ಬೆಂಗಳೂರು: ಎಲ್ಲಾ ಕಂಪನಿಗಳ ಕೆಲಸದ ಅವಧಿ 14 ಗಂಟೆಗೆ ಹೆಚ್ಚಳ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸ್ವಯಂ ಪ್ರೇರಿತವಾಗಿ ಹೇಳಿಕೆ ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ, ಎಲ್ಲಾ ಕಂಪನಿಗಳಿಗೆ 14 ಗಂಟೆ ಕೆಲಸದ ಅವಧಿ ಹೆಚ್ಚಳ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಖಚಿತ ಪಡಿಸಿದರು. ಇದನ್ನೂ ಓದಿ: ನನ್ನ ಕುಟುಂಬದ ತೇಜೋವಧೆಗೆ ಷಡ್ಯಂತ್ರ – ಬಿಡುಗಡೆ ಬಳಿಕ ಸೂರಜ್ ರೇವಣ್ಣ ಫಸ್ಟ್ ರಿಯಾಕ್ಷನ್
ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಸಚಿವ, 14 ಗಂಟೆ ಕೆಲಸದ ಅವಧಿ ಹೆಚ್ಚಳ ಮಾಡುವ ಪ್ರಸ್ತಾಪ ಎಲ್ಲಾ ಕಂಪನಿಗಳಿಗೆ ಅನ್ವಯ ಆಗುವುದಿಲ್ಲ. ಎಲ್ಲಾ ಕಂಪನಿಗಳಿಗೆ ಅನ್ವಯ ಆಗುತ್ತದೆ ಅಂತಾ ಸುದ್ದಿ ಹರಡಲಾಗುತ್ತಿದೆ. ಆದರೆ ಲಿಮಿಟ್ ಆಗಿರೊ ಕಂಪನಿಗಳಿಗೆ ಮಾತ್ರ ಇದು ಅನ್ವಯ ಆಗುತ್ತದೆ ಎಂದು ಹೇಳಿದರು.
ಯಾವ ಕಂಪನಿಗಳು 14 ಗಂಟೆ ಕೆಲಸದ ಅವಧಿಗೆ ಮನವಿ ಸಲ್ಲಿಕೆ ಮಾಡಿರುತ್ತದೆಯೋ ಅವರಿಗೆ ಮಾತ್ರ ಈ ಬಗ್ಗೆ ಅನುಮತಿ ನೀಡಲಾಗುತ್ತದೆ. ಎಲ್ಲಾ ಕಂಪನಿಗಳಿಗೆ ಇದು ಅನ್ವಯ ಆಗುತ್ತೆ ಅನ್ನೋದು ಸುಳ್ಳು ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬೆಳಗಾವಿಗೆ ವಂದೇ ಭಾರತ್ ರೈಲು ವಿಸ್ತರಣೆ ಇಲ್ಲ: ಎಂಬಿ ಪಾಟೀಲ್
ಏನಿದು ಪ್ರಕರಣ?
ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಉದ್ಯೋಗಿಗಳಿಗೆ ಕೆಲಸದ ಅವಧಿಯನ್ನು 14 ಗಂಟೆಗೆ ವಿಸ್ತರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಉದ್ಯಮಿಗಳು ಪ್ರಸ್ತಾಪ ಸಲ್ಲಿಸಿದ್ದರು.
ಈಗ ಇರುವ 12 ಗಂಟೆ ಕೆಲಸದ ಅವಧಿಯನ್ನು 2 ಗಂಟೆ ಹೆಚ್ಚಿಸಿ 14 ಗಂಟೆಗೆ ವಿಸ್ತರಣೆ ಮಾಡಲು ಅನುಕೂಲವಾಗುವಂತೆ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ-1961 ಕ್ಕೆ ತಿದ್ದುಪಡಿ ತರಬೇಕು ಎಂದು ಕಂಪನಿಗಳು ಪ್ರಸ್ತಾಪ ಸಲ್ಲಿಸಿದ್ದವು.