– ಜಾನಪದ ವಿವಿಗೆ ಎಲ್ಲಾ ವಿಷಯ ತಿಳಿದಿದ್ರೂ ಜಾಣ ಕುರುಡು?
– ಪಕ್ಕ ಪಕ್ಕದಲ್ಲೇ ಕೂರಿಸಿ ಬರೀಸ್ತಾರೆ ಪರೀಕ್ಷೆ
ಶಿವಮೊಗ್ಗ: ಶಿಗ್ಗಾಂವ್ ಸಮೀಪ ಇರುವ ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಹೆಸರಿನಲ್ಲಿ ವಂಚನೆ ನಡೆಯುತ್ತಿದ್ದರೂ ವಿವಿ ಮಾತ್ರ ಜಾಣ-ಕಿವುಡು, ಜಾಣ ಕುರುಡುತನ ತೋರುತ್ತಿದೆ.
ಹೌದು. ಶಿವಮೊಗ್ಗದ ವಿನೋಭಾ ನಗರದಲ್ಲಿ ಇರುವ ಕಟ್ಟಡದಲ್ಲಿ ಪುಟ್ಟ ಕೊಠಡಿಯಲ್ಲಿ ಒಬ್ಬರ ಪಕ್ಕ ಒಬ್ಬರು ಕುಳಿತು ಪರೀಕ್ಷೆ ಬರೆದಿದ್ದಾರೆ. ಅದೂ ಅಂತಿಂಥ ಪರೀಕ್ಷೆ ಅಲ್ಲ. ಕರ್ನಾಟಕ ಜನಪದ ವಿಶ್ವವಿದ್ಯಾಲಯ ಡಿಪ್ಲೋಮಾ ಇನ್ ಅಗ್ರಿಕಲ್ಚರ್ ಪರೀಕ್ಷೆ.
Advertisement
ಪ್ಯಾರಾ ಮೆಡಿಕಲ್ ಕಾಲೇಜು ಎಂಬ ಬೋರ್ಡ್ ಹಾಕಿರುವ ಈ ಕಟ್ಟಡದ ಈ ಪುಟ್ಟ ಪುಟ್ಟ ಕೊಠಡಿಗಳಲ್ಲಿ ಒಟ್ಟು 145 ಜನ ಪರೀಕ್ಷೆ ಬರೆಯುತ್ತಿದ್ದಾರೆ. ಕಳೆದ ವರ್ಷ ರಾಜ್ಯ ಆರು ಸೆಂಟರ್ ಗಳಲ್ಲಿ ಒಂದು ಸಾವಿರ ಜನ ಇದೇ ರೀತಿ ಪರೀಕ್ಷೆ ಬರೆದಿದ್ದಾರೆ.
Advertisement
Advertisement
ಈ ವರ್ಷ ರಾಜ್ಯಾದ್ಯಂತ 550 ಜನ ಪರೀಕ್ಷೆ ಬರೆಯುತ್ತಿದ್ದಾರೆ. ಜನಪದ ವಿವಿ ಈ ಪರೀಕ್ಷೆ ನಡೆಸಲು ಬೀದರ್ ಶ್ರೀಮಹಾಂತ ಎಜುಕೇಷನ್ ಟ್ರಸ್ಟ್ ಜೊತೆ ಒಪ್ಪಂದ ಮಾಡಿಕೊಂಡಿದೆ. ರಾಜ್ಯಾದ್ಯಂತ ಈ ಸೊಸೈಟಿ ವತಿಯಿಂದಲೇ ತರಗತಿ ಹಾಗೂ ಪರೀಕ್ಷೆ ನಡೆಸಲಾಗುತ್ತಿದೆ. ಶಿವಮೊಗ್ಗದಲ್ಲಿ ನಡೆಯುತ್ತಿರುವ ಪರೀಕ್ಷಾ ಕೇಂದ್ರದಲ್ಲಿ ವಿವಿಯ ಯಾವುದೇ ಪ್ರತಿನಿಧಿ ಇರಲಿಲ್ಲ. ಪಕ್ಕಪಕ್ಕವೇ ಕೂತು ಪರೀಕ್ಷೆ ಬರೆಸುತ್ತಿದ್ದರು.
Advertisement
ಎಲ್ಲಕ್ಕಿಂತ ಮುಖ್ಯವಾಗಿ ಈ ಪರೀಕ್ಷೆ ಬರೆದರೆ ಗೊಬ್ಬರದ ಅಂಗಡಿ ಲೈಸೆನ್ಸ್ ಮಾಡಿಸಬಹುದು ಎಂದು ಸಂಸ್ಥೆಯ ಕೋ-ಆರ್ಡಿನೇಟರ್ ಹೇಳಿದ್ದಾನೆ. ಇದು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಪರೀಕ್ಷೆ ಪಾಸು ಮಾಡಿದಲ್ಲಿ ಗೊಬ್ಬರ ಅಂಗಡಿ ಲೈಸೆನ್ಸ್ ಪಡೆಯಲು ಅಥವಾ ನವೀಕರಿಸಲು ಸಾಧ್ಯವೇ ಇಲ್ಲ. ಈ ಬಗ್ಗೆ ಬೆಂಗಳೂರು ಕೃಷಿ ವಿವಿ ನಡೆಸಿದ ರಾಜ್ಯದ ಎಲ್ಲಾ ಕೃಷಿ ವಿವಿಗಳ ಶೈಕ್ಷಣಿಕ ಸಮನ್ವಯ ಸಮಿತಿ ಸ್ಪಷ್ಟವಾದ ವರದಿ ನೀಡಿದೆ. ಆದರೂ ಕೂಡ ಈ ಸಂಸ್ಥೆಯವರು ಸುಳ್ಳು ಹೇಳಿ ಅಡ್ಮಿಷನ್ ಮಾಡಿಕೊಳ್ಳುತ್ತಿದ್ದಾರೆ. ಈ ಎಲ್ಲಾ ವಿಷಯ ತಿಳಿದಿದ್ದೂ ಜನಪದ ವಿವಿ ಯಾವುದೇ ಕ್ರಮಕೈಗೊಳ್ಳದೇ ಜಾಣ ಕಿವುಡು- ಜಾಣ ಮೌನ ವಹಿಸಿದೆ.
ಈ ಪರೀಕ್ಷೆ ಪಾಸ್ ಮಾಡಿಕೊಳ್ಳಲು ರಾಜ್ಯಾದ್ಯಂತ ಸಾವಿರಾರು ಜನ ಕ್ಯೂನಲ್ಲಿ ನಿಂತಿದ್ದಾರೆ. ಏಕೆಂದರೆ, ಕೇಂದ್ರ ಸರ್ಕಾರದ ಕೃಷಿ ಸಚಿವಾಲಯದ ಅಧಿಸೂಚನೆ ಪ್ರಕಾರ ಗೊಬ್ಬರ, ಔಷಧ ಹಾಗೂ ಕ್ರಿಮಿಕೀಟ ನಾಶಕ ಮಾರಾಟಗಾರರ ಲೈಸೆನ್ಸ್ ಪಡೆಯಲು ಈ ಸರ್ಟಿಫಿಕೇಟ್ ಕಡ್ಡಾಯ. ಈ ಕಡ್ಡಾಯವನ್ನೇ ಮಹಾಂತ ಎಜುಕೇಷನ್ ಟ್ರಸ್ಟ್ ಹಣ ಮಾಡುವ ದಂಧೆಯನ್ನಾಗಿಸಿಕೊಂಡಿದೆ.
ಕಳೆದ ವರ್ಷ ಸಾವಿರ, ಈ ವರ್ಷ ಐನೂರು ಜನ ನೋಂದಣಿಯಾಗಿದ್ದಾರೆ. ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗಿದೆ. ಸಂಸ್ಥೆಯನ್ನು ನಂಬಿ, ಗೊಬ್ಬರದಂಗಡಿ ಲೈಸೆನ್ಸ್ ಪಡೆಯಬಹುದು ಎಂದು ಗ್ರಾಮೀಣ ಪ್ರದೇಶದ ಜನ ಮೋಸ ಹೋಗುತ್ತಲೇ ಇದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews