ಬೆಂಗಳೂರು: ದೇಶದ ನೀತಿ ಆಯೋಗದ ಆವಿಷ್ಕಾರ ಸೂಚ್ಯಂಕದಲ್ಲಿ ಕರ್ನಾಟಕ (Karnataka) ಮೊದಲ ಸ್ಥಾನದಲ್ಲಿದೆ. ಅಲ್ಲದೇ ಐಟಿ- ಬಿಟಿ ಹಾಗೂ ನವೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕರ್ನಾಟಕ ಅದರಲ್ಲೂ ಬೆಂಗಳೂರು (Bengaluru) ದೇಶದ ತಂತ್ರಜ್ಞಾನ ವಲಯದ ಹೃದಯ ಬಡಿತವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಮಂಗಳವಾರ ನಡೆದ 27ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್ 2024ರ (Tech Summit 2024) ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ದೆಹಲಿ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೇ ಕರ್ನಾಟಕವು ಪೇಟೆಂಟ್ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಪೇಟೆಂಟ್ ಅರ್ಜಿಗಳ ಸಂಖ್ಯೆಯಲ್ಲಿ ಕರ್ನಾಟಕ ಇಡೀ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ಕರ್ನಾಟಕ ಮಾಹಿತಿ ತಂತ್ರಜ್ಞಾನದ ಜೊತೆಗೆ ಚಿಪ್ ವಿನ್ಯಾಸದಲ್ಲಿ ದೇಶದಲ್ಲಿಯೇ ತನ್ನದೇ ಆದ ಛಾಪು ಮೂಡಿಸಿದೆ ಎಂದರು. ಇದನ್ನೂ ಓದಿ: ತುಂಬಿ ಹರಿಯುತ್ತಿದ್ದ ಕಾಲುವೆಗೆ ಇಳಿದ ಗೂಡ್ಸ್ ಆಟೋ – ಕೂಲಿ ಕಾರ್ಮಿಕರು ಪಾರು
Advertisement
Advertisement
ಯಂತ್ರೋಪಕರಣಗಳ ತಯಾರಿಕೆಯಲ್ಲಿಯೂ ಕರ್ನಾಟಕ ಮುಂದಿದ್ದು, ಸುಮಾರು 85ಕ್ಕೂ ಹೆಚ್ಚು ಫ್ಯಾಬ್ಲೆಸ್ ಚಿಪ್ ವಿನ್ಯಾಸ ಘಟಕಗಳು ನಮ್ಮ ರಾಜ್ಯದಲ್ಲಿವೆ. ಸೆಮಿಕಂಡಕ್ಟರ್ ತಯಾರಿಕೆಗೆ ಕರ್ನಾಟಕವೇ ಆಧಾರ. ದೇಶದ ಜೈವಿಕ ತಂತ್ರಜ್ಞಾನ ವಲಯಕ್ಕೆ 52%ರಷ್ಟು ಉದ್ಯೋಗಿಗಳನ್ನು ಕರ್ನಾಟಕವೇ ಪೂರೈಕೆ ಮಾಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ನವೆಂಬರ್ ಅಂತ್ಯದಿಂದ ಡಿಸೆಂಬರ್‌ವರೆಗೂ ಅಧಿಕ ಚಳಿ: ಹವಾಮಾನ ತಜ್ಞ ಸಿ.ಎಸ್. ಪಾಟೀಲ್
Advertisement
ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿದ ಕಾರಣಕ್ಕೆ ಇಂದು ನಮ್ಮ ನಗರ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಹಲವಾರು ಶಿಕ್ಷಣತಜ್ಞರು ಹೆಸರಾಂತ ಎಂಜಿನಿಯರಿಂಗ್ ಕಾಲೇಜುಗಳು, ತಂತ್ರಜ್ಞಾನ ಸಂಸ್ಥೆಗಳನ್ನು ಸ್ಥಾಪಿಸಿದ ಕಾರಣಕ್ಕೆ ಇಂದು ಬೆಂಗಳೂರು ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದೆ. ಬೆಂಗಳೂರು ಬೆಳವಣಿಗೆಗೆ ನೆಹರು ಅವರು ಹಾಗೂ ಅನೇಕರ ದೂರದೃಷ್ಟಿಯ ಕೊಡುಗೆಯಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೊಲೆ ಯತ್ನ ಕೇಸ್; ನಟ ತಾಂಡವೇಶ್ವರ್ ಅರೆಸ್ಟ್- ಕಮಿಷನರ್ ದಯಾನಂದ್ ಹೇಳೋದೇನು?
Advertisement
ಅಜೀಂ ಪ್ರೇಮ್ ಜೀ ಅವರು ಮತ್ತು ನಾರಾಯಣ ಮೂರ್ತಿ ಅವರು ಬೆಂಗಳೂರು ಹೊರತು ಪಡಿಸಿ ಬೇರೆ ನಗರಗಳನ್ನು ಆಯ್ಕೆ ಮಾಡಿಕೊಂಡಿದ್ದರೆ ಬೆಂಗಳೂರು ಐಟಿ ಹಬ್ ಬೆಳೆಯುತ್ತಿರಲಿಲ್ಲ. ಸಾವಿರಾರು ಜನರು ತಮ್ಮ ಸ್ಟಾರ್ಟ್ಅಪ್‌ಗಳಿಗೆ ಬೆಂಗಳೂರನ್ನು ಆಯ್ಕೆ ಮಾಡದೇ ಇದ್ದಿದ್ದರೆ ಬೆಂಗಳೂರು ಲಕ್ಷಾಂತರ ಜನರಿಗೆ ಆಸರೆ ಒದಗಿಸುತ್ತಿರಲಿಲ್ಲ ಎಂದು ನುಡಿದರು. ಇದನ್ನೂ ಓದಿ: ಚಿತ್ರದುರ್ಗ| ಪತಿ ಸಾವಿನಿಂದ ಖಿನ್ನತೆ – ತಾಯಿ, ಮಗಳು ನೇಣಿಗೆ ಶರಣು
ಬೆಂಗಳೂರು ಟೆಕ್ ಸಮ್ಮಿಟ್ ನವೋದ್ಯಮಿಗಳು, ಉದ್ಯಮಿಗಳು, ತಂತ್ರಜ್ಞರು, ಸೃಜನಶೀಲರು ಮತ್ತು ಅಸಾಧಾರಣ ಕನಸುಗಾರರ ಸಮ್ಮೇಳನ. ಕರ್ನಾಟಕ ದಾರ್ಶನಿಕರ, ಆಧುನಿಕ ಚಿಂತಕರ ಭೂಮಿ. ಭಾರತದ ಐಟಿ ಕ್ರಾಂತಿಯ ಹಾಗೂ ಜೈವಿಕ ತಂತ್ರಜ್ಞಾನದ ಹುಟ್ಟೂರು. ಮಾಹಿತಿ ತಂತ್ರಜ್ಞಾನದ ಮೂಲಕ ನಮ್ಮ ರಾಜ್ಯದ ಹೆಸರು ಜಾಗತಿಕ ಮಟ್ಟದಲ್ಲಿದೆ ಎಂದರು. ಇದನ್ನೂ ಓದಿ: ಯು.ಟಿ.ಪಿ ಕಾಲುವೆ ಒಡೆದು 1 ತಿಂಗಳಾದ್ರೂ ದುರಸ್ತಿ ಮಾಡದ ಅಧಿಕಾರಿಗಳು- ಕಂಗಾಲಾದ ರೈತರು
ಕರ್ನಾಟಕವು ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್ಟೆಂಡೆಡ್ ರಿಯಾಲಿಟಿ ವಲಯಗಳಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸುತ್ತಿದೆ. ಈ ವಲಯದಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿರುವ ನಮ್ಮ ಕರ್ನಾಟಕವು 2025ರ ವೇಳೆಗೆ ಈ ಕ್ಷೇತ್ರದಲ್ಲಿ ಸುಮಾರು 25,000 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಿದೆ. ಈ ಕ್ಷೇತ್ರಕ್ಕೆ ಬೆಂಬಲವಾಗಿ ನಿಂತ ಪರಿಣಾಮ ಸುಮಾರು 70% ರಷ್ಟು ಉದ್ಯೋಗ ಸೃಷ್ಟಿಯಾಗಿಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: Tumakuru| ಶಾಲಾ ಶಿಕ್ಷಕಿಯ ವಾಹನ ಅಡ್ಡಗಟ್ಟಿ ಸರಗಳ್ಳತನ