ಧಾರವಾಡ: ಹಿಂದೂ (Hindu) ಪದವನ್ನು ತಂದಿದ್ದೇ ಕಾಂಗ್ರೆಸ್ ಪಕ್ಷ (Congress) ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ತೊಗಲು ಬೊಂಬೆಯಾಟ ಉತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ವೇಳೆ ಹಿಂದೂ ಎಂಬ ಪದವನ್ನು ತಂದಿದ್ದೇ ಕಾಂಗ್ರೆಸ್ ಪಕ್ಷ. ಈ ದೇಶದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ. ಡಾ.ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ತರದೇ ಇದ್ದಿದ್ರೆ ನಾವು ಹೀಗೆ ಇರುತ್ತಿರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿರೋದು ದಪ್ಪ ಎಮ್ಮೆ ಚರ್ಮದ ಸರ್ಕಾರ: ಸುನೀಲ್ ಕುಮಾರ್
ಹಿಂದೂ ಕೋಡ್ ಬಿಲ್ ತರದೇ ಇದ್ದಿದ್ರೆ ಶೂದ್ರರನ್ನು ಕರೆಯಿರಿ, ಬ್ರಾಹ್ಮಣ, ವೈಷ್ಯರನ್ನು ಕರೆಯಿಸಿ ಎಂಬ ವ್ಯವಸ್ಥೆ ಇರುತ್ತಿತ್ತು. ಇತಿಹಾಸವನ್ನು ಜನ ಓದುವುದಿಲ್ಲ. ಮಾಧ್ಯಮಗಳ ಮೂಲಕ ಸುಳ್ಳು ಹೇಳುವುದೇ ಇವತ್ತಿನ ರಾಜಕಾರಣದಲ್ಲಿ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿಯವರು (BJP) ಮಾತನಾಡ್ತಾರೆ. ನಮ್ಮ ಬಗ್ಗೆ ಹಿಗ್ಗಾಮುಗ್ಗಾ ಇಲ್ಲಸಲ್ಲದ ವಿಚಾರ ಮಾತಾಡ್ತಾರೆ. ಜನರು ಸಹ ಕಾಂಗ್ರೆಸ್ ಪಕ್ಷವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಪಕ್ಷವನ್ನು ಹಿಂದೂಗಳು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ದೇವೇಗೌಡರು ಕರ್ನಾಟಕಕ್ಕೆ ಕೇಂದ್ರ ಮಾಡಿರೋ ಅನ್ಯಾಯದ ಬಗ್ಗೆ ಮಾತಾಡಲಿ: ಕೃಷ್ಣ ಬೈರೇಗೌಡ