ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣಾ ಕಾವು ಏರುತ್ತಿದೆ. ಚುನಾವಣೆಗೆ ಆರೇಳು ತಿಂಗಳು ಬಾಕಿ ಇದೆ. ಆದ್ರೆ ತಮ್ಮ ತಮ್ಮ ಅಭ್ಯರ್ಥಿಗಳ ಪರ ಅಭಿಮಾನಿಗಳು ಬ್ಯಾಟ್ ಬೀಸುತ್ತಿದ್ದಾರೆ. ಈ ವಿಚಾರವಾಗಿಯೇ ಬಸವರಾಜ ಹೊರಟ್ಟಿ ಬೆಂಬಲಿಗರೊಬ್ಬರು, ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೊರಟ್ಟಿಯವರ ಬೆಂಬಲಿಗ ಗಜಾನನ ಅನ್ವೇಕರ್, ರವೀಂದ್ರ ಪಾಟೀಲ್ ಎಂಬವರಿಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಬಸವರಾಜ್ ಹೊರಟ್ಟಿಯವರು ವಿರುದ್ಧ ಸಂಘ ಕಟ್ಟಿಕೊಂಡು ಅವರ ವಿರುದ್ಧ ಬರುವ ಚುನಾವಣೆಯಲ್ಲಿ ಪ್ರಚಾರ ಮಾಡಬಾರದು ಎಂದು ಗಜಾನನ ಅನ್ವೇಕರ್, ರವೀಂದ್ರ ಪಾಟೀಲ್‍ಗೆ ಧಮ್ಕಿ ಹಾಕಿರುವ ಬಗ್ಗೆ ಆರೋಪವಿದೆ. ಇದನ್ನೂ ಓದಿ: ಅಮರೀಂದರ್ ಹೊಸ ಪಕ್ಷ ಸ್ಥಾಪನೆ – ರೈತರ ಸಮಸ್ಯೆ ಪರಿಹಾರವಾದರೆ ಬಿಜೆಪಿ ಜೊತೆ ಮೈತ್ರಿ
ತನ್ನ ಸಹರಚರೊಂದಿಗೆ ಆಗಮಿಸಿದ ಗಜಾನನ ಹಾಗೂ ತನ್ನಿಬ್ಬರು ಸಹಚರರು ರವೀಂದ್ರ ಪಾಟೀಲ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಶೋಕ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಇಂದು ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಭವಿಷ್ಯ ನಿರ್ಧಾರ