ಬೆಳಗಾವಿ: ರಾಜ್ಯದ ಕೆಎಂಎಫ್ (KMF) ನಷ್ಟದಲ್ಲಿಲ್ಲ, ಈ ವರ್ಷ 200 ಕೋಟಿ ರೂ. ಲಾಭದಲ್ಲಿದೆ. ಹೀಗಾಗಿ ಅಮುಲ್ ಜೊತೆಗೆ ನಂದಿನಿ ಯಾವುದೇ ಕಾರಣಕ್ಕೂ ವಿಲೀನ ಆಗಲ್ಲ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಹೇಳಿದ್ದಾರೆ.
Advertisement
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಎಂಎಫ್ ಹಾಗೂ ರಾಜ್ಯದ 15 ಒಕ್ಕೂಟಗಳು ಈ ವರ್ಷ 22 ಸಾವಿರ ಕೋಟಿ ರೂ. ವಹಿವಾಟು ನಡೆಸಿವೆ. ಅದರಲ್ಲಿ ಕೆಎಂಎಫ್‌ಗೆ 100 ಕೋಟಿ ರೂ. ಹಾಗೂ ಇತರೇ 15 ಒಕ್ಕೂಟಗಳ ಲಾಭ 100 ಕೋಟಿ ರೂ. ಸೇರಿ 200 ಕೋಟಿ ಲಾಭದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದೇವೇಗೌಡರ ತೀರ್ಮಾನವೇ ಅಂತಿಮ, ಅವರು ಹಾಕಿದ ಗೆರೆ ದಾಟಲ್ಲ : ಹೆಚ್.ಡಿ ರೇವಣ್ಣ
Advertisement
Advertisement
ಯಾವುದೇ ಕಾರಣಕ್ಕೂ ನಂದಿನಿ-ಅಮುಲ್ (Amul) ವಿಲೀನ ಆಗಲ್ಲ. ಬೇಕಾದಷ್ಟು ಕಂಪನಿಗಳು ಬಂದರೂ ನಂದಿನಿಗೆ (Nandini) ಯಾರೂ ಕಾಂಪಿಟೇಷನ್ ಕೊಡಲು ಆಗಲ್ಲ. 10 ಅಮುಲ್ ನಂಥ ಕಂಪನಿಗಳು ಬಂದರೂ ಅದಕ್ಕೆ ಪ್ರತಿಸ್ಪರ್ಧೆ ಒಡ್ಡಲು ನಾವು ಸಿದ್ಧರಿದ್ದೇವೆ. ರಾಜಕೀಯ (Politics) ಕಾರಣಕ್ಕೆ ಕೆಲ ರಾಜಕೀಯ ಪಕ್ಷಗಳು, ಸಂಘಟನೆಗಳು ಈ ರೀತಿ ಮಾಡುತ್ತಿವೆ. ನಮ್ಮ ಗ್ರಾಹಕರು, ರೈತರು ಹಾಗೂ ಉದ್ಯೋಗಿಗಳ ಹಿತ ಕಾಯಲು ನಾವು ಸಿದ್ಧರಿದ್ದೇವೆ. ಒಂದು ವಾರದಿಂದಲೂ ಗೊಂದಲವಿದೆ. ಈ ಗೊಂದಲ ಏಕೆ ಆಗ್ತಿದೆ ಎಂಬುದು ಗೊತ್ತಾಗ್ತಿಲ್ಲ. ನಾನು ರಾಜ್ಯದ ರೈತರು, ಗ್ರಾಹಕರಿಗೆ ಸಂದೇಶ ನೀಡುತ್ತೇನೆ, ಅಮುಲ್ ಜೊತೆಗೆ ನಂದಿನಿ ವಿಲೀನ ಆಗಲ್ಲ ಎಂದು ಬಾಲಚಂದ್ರ ಹೇಳಿದರು. ಇದನ್ನೂ ಓದಿ: ಆಕಾಶದಲ್ಲಿ ಜಾಗ ಸಿಕ್ಕಿಲ್ಲ, ಸಿಕ್ಕಿದ್ರೆ ಅಲ್ಲೂ ಭ್ರಷ್ಟಚಾರ ಮಾಡುತ್ತಿದ್ದರು: ಸಿ.ಟಿ.ರವಿ ವಿರುದ್ಧ ತಮ್ಮಯ್ಯ ವಾಗ್ದಾಳಿ