದ್ದು, ಕಾಂಗ್ರೆಸ್ ಪಕ್ಷೇತರರೊಂದಿಗೆ ಕೈಜೋಡಿಸಿ ಗಂಗಾವತಿ ನಗರಸಭೆಯಲ್ಲೂ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ.
ಕುಷ್ಟಗಿ ಪುರಸಭೆ:
ಕುಷ್ಟಗಿ ಪುರಸಭೆ ಕಾಂಗ್ರೆಸ್ ವಶವಾಗಿದ್ದು, 23 ಸ್ಥಾನಗಳಿಲ್ಲಿ ಕಾಂಗ್ರೆಸ್ 12 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನುಳಿದಂತೆ ಬಿಜೆಪಿ 8, 2 ಪಕ್ಷೇತರ ಹಾಗೂ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮ್ಯಾಜಿಕ್ ನಂಬರ್ 12 ಆಗಿದ್ದು, ಕಾಂಗ್ರೆಸ್ ಸರಳ ಬಹುಮತದೊಂದಿಗೆ ಕುಷ್ಟಗಿ ಪುರಸಭೆಯಲ್ಲಿ ಅಧಿಕಾರದ ಗುದ್ದುಗೆ ಪಡೆದಿದೆ.
ಯಲಬುರ್ಗಾ ಪಟ್ಟಣ ಪಂಚಾಯತ್:
ಯಲಬುರ್ಗಾ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿಗೆ ಭಾರೀ ಮುಖಭಂಗವಾಗಿದೆ. 15 ಸ್ಥಾನಗಳ ಪೈಕಿ ಕಾಂಗ್ರೆಸ್ ಕೇವಲ 3 ಸ್ಥಾನಗಳನ್ನು ಗಳಿಸಿದ್ದು, 11 ಬಿಜೆಪಿ ಹಾಗೂ 1 ಪಕ್ಷೇತರ ಅಭ್ಯರ್ಥಿ ವಿಜಯಸಾಧಿಸಿದ್ದಾರೆ. ಬಹುಮತ ಪಡೆದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv