ಹುಬ್ಬಳ್ಳಿ: ಬೆಳಗಾವಿ (Belagavi) ಕರ್ನಾಟಕದ ಮಸ್ತಕ ಇದ್ದಂತೆ. ಇದು ಬಸವೇಶ್ವರ, ಅಕ್ಕ ಮಹಾದೇವಿ ಪರಂಪರೆಯ ನೆಲ. ಶೂರ, ವೀರರಿಗೆ ಜನ್ಮ ನೀಡಿದ ನೆಲ ಕರ್ನಾಟಕ (Karnataka) ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಬಣ್ಣಿಸಿದರು.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ರಾಣಿ ಚನ್ನಮ್ಮನ ಮಹಿಮೆ ವಿದೇಶಗಳಲ್ಲಿಯೂ ಇದೆ. ಚನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ. ವೇದಿಕೆಗೆ ಬರುವ ಮುಂಚೆ ನಾನು ರಾಯಣ್ಣನ ಪ್ರತಿಮೆ ಮತ್ತು ಸಮಾಧಿಗೂ ಮಾಲಾರ್ಪಣೆ ಮಾಡಿದೆ. ಇದು ನನ್ನ ಸೌಭಾಗ್ಯ. ವೀರತ್ವಕ್ಕೆ ಕರ್ನಾಟಕ ಹೆಸರುವಾಸಿ. ಕನ್ನಡಿಗ ಹನುಮಂತಪ್ಪ ಸಿಯಾಚಿಯಲ್ಲಿ ಹೋರಾಡಿದವರು. ಹನುಮಂತಪ್ಪನ ವೀರತ್ವ ಯಾರೂ ಮರೆಯೊಲ್ಲ. ಫಿಲ್ಡ್ ಮಾರ್ಷಲ್ ಕರಿಯಪ್ಪ ಸಹ ಹೆಸರುವಾಸಿ ಎಂದು ಹಾಡಿ ಹೊಗಳಿದರು. ಇದನ್ನೂ ಓದಿ: ಕಾಂಗ್ರೆಸ್ ಭಯದಿಂದ ಸರ್ಕಾರಿ ನೌಕರರ ಸಂಬಳ ಹೆಚ್ಚಳ: ಕ್ರೆಡಿಟ್ ತೆಗೆದುಕೊಂಡ ಡಿಕೆಶಿ
Advertisement
Advertisement
ಬೆಳಗಾವಿಯ ನೆಲದಲ್ಲಿ ನಾವು ಇವತ್ತು ಇದ್ದೇವೆ. ಇಂತಹ ಸ್ಥಳದಲ್ಲಿ ನಾವು ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ. ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ತರುವ ಸಂಕಲ್ಪ ಇಲ್ಲಿ ಮಾಡಬೇಕಿದೆ. ಕರ್ನಾಟಕದ ವಿಕಾಸ ಮೋದಿ ಮನಸ್ಸಿನಲ್ಲಿದೆ. ಅದಕ್ಕಾಗಿಯೇ ಕರ್ನಾಟಕಕ್ಕೆ ಅನೇಕ ಯೋಜನೆ ಕೊಟ್ಟಿದ್ದಾರೆ. ಕೈಗಾರಿಕಾ ಕಾರಿಡಾರ್ ಕೊಡುತ್ತಿದ್ದಾರೆ. ಇದರಿಂದ ಕರ್ನಾಟಕದ ಜನರಿಗೆ ಸಾಕಷ್ಟು ಅನುಕೂಲ ಆಗಲಿದೆ. ತುಮಕೂರಿನಲ್ಲಿ ಹೆಲಿಕ್ಯಾಪ್ಟರ್ ತಯಾರಿಕಾ ಘಟಕ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಈಗ ನೀರಿನ ಅಭಾವ ಇಲ್ಲ. ಪ್ರತಿ ಮನೆಗೆ ನೀರು, ಪ್ರತಿ ಜಮೀನಿಗೂ ನೀರಾವರಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
