ಬೆಂಗಳೂರು: ಕರ್ನಾಟಕದ ಆಟಗಾರ ಕೆ ಗೌತಮ್ ಒಂದೇ ಪಂದ್ಯದಲ್ಲಿ ಶತಕದೊಂದಿಗೆ 8 ವಿಕೆಟ್ ಪಡೆದು ಟಿ-20 ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.
30 ವರ್ಷದ ಕೃಷ್ಣಪ್ಪ ಗೌತಮ್ ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನ 15 ಪಂದ್ಯದಲ್ಲಿ ಉತ್ತಮ ಆಲ್‍ರೌಂಡರ್ ಪ್ರದರ್ಶನ ತೋರುವ ಮೂಲಕ ಮಿಂಚಿದ್ದಾರೆ.
Advertisement
???? Record Alert ????
FOUR records were broken after that effort from @gowthamyadav88 tonight.#JustGowthamThings ????????♂️ #BTvSL #KPLNoduGuru pic.twitter.com/mgpkuhJkLr
— Namma KPL (@KPLKSCA) August 23, 2019
Advertisement
ಪ್ರಸಕ್ತ ಸಾಲಿನ ಕೆಪಿಎಲ್‍ನಲ್ಲಿ ಬಳ್ಳಾರಿ ಟಸ್ಕರ್ಸ್ ಪರವಾಗಿ ಆಡುತ್ತಿರುವ ಗೌತಮ್ ಶುಕ್ರವಾರ ನಡೆದ ಶಿವಮೊಗ್ಗ ಲಯನ್ಸ್ ವಿರುದ್ಧದ ಪಂದ್ಯದಲ್ಲಿ 29 ಎಸೆತದಲ್ಲಿ ಶತಕ ಬಾರಿಸುವುದರ ಮೂಲಕ ಕೆಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದರು. ಒಟ್ಟು 56 ಎಸೆತೆಗಳಲ್ಲಿ 7 ಬೌಂಡರಿ ಮತ್ತು 13 ಭರ್ಜರಿ ಸಿಕ್ಸರ್ ಸಮೇತ 134 ರನ್ ಹೊಡೆದು ಅಜೇಯರಾಗಿ ಉಳಿದು, ಕೆಪಿಎಲ್‍ನಲ್ಲಿ ವೈಯಕ್ತಿಕ ಅತೀ ಹೆಚ್ಚು ರನ್ ಸ್ಕೋರ್ ಮಾಡಿದವರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
Advertisement
ಇನ್ನೊಂದು ದಾಖಲೆ ಬರೆದಿರುವ ಗೌತಮ್ ಅವರು ಟಿ-20 ಪಂದ್ಯವೊಂದರಲ್ಲಿ ಒಟ್ಟು ನಾಲ್ಕು ಓವರ್ ಬೌಲ್ ಮಾಡಿ ಅದರಲ್ಲಿ ಭರ್ಜರಿ 8 ವಿಕೆಟ್ ಕಿತ್ತು ಕೇವಲ 15 ರನ್ ನೀಡಿ ಟಿ-20 ಇತಿಹಾಸದಲ್ಲಿ ಯಾವ ಬೌಲರ್ ಮಾಡದ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಬಳ್ಳಾರಿಗೆ 70 ರನ್‍ಗಳ ಭರ್ಜರಿ ಜಯವನ್ನು ತಂದು ಕೊಟ್ಟಿದ್ದಾರೆ.
Advertisement
Innings of the tournament so far! ????
Describe @gowthamyadav88's record ton in a word… #BTvSL #KPL8 #NammaKPL #KPLNoduGuru pic.twitter.com/SqLmyEt6r9
— Namma KPL (@KPLKSCA) August 23, 2019
ಕೆಪಿಎಲ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಒಟ್ಟು 13 ಸಿಕ್ಸರ್ ಬಾರಿಸಿದ ಗೌತಮ್ ಬೌಂಡರಿ ಮತ್ತು ಒಟ್ಟು 106 ರನ್ ಹೊಡೆದು ದಾಖಲೆ ನಿರ್ಮಿಸಿದ್ದಾರೆ. ಗೌತಮ್ ಅವರ ಈ ಪ್ರದರ್ಶನ ಅಧಿಕೃತವಾಗಿ ಉಳಿಯದೇ ಇದ್ದರು. ಭಾರತ ಎ ತಂಡದಲ್ಲಿ ಕಳೆದ ಕೆಲವು ವರ್ಷಗಳಿಂದ ಆಡುತ್ತಿರುವ ಗೌತಮ್ ಈ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕನ್ನಡಿಗನ ಈ ಸಾಧನೆಯನ್ನು ಕೆಲ ಅಂತಾರಾಷ್ಟೀಯ ಕ್ರಿಕೆಟಿಗರು ಕೂಡ ಮೆಚ್ಚಿಕೊಂಡಿದ್ದು, ಆಸ್ಟ್ರೇಲಿಯಾದ ಮಾಜಿ ಆಟಗಾರ ಡೀನ್ ಜೋನ್ಸ್, ಗೌತಮ್ ಅವರ ಆಟದ ಕುರಿತು ಟ್ವೀಟ್ ಮಾಡಿದ್ದು, ಕೆ ಗೌತಮ್ ಅವರ 134 ರನ್ ಮತ್ತು 8 ವಿಕೆಟ್ ಪಡೆದಿರುವುದು ಟಿ-20 ಇತಿಹಾಸದಲ್ಲೇ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಎಂದಿದ್ದಾರೆ.
134* (56) and a world record 8 wickets!! ????????????
It's officially the Krishnappa Premier League! ????
????: @KPLKSCA pic.twitter.com/DwMZGPzm5F
— Rajasthan Royals (@rajasthanroyals) August 23, 2019
ಇದರ ಜೊತೆಗೆ ಮಾಜಿ ಭಾರತದ ಆಟಗಾರ ಆಕಾಶ್ ಚೋಪ್ರಾ ಅವರು ಟ್ವೀಟ್ ಮಾಡಿದ್ದು, ಟಿ-20 ಯಲ್ಲಿ 134 ರನ್ ಹೊಡೆಯುವುದು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮತ್ತು ಅದೇ ಪಂದ್ಯದಲ್ಲಿ 8 ವಿಕೆಟ್ ಪಡೆಯುವುದು ಅಸಾಧಾರಣ. ಆದರೆ ಕೆ. ಗೌತಮ್ ಅವರು ಎರಡು ದಾಖಲೆಗಳನ್ನು ಒಂದೇ ಪಂದ್ಯದಲ್ಲಿ ಮಾಡಿದ್ದಾರೆ. ಇದೂ ಅವಾಸ್ತವ ಎಂದು ಬರೆದುಕೊಂಡಿದ್ದಾರೆ.
I just witnessed K GOWTHAM making 134no with 13 x 6’s and then took 8/15… greatest bowling figures in T20 history! #ManoftheMatch
WOW!!!! ????????????????????????????????@KPLKSCA
— Dean Jones AM (@ProfDeano) August 23, 2019
ಕೆ. ಗೌತಮ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡುತ್ತಾರೆ. ಗೌತಮ್ ಅವರ ಈ ಅಮೋಘವಾದ ಆಟವನ್ನು ಮೆಚ್ಚಿ ರಾಜಸ್ಥಾನ್ ರಾಯಲ್ಸ್ ತಂಡವು ಟ್ವೀಟ್ ಮಾಡಿದ್ದು, 56 ಎಸೆತದಲ್ಲಿ 134 ರನ್ ಜೊತೆಗೆ 8 ವಿಕೆಟ್ ಇದು ವಿಶ್ವ ದಾಖಲೆ. ಇದು ಕೃಷ್ಣಪ್ಪ ಪ್ರೀಮಿಯರ್ ಲೀಗ್ ಎಂದು ಬರೆದುಕೊಂಡಿದೆ.