ಬೆಂಗಳೂರು: ಕ್ಷತ್ರಿಯ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯಕ್ಕೆ ಒತ್ತಾಯಿಸಿ ಬೆಂಗಳೂರಿನಲ್ಲಿಂದು ಬೃಹತ್ ಕ್ಷತ್ರಿಯ ಸಮಾವೇಶ (Karnataka Kshatriya Samavesha) ನಡೆಯಿತು. ಸಮಾವೇಶದಲ್ಲಿ ಕ್ಷತ್ರಿಯ ಸಮುದಾಯದ ಎಲ್ಲ 38 ಪಂಗಡಗಳು ಒಟ್ಟಾಗಿ ಬೃಹತ್ ಶಕ್ತಿ ಪ್ರದರ್ಶನ ಮಾಡಿದವು.
ನಗರದ ಅರಮನೆ ಮೈದಾನದಲ್ಲಿ ರಾಜ್ಯ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್ (Uday Singh) ನೇತೃತ್ವದಲ್ಲಿ ಕ್ಷತ್ರಿಯ ಸಮುದಾಯದ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ (CM Basavaraj Bommai) ಚಾಲನೆ ಕೊಟ್ಟರು. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಂಸದ ಪಿಸಿ ಮೋಹನ್, ಜೆಡಿಎಸ್ ನಾಯಕ ಬಂಡೆಪ್ಪ ಕಾಶಂಪೂರ್ ಸೇರಿ ಸಮುದಾಯದ ಮಠಾಧೀಶರು, ಪ್ರಮುಖರು ಭಾಗವಹಿಸಿದ್ದರು. ಸಮಾವೇಶದಲ್ಲಿ ರಾಜಕೀಯ ಪ್ರಾತಿನಿಧ್ಯ ಸಿಗದಿದ್ದರೆ, ಒಗ್ಗಟ್ಟಾಗಿ ಹೋರಾಟದ ಸುಳಿವು ಕೊಡಲಾಯಿತು.
Advertisement
Advertisement
ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿಗೆ ಸಮುದಾಯದ ಬೇಡಿಕೆಗಳ ಪಟ್ಟಿ ಕೊಡಲಾಯಿತು. ಬಳಿಕ ಮಾತಾಡಿದ ಸಿಎಂ ಬೊಮ್ಮಾಯಿ ಕ್ಷತ್ರಿಯ ಸಮುದಾಯದ ಅವಿರತ ದೇಶ ಸೇವೆ ಬಗ್ಗೆ ಮೆಚ್ಚುಗೆಯ ಮಾತಾಡಿದರು. ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಬಗ್ಗೆಯೂ ಸಿಎಂ ಭರವಸೆ ಕೊಟ್ಟರು. ಇದನ್ನೂ ಓದಿ: ರಾಜ್ಯದಲ್ಲಿ 150 ಸ್ಥಾನ ಗೆದ್ದು BJP ಅಧಿಕಾರಕ್ಕೆ ಬರೋದು ಖಚಿತ – ಅರುಣ್ ಸಿಂಗ್ ವಿಶ್ವಾಸ
Advertisement
ಸಮಾವೇಶದಲ್ಲಿ ಮಾತಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಎಲ್ಲ ಬೇಡಿಕೆಗಳನ್ನೂ ಈಡೇರಿಸುವಲ್ಲಿ ಸಮುದಾಯ ಮತ್ತು ಸರ್ಕಾರ ನಡುವೆ ದೂತನಾಗಿ ಇರುತ್ತೇನೆ ಎಂದು ಭರವಸೆ ನೀಡಿದರು..
Advertisement
ಬೆಂಗಳೂರು ನಗರದಲ್ಲಿ ಶೇ. 25 ರಷ್ಟು ಕ್ಷತ್ರಿಯ ಸಮುದಾಯದವರಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಕನಿಷ್ಠ 20 ರಿಂದ 25 ಸಾವಿರ ಕ್ಷತ್ರಿಯ ಸಮುದಾಯದವರು ಇದ್ದಾರೆ. ಸುಮಾರು 150 ವಿಧಾನಸಭಾ ಕ್ಷೇತ್ರಗಳಲ್ಲಿ ಸಮುದಾಯದ ಪ್ರಾಬಲ್ಯ ಇದೆ. ಆದ್ದರಿಂದ ಈ ಬಾರಿ ನಮಗೆ ಪ್ರಾತಿನಿಧ್ಯ ನೀಡಿ ಎನ್ನುವ ಸಂದೇಶವನ್ನು ಸಮಾವೇಶದ ಮೂಲಕ ಎಲ್ಲಾ ರಾಜಕೀಯ ಪಕ್ಷಗಳಿಗೂ ಕ್ಷತ್ರಿಯ ಸಮುದಾಯ ರವಾನಿಸಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k