Advertisement
ಕಾಂಗ್ರೆಸ್‌ನ ಹೇಳಿಕೆಯಲ್ಲಿ ಮತ್ತು ಕೆಲಸದಲ್ಲಿ ಅಂತರ ಇದೆ. ಆದರೆ ಬಿಜೆಪಿ ಹೇಳಿದ್ದನ್ನು ಮಾಡಿ ತೋರಿಸುತ್ತದೆ. ಅದಕ್ಕಾಗಿ ಏನೇ ಅಡ್ಡಿಯಾದರೂ ಹಿಂದೆ ಸರಿಯುವುದಿಲ್ಲ. ನಾವು ಹೇಳಿದ್ದನ್ನು ಮಾಡಿಯೇ ಮಾಡುತ್ತೇವೆ. ಪ್ರಾಣ ಹೋದರೂ ಕೊಟ್ಟ ವಚನ ಬಿಡಲಾರೆವು. ಇದು ಬಿಜೆಪಿಯ ಧ್ಯೇಯ ವಾಕ್ಯ. ಇವತ್ತು ಭಾರತ ಏನಾದರೂ ಹೇಳಿದರೆ, ಜಗತ್ತು ಕಿವಿಗೊಟ್ಟು ಕೇಳುತ್ತದೆ. ಇಡೀ ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಾಗಿದೆ. ನಾವು ಭಯೋತ್ಪಾದನೆಯನ್ನೂ ಹೊಡೆದು ಹಾಕುತ್ತೇವೆ. ಪಿಎಫ್‌ಐ ಸಹ ಬ್ಯಾನ್ ಮಾಡಿದ್ದೇವೆ. ಭಯೋತ್ಪಾದಕರನ್ನು ನಾವು ಬಿಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನನಗೆ, ಕುಮಾರ ಬಂಗಾರಪ್ಪಗೆ ಇನ್ಮುಂದೆ ಅಣ್ಣ-ತಮ್ಮ ಎಂದು ಕರೆಯಬೇಡಿ : ಮಧು ಬಂಗಾರಪ್ಪ
Advertisement
ಕಾಂಗ್ರೆಸ್‌ನ ಓರ್ವ ಯುವ ನಾಯಕ (ರಾಹುಲ್ ಗಾಂಧಿ) ಇದ್ದಾರೆ ಗೊತ್ತಲ್ವಾ ನಿಮಗೆ. ಅವರು ಭಾರತ ಜೋಡೋ ಮಾಡುತ್ತಿದ್ದಾರೆ. ಅವರು ಭಾರತವನ್ನು ಜೋಡಿಸುವುದೇ ಆದಲ್ಲಿ ಕರಾಚಿ, ಲಾಹೋರ್‌ಗೆ ಹೋಗಬೇಕಿತ್ತು. ಭಾರತ ಯಾವತ್ತಿಗೂ ಒಂದಾಗಿಯೇ ಇದೆ. ಜನರ ಕಣ್ಣಲ್ಲಿ ಧೂಳು ಹಾರಿಸಿ ಆಡಳಿತ ಮಾಡೋದಲ್ಲ. ಜನರ ಕಣ್ಣಲ್ಲಿ ಕಣ್ಣಿಟ್ಟು ಆಡಳಿತ ಮಾಡಬೇಕು. ಅಂತಹ ಆಡಳಿತ ಮಾಡಿದ ಮೋದಿಯನ್ನು ಮುಗಿಸುತ್ತೇನೆ ಅಂತಾರೆ. ಆದರೆ ಮೋದಿಗೆ ಖೆಡ್ಡಾ ತೋಡೋಕೆ ಹೋದರೆ, ಅದು ತಮಗೆ ತಾವೇ ಖೆಡ್ಡಾ ತೋಡಿಕೊಂಡಂತೆ ಎಂದು ಎಚ್ಚರಿಸಿದರು.