ಬೆಂಗಳೂರು: ಹಿಜಬ್ ವಿವಾದದ ಹೊತ್ತಲ್ಲೇ ನಾಳೆಯಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭ ಆಗಲಿದೆ.
10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಈಗಾಗಲೇ ದಾಖಲೆಗಳನ್ನೆಲ್ಲಾ ಆಡಳಿತ, ವಿಪಕ್ಷಗಳು ಕಲೆ ಹಾಕಿವೆ. ಸರ್ಕಾರದ ನಿಲುವುಗಳನ್ನು ಸಮರ್ಥನೆ ಮಾಡಿಕೊಳ್ಳಲು, ವಿಪಕ್ಷಗಳ ಆರೋಪಕ್ಕೆ ಸೂಕ್ತ ರೀತಿಯಲ್ಲಿ ಉತ್ತರ ನೀಡಲು ಶಾಸಕರು ಹಾಗೂ ಸಚಿವರಿಗೆ ಸಿಎಂ ಸೂಚಿಸಿದ್ದಾರೆ. ಹಿಜಬ್ ಪ್ರಕರಣ ಕೋರ್ಟ್‍ನಲ್ಲಿ ಇರೋದ್ರಿಂದ ನ್ಯಾಯಾಲಯದ ಪರಿಮಿತಿಯಲ್ಲೇ ಉತ್ತರಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಫೆ.14 ರಿಂದ ವಿಧಾನಮಂಡಲದ ಜಂಟಿ ಅಧಿವೇಶನ – ಮಾರ್ಚ್ ಮೊದಲ ವಾರ ಬಜೆಟ್ ಮಂಡನೆ
ಕಾಂಗ್ರೆಸ್‍ನಿಂದ ಹಿಜಬ್ ಪ್ರಚೋದನಾ ನಡೆ, ಚುನಾವಣಾ ಲಾಭದ ಲೆಕ್ಕಾಚಾರಗಳ ಪ್ರಸ್ತಾಪಗೊಳ್ಳಲಿದೆ. ಜೊತೆಗೆ ಕೈ ಮುಖಂಡರ ವಿವಾದಾತ್ಮಕ ಹೇಳಿಕೆಗಳ ಪ್ರಸ್ತಾಪಿಸಿ ಮುಜುಗರ ಉಂಟು ಮಾಡಲು ಪ್ಲಾನ್ ಮಾಡಿದೆ. ಈ ಮಧ್ಯೆ ನಾಳೆ ಸಂಜೆ ಖಾಸಗಿ ಹೋಟೆಲ್‍ನಲ್ಲಿ ಸಿಎಂ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ. ಇದನ್ನೂ ಓದಿ: ನಿಮ್ಮ ಚಿಕ್ಕಮಗಳೂರಿನ ಆಟ ಇಲ್ಲಿ ಆಡಲು ಬಂದ್ರೆ ಬಿಡಲ್ಲ – ಎಸ್‍ಪಿಗೆ ಎಚ್‍ಡಿಕೆ ವಾರ್ನಿಂಗ್