ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಶಿವಮೊಗ್ಗದ ಕುವೆಂಪು ವಿವಿಯ ಅಧಿಕೃತ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ.
http://www.kuvempu.ac.in ಹೆಸರಿನ ಈ ವೆಬ್ ಪುಟದಲ್ಲಿ ಕುವೆಂಪು ಅವರ ಭಾವಚಿತ್ರ, ವಿಶ್ವಮಾನವ ಸಂದೇಶ ಹಾಗೂ ವಿವಿಯ ಚಟುವಟಿಕೆಗಳ ಮಾಹಿತಿ ಇತ್ತು. ಆದರೆ ಇಂದು ಬೆಳಗ್ಗೆ ವೆಬ್‍ಸೈಟ್ ಪೇಜ್ ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಜೊತೆಗೆ ಸೆಕ್ಯುರಿಟಿ ಈಸ್ ಜಸ್ಟ್ ಫ್ಯಾಂಟಸಿ ಎಂಬ ವಾಕ್ಯಗಳು ಕಂಡು ಬಂದಿವೆ.
Advertisement
ಈ ಕುರಿತು ಹಂಟರ್ ಬುಜ್ವಾ ಎಂಬ ಹ್ಯಾಕರ್ ತಂಡವು ತಮ್ಮ ಕೃತ್ಯ ಎಂದು ಹೇಳಿಕೊಂಡಿದೆ. ಇದನ್ನು ತಮ್ಮ ಫೇಸ್ ಬುಕ್ ನಲ್ಲೂ ಕುವೆಂಪು ವಿವಿ ವೆಬ್ ಸೈಟ್ ಹ್ಯಾಕ್ ಮಾಡಿರುವುದಾಗಿ ಪ್ರಕಟಿಸಿದೆ. ಕಾಲೇಜು ದಾಖಲಾತಿ ನಡೆಯುತ್ತಿರುವುದರಿಂದ ವೆಬ್ ಸೈಟ್ ಹ್ಯಾಕ್ ಆಗಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿತ್ತು. ವಿವಿಯ ಐಟಿ ತಂಡ ವೆಬ್ ಸೈಟ್ ಡೌನ್ ಮಾಡಿ, ಮಾಹಿತಿಯ ಪುನರ್ ಪರಿಶೀಲನೆ ಮಾಡಿ ಮಧ್ಯಾಹ್ನದ ವೇಳೆಗೆ ಸರಿಪಡಿಸಿದೆ.
Advertisement
ಈ ಬಗ್ಗೆ ವಿವಿ ಕುಲಪತಿ ಜೋಗರ್ ಶಂಕರ್ ಶಿವಮೊಗ್ಗ ಸೈಬರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ತನಿಖೆಯ ನಂತರವಷ್ಟೇ ಈ ಹ್ಯಾಕ್ ಮಾಡಿರುವುದು ನಿಜವಾಗಿಯೂ ಪಾಕಿಸ್ತಾನಿ ಹ್ಯಾಕರ್ ಗಳೇ ಅಥವಾ ಸ್ಥಳೀಯರೇ ಎಂಬುದು ತಿಳಿಯಲಿದೆ.