ಬೆಂಗಳೂರು: ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕವನ್ನು (Land Revenue Act) ವಾಪಾಸ್ ಪಡೆಯಲು ಸಚಿವ ಸಂಪುಟದಲ್ಲಿ (Cabinet Meeting) ತೀರ್ಮಾನಿಸಿದೆ.
ಈ ಮೊದಲು ಕೃಷಿ ಭೂಮಿ ಹೊಂದಿದವರು ಮಾತ್ರ ಕೃಷಿ ಭೂಮಿ ಖರೀದಿಗೆ ಅವಕಾಶ ಇತ್ತು. 2022 ರಲ್ಲಿ ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕದ ಮೂಲಕ ಯಾರು ಬೇಕಾದರೂ ಭೂಮಿ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಇದನ್ನೂ ಓದಿ: ಶಾಲಾ ಮಕ್ಕಳಿಗೆ ನಾಲ್ಕು ಜೊತೆ ಶೂ, ಸಾಕ್ಸ್ ಕೊಡಿ: ಪ್ರದೀಪ್ ಈಶ್ವರ್ ಆಗ್ರಹ
Advertisement
Advertisement
ಬಿಜೆಪಿ ಸರ್ಕಾರದ ಅವಧಿಯ ಕರ್ನಾಟಕ ಭೂಕಂದಾಯ ತಿದ್ದುಪಡಿ ವಿದೇಯಕವನ್ನು ವಾಪಸ್ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕೆಲವೊಂದು ಹೊಸ ತಿದ್ದುಪಡಿಯೊಂದಿಗೆ ನೂತನ ವಿಧೇಯಕ ಈ ಬಾರಿಯ ಅದಿವೇಶನದಲ್ಲೇ ಮಂಡಿಸಲು ತೀರ್ಮಾನಿಸಲಾಗಿದೆ.