ಬೆಂಗಳೂರು: ರಾಜ್ಯದ ಕೆಲವು ಭಾಗದಲ್ಲಿ ಸತತ ಎರಡು ವಾರಗಳ ಕಾಲ ಬಿಡುವಿಲ್ಲದೇ ಸುರಿದ ಮಳೆರಾಯ ಒಂದು ವಾರ ಬಿಡುವು ನೀಡಲಿದ್ದಾನೆ.
ರಾಜ್ಯದಲ್ಲಿ ಇನ್ನು ಒಂದು ವಾರ ಮಳೆಯಾಗುವ ಸಾಧ್ಯತೆ ಕಡಿಮೆಯಿದೆ. ರಾಜ್ಯದಲ್ಲಿ ಯಾವುದೇ ಮೋಡಗಳ ಸಾಲು (ಟ್ರಂಪ್) ನಿರ್ಮಾಣವಾಗಿಲ್ಲ ಎಂದು ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ. ಇದನ್ನು ಓದಿ: ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಗುಡ್‍ನ್ಯೂಸ್, ಆತಂಕದಲ್ಲಿ ತಮಿಳುನಾಡು!
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಹಾಮಳೆಗೆ ರಾಜ್ಯದ ಅನೇಕ ನದಿಗಳು ಮೈದುಂಬಿ ಹರಿಯುತ್ತಿವೆ. ಅವಧಿಗೂ ಮುನ್ನವೇ ರಾಜ್ಯ ಜಲಾಶಯಗಳು ಭರ್ತಿಯಾಗಿವೆ.