– ತಲೆ ಕೆಟ್ಟವರು ವಿಧಾನಸೌಧ ವಕ್ಫ್ ಆಸ್ತಿ ಅಂತಿದ್ದಾರೆ
– 5 ಗ್ಯಾರಂಟಿ ಅಂತಾ ಘೋಷಣೆ ಮಾಡಿದ್ರು, ಎರಡು ಗ್ಯಾರಂಟಿ ಠುಸ್ ಆಗಿದೆ
ಬೆಂಗಳೂರು: ಮುಸ್ಲಿಮರು ಮತಾಂತರ ಬಿಟ್ಟು ಈಗ ಜಮೀನಾಂತರ ಮಾಡ್ತಿದ್ದಾರೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಕಿಡಿಕಾರಿದರು.
Advertisement
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ರಾಜ್ಯದ ಜನರಿಗೆ ದುಷ್ಟ ಸಂಹಾರ ಆಗಲಿ. ರೈತರ ಜಮೀನು ವಕ್ಫ್ ಬೋರ್ಡ್ ಲೂಟಿ ಮಾಡಲು ಹೊರಟಿದೆ. ಅದರಿಂದ ಮುಕ್ತಿ ಸಿಗೋ ಯೋಗ ರೈತರಿಗೆ ಬರಲಿ. ವಿಜಯಪುರ ಡಿಸಿ ಕಚೇರಿ ಮುಂದೆ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ನಮ್ಮ ಪಕ್ಷ ರೈತರ ಪರ ಇರಲಿದೆ. ಅವರ ಪ್ರತಿಭಟನೆಗೆ ಬೆಂಬಲ ಇದೆ. ಅನ್ನದಾತನಿಗೆ ಕನ್ನ ಹಾಕೋ ಕೆಲಸ ಜಮೀರ್ ಮತ್ತು ಸಿದ್ದರಾಮಯ್ಯ ಟೀಂ ಮಾಡಿದೆ. ಕಾಂಗ್ರೆಸ್ ಅವರಿಗೆ ಮುಸ್ಲಿಂ ಭೂತ ಹಿಡಿದಿದೆ. ದೆವ್ವ ಬಿಡಿಸೋಕೆ ಹುಣಸೆ ಬರಲು ತಗೊಂಡು ಬಡಿಯೋ ವರೆಗೂ ಅವರಿಗೆ ದೆವ್ವ ಬಿಡೋದಿಲ್ಲ. ಕೋಲಾರ, ಚನ್ನಪಟ್ಟಣ, ಹುಬ್ಬಳ್ಳಿ, ಬೆಳಗಾವಿ ಎಲ್ಲಾ ಕಡೆ ನೋಟಿಸ್ ಹೋಗಿದೆ. ನುಸುಳುಕೋರರ ರೀತಿ ವಕ್ಫ್ ಬೋರ್ಡ್ ದಾಖಲೆ ತಿದ್ದುವ ಕೆಲಸ ಮಾಡ್ತಿದೆ. ಹೀಗಾಗಿ, ಇಡೀ ರಾಜ್ಯಾದ್ಯಂತ ನವೆಂಬರ್ 4 ರಂದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
Advertisement
Advertisement
ಸರ್ಕಾರವೇ ರೈತರ ಭೂಮಿ ಕಬಳಿಕೆ ಮಾಡ್ತಿದೆ. ರೈತರ ಸಂಘಕ್ಕೆ ಮನವಿ ಮಾಡ್ತೀನಿ ಬೀದಿಗಿಳಿದು ಹೋರಾಟ ಮಾಡಿ. ಇಲ್ಲದೆ ಹೋದ್ರೆ ಮುಂದೆ ಕೃಷಿ ಮಾಡೋಕೆ ಭೂಮಿ ಇರೊಲ್ಲ. ತಲೆ ಕೆಟ್ಟವನು ವಿಧಾನಸೌಧ ವಕ್ಫ್ ಆಸ್ತಿ ಅಂತಿದ್ದಾರೆ. ಸಂಸತ್ ಭವನ ವಕ್ಫ್ ಆಸ್ತಿ ಅಂತಿದ್ದಾರೆ. ಮುಸ್ಲಿಮರು ಯಾವಾಗ ಭಾರತಕ್ಕೆ ಬಂದರು? ಮುಸ್ಲಿಮರು ಮತಾಂತರ ಬಿಟ್ಟು ಈಗ ಜಮೀನಾಂತರ ಮಾಡ್ತಿದ್ದಾರೆ. ಸಿದ್ದರಾಮಯ್ಯ ಮುಸ್ಲಿಮರ ಓಲೈಕೆ ಮಾಡದೇ ನಿದ್ದೆ ಬರೋದಿಲ್ಲ. ರೈತರ ಹೆಸರಿನಲ್ಲಿ ದಾಖಲಾತಿ ಆಗೋವರೆಗೂ ನಾವು ಹೋರಾಟ ಬಿಡೊಲ್ಲ. ನಾವು ಹಿಟ್ ಅಂಡ್ ರನ್ ಅಂತ ಸಿಎಂ ಹೇಳ್ತಾರೆ. ನಾವು ಮುಡಾ ಪ್ರತಿಭಟನೆ ಮಾಡಿದ್ವಿ. ನಿಮ್ಮ ಮೇಲೆ 420 ಕೇಸ್ ಬುಕ್ ಆಗಿದೆ. ಸಿಎಂ ಗೌರವ ಇದ್ದಿದ್ದರೆ ರಾಜೀನಾಮೆ ಕೊಟ್ಟ ಹೋಗಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.
Advertisement
ಬಿಜೆಪಿ ಹೋರಾಟದಿಂದ ಮುಡಾ ಕೇಸ್ ತಾರ್ಕಿಕ ಅಂತ್ಯ ಕಾಣಸಿದ್ದೇವೆ. ವಾಲ್ಮೀಕಿ ಹಗರಣದಲ್ಲೂ ಸರ್ಕಾರಿ ಅಧಿಕಾರಿ ಸಾವಿಗೆ ನ್ಯಾಯ ಒದಗಿಸಿ ಕೊಟ್ಟಿದ್ದೇವೆ. ಇದು ಬಿಜೆಪಿ ಹೋರಾಟ ಮಾಡಿ ಆಗಿರೋದು. ಬಿಜೆಪಿ ರಾಷ್ಟ್ರೀಯ ಪಾರ್ಟಿ. 17 ರಾಜ್ಯದಲ್ಲಿ ಬಿಜೆಪಿ ಅಧಿಕಾದಲ್ಲಿ ಇದ್ದೇವೆ. ನಿಮ್ಮತರ 4 ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲ. ನಾವು ಹಿಟ್ ಅಂಡ್ ರನ್ ಅಲ್ಲ. ನಾವು ಹಿಟ್ ಮಾಡಿದ ಕೂಡಲೇ ಕಾಂಗ್ರೆಸ್‌ನವರು ರನ್ ಮಾಡಿದ್ದಾರೆ. ಈ ಸರ್ಕಾರ ತುಘಲಕ್ ಸರ್ಕಾರ. 5 ಗ್ಯಾರಂಟಿ ಅಂತ ಘೋಷಣೆ ಮಾಡಿದ್ರು. ಎರಡು ಗ್ಯಾರಂಟಿ ಠುಸ್ ಆಗಿದೆ. ಡಿಸಿಎಂಗೆ ಮಹಿಳೆಯರು ಮೇಲ್, ಮೆಸೇಜ್ ಮಾಡಿದ್ದಾರೆ. ಸಿಎಂ, ರಾಮಲಿಂಗಾರೆಡ್ಡಿಗೆ ಬಿಟ್ಟು ಡಿಸಿಎಂಗೆ ಮಾಡಿದ್ದಾರೆ ಅಂತಾ. ಯೋಜನೆ ರದ್ದು ಮಾಡೋಕೆ ಇದು. ಕಳ್ಳನಿಗೆ ಪಿಳ್ಳೆನೆವ ಎಂಬಂತೆ ಯೋಜನೆ ಕ್ಯಾನ್ಸಲ್ ಮಾಡೋಕೆ ಹೊರಟಿದ್ದಾರೆ. ಸರ್ಕಾರದ ಬಳಿ ಹಣ ಇಲ್ಲ ಅಂತಾ ಗೊತ್ತಾಗ್ತಿದೆ. ಹೀಗಾಗಿ ಡಿಸಿಎಂ ಹೀಗೆ ಹೇಳ್ತಿದ್ದಾರೆ. ರೇಷನ್ ಕಾರ್ಡ್ ಕೂಡಾ ರದ್ದು ಮಾಡಲು ಹೊರಟಿದ್ದಾರೆ. ಈ ಸರ್ಕಾರ ಬಡವರ ಶಾಪಕ್ಕೆ ಗುರಿ ಆಗಿದ್ದಾರೆ. ಲೋಕಸಭೆ ಚುನಾವಣೆ ಆದ ಮೇಲೆ ಗ್ಯಾರಂಟಿ ಯೋಜನೆ ಇರೊಲ್ಲ ಅಂತ ಹೇಳಿದ್ವಿ. ಅದರಂತೆ ಈಗ ಶಕ್ತಿ ಯೋಜನೆ ಪರಿಷ್ಕರಣೆ ಅಂತಿದ್ದಾರೆ. ಸಾರಿಗೆ ಇಲಾಖೆಗೆ ಸಂಬಳ ಕೊಡಲು ಹಣ ಇಲ್ಲದ ಸ್ಥಿತಿ ಬಂದಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